
ಕುಲಾಲಸಮಾಜದ ಬಂಧುಗಳನ್ನು ಬಲಿಷ್ಠ ಗೊಳಿಸಲು ಪ್ರತಿಷ್ಠಾನ ಇನ್ನಷ್ಟು ಕಾರ್ಯ ನಿರ್ವಹಿಸಲಿ : ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಪಣಿಯೂರು
ಮುಂಬಯಿ : ಕುಲಾಲ ಪ್ರತಿಷ್ಠಾನ ರಿ. ಮಂಗಳೂರು ಇದರ ವತಿಯಿಂದ , ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ, ಮುಂಡ್ಕೂರು, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್, ಶ್ರೀ ವೀರನಾರಾಯಣ ದೇವಸ್ಥಾನ ಮುಂಬಯಿ ಭಕ್ತರು ಇವರ ಸಹಕಾರದೊಂದಿಗೆ ಡಿ. 10ರಂದು ಬೆಳಿಗ್ಗೆ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ವಿಜಯ ಕಲಾವಿದರು ಕಿನ್ನಿಗೋಳಿ ಇವರ ಕಲಾವಿದರಿಂದ “ಪಿರಾವುಡು ಒರಿ ಉಲ್ಲೆ . ತುಳು ನಾಟಕ ಪ್ರದರ್ಶನಗೊಂಡಿತು .
ನಾಟಕದ ಮಧ್ಯಂತರದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಇರಾನಿ ಚಾಲ್ ಮಲಾಡ್ ಪೂರ್ವ ಇದರ ಅಧ್ಯಕ್ಷರಾದ ಮೋಹನ್ ಜಿ ಬಂಗೇರ ಮತ್ತು ಅವರ ಪತ್ನಿ ಜಯ ಬಂಗೇರ ಇವರನ್ನು ಸನ್ಮಾನಿಸಲಾಯಿತು. ಹಾಗೂ
ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಕುಲಾಲ ಸಮಾಜದ ಕಲಾವಿದರಾದ ಸುರೇಶ್ ಕುಲಾಲ, ಸಾಣೂರು, ಸುಧಾಕರ ಸಾಲಿಯಾನ್ ಸಂಕಲಕರಿಯ, ಭಾಸ್ಕರ ಕುಲಾಲ್ ಪಕ್ಷಿಕೆರೆ, ನಿತೇಶ್ ಕುಲಾಲ್ ಕಾಂತವರ, ಕು. ಕೃತಿಕಾ ಕುಲಾಲ್ ಉಲ್ಲಂಜೆ ಮತ್ತು ವಿಜಯ ಕಲಾವಿದರ ತಂಡದ ರೂವಾರಿ ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ವರನ್ನು ವೇದಿಯಲ್ಲಿದ್ದ ಗಣ್ಯರು ಗೌರವಿಸಿದರು.

ಸನ್ಮಾನಿತರ ಬಗ್ಗೆ ಮಾತನಾಡಿದ ವಿಜಯ ಕಲಾವಿದರು ಶರದ್ ಶೆಟ್ಟಿ ಕಿನ್ನಿಗೋಳಿ ಅವರು ನಮ್ಮ ತಂಡದಲ್ಲಿ ಕುಲಾಲ ಸಮುದಾಯದ ಒಟ್ಟು ಎಂಟು ಮಂದಿ ಕಲಾವಿದರಿದ್ದು ಇಂದು ಉಪಸ್ಥಿತರಿದ್ದ ಐದು ಮಂದಿ ಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ. ಕುಲಾಲ ಸಮಜದಲ್ಲಿ ಇನ್ನೂ ಹೆಚ್ಚಿನ ಕಲಾವಿದರು ಹುಟ್ಟಿ ಬರಲಿ ಎಂದು ಹಾರೈಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಇದರ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ, ಯವರು ಮಾತನಾಡಿ ಗ್ರಾಮೀಣ ಪ್ರದೇಶದ ಕಲಾವಿದರು ಅರ್ಥಪೂರ್ಣ ನಾಟಕವನ್ನು ಸಮಾಜಕ್ಕೆ ನೀಡಿದ್ದಾರೆ ಕರ್ನಾಟಕದಲ್ಲಿ ಉತ್ತಮ ಸಂದೇಶವಿದೆ ನಾಟಕಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ ಮತ್ತು ಧರ್ಮ ಜಾಗೃತಿಗೊಳಿಸುತ್ತದೆ . ಮಲ್ನಾಡು ಪರಿಸರದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಧಾರ್ಮಿಕ ಸೇವಗಳನ್ನು ಮಾಡುತ್ತಾ ತುಳು ಕನ್ನಡಿಗರನ್ನು ಒಗ್ಗಟ್ಟು ಗೊಳಿಸಿದೆ. ಕಲೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂದು ನಡೆದ ನಾಟಕಕ್ಕೆ ವರಮಹಾಲಕ್ಷ್ಮಿ ಪೂಜಾ ಸಮಿತಿಯೇ ಸದಾ ಬೆಂಬಲವಾಗಿದೆ. ನಾಟಕದಲ್ಲಿ ಬಹಳಷ್ಟು ಕುಲಾಲ ಸಮಾಜದ ಕಲಾವಿದರು ಅಭಿನಯಿಸಿದ್ದಾರೆ ಅವರಿಗೆ ಪ್ರೋತ್ಸಾ ನೀಡುವ ನಿಟ್ಟಿನಲ್ಲಿ ಕುಲಾಲ ಪ್ರತಿಷ್ಠಾನ ಆಯೋಜಿಸಿದ ನಾಟಕಕ್ಕೆ ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಪ್ರೋತ್ಸಾಹ ನೀಡಿದ್ದಾರೆ. ಕುಲಾಲ ಸಮಾಜ ಬಂಧುಗಳನ್ನು ಇನ್ನಷ್ಟು ಬಲಿಷ್ಠ ಗೊಳ್ಳುವ ಕೆಲಸ ಪ್ರತಿಷ್ಠಾನದಿಂದ ನಡೆಯಲಿ ಎಂದು ನುಡಿದರು.
.
ವೇದಿಕೆಯಲ್ಲಿ ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಸಲಹೆಗಾರ ಪ್ರವೀಣ್ ಶೆಟ್ಟಿ ಕುರ್ಕಾಲ್.ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಇರಾನಿ ಚಾಲ್ ಮಲಾಡ್ ಇದರ ಕಾರ್ಯದರ್ಶಿ, ಹರೀಶ್ ಕರ್ಕೇರ, ಯಕ್ಷಗುರು ನಾಗೇಶ್ ಪೊಳಲಿ, ಹೋಟೆಲ್ ಉದ್ಯಮಿ ಪದ್ಮನಾಭ ಬಂಗೇರ, ಉದ್ಯಮಿ ಅಶೋಕ್ ಸಾಲ್ಯಾನ್, ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ ಉಪಾಧ್ಯಕ್ಷರಾದ ದಿನೇಶ್ ಬಂಗೇರ, ಕುಲಾಲ ಸಂಘ ಮುಂಬೈಯ ಯುವ ವಿಭಾಗದ ಬಿನೀತ್ ಗಿರೀಶ್. ಸಾಲ್ಯಾನ್, ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ ಡಾ. ಸುರೇಖಾ ರತನ್ ಕುಲಾಲ್, ಕುಲಾಲ ಸಂಘ ಮುಂಬೈಯ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿಉಮೇಶ್ ಬಂಗೇರ, ನಾರಾಯಣ್ ಸಾಲಿಯಾನ್ ಮಲಾಡ್ ವೇದಿಕೆಯಲ್ಲಿದ್ದರು.
ಕಾರ್ಯಕ್ರಮವನ್ನು ಸಂಘಟಕ ಬಿ. ದಿನೇಶ್ ಕುಲಾಲ ನಿರ್ವಹಿಸಿದ್ದು ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಇದರ ಕಾರ್ಯಚಟುವಟಿಕೆಗಳ ಮಾಹಿತಿಯಿತ್ತರು. ವಾಮನ್ ಅದ್ಯಪಾಡಿ, ಯೊಗೀಶ್ ಬಂಗೇರ, ರೋಹಿತ್ ಬಂಜನ್, ಕೃಷ್ಣ ಬಂಗೇರ ನಾಲಸಪೂರ್, ರತ್ನ ಕುಲಾಲ್. ಸುದೀಪ್ ಮಲಾಡ್. ಸುರೇಂದ್ರ ಮಲಾಡ್ ಮೊದಲಾದವರು ಗೌರವಿಸಿದರು .
ಕಲಾವಿದರಿಗೆ ಸನ್ಮಾನ ಸಂದರ್ಭದಲ್ಲಿ ಮಮತಾ ಗಿರೀಶ್ ಸಾಲಿಯಾನ್ . ಪುಷ್ಪಲತಾ ಸಾಲಿಯಾನ.ಗೀತಾ ಬಂಗೇರ .ಸುರೇಖಾ ಬಂಗಾರ. ರೇಣುಕಾ ಸಾಲಿಯಾನ್ .ಜಯಂತಿ ಬಂಗೇರ. ಶ್ರೀಮತಿ ಆಚಾರ್ಯ. ನಲಿನಿ ಕರ್ಕೇರ .ಭಾರತಿ ಆಚಾರ್ಯ. ಡಾ. ಶಶಿನ್ ಆಚಾರ್ಯ . ವೇಣುಗೋಪಾಲ್ ಕರ್ಕೇರ. ಮೊದಲಾದವರು ಪಾಲ್ಗೊಂಡಿದ್ದರು
———————-
ಕುಲಾಲ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ: ಮೋಹನ್ ಜಿ ಬಂಗೇರ
ಸನ್ಮಾನವನ್ನು ಸ್ವೀಕರಿಸಿ ಕೃತಜ್ನತೆ ಸಲ್ಲಿಸಿ ಮಾತನಾಡಿದ ಮೋಹನ್ ಬಂಗೇರ ಅವರು ಇಂದಿಲ್ಲಿ ಉತ್ತಮವಾದ ನಾಟಕವನ್ನು ಪ್ರದರ್ಶಿಸಲಾಗಿದೆ. ಊರಿನಿಂದ ಬಹಳ ನಿರೀಕ್ಷೆಯಿಂದ ಮುಂಬೈ ನಗರಕ್ಕೆ ಬಂದಿರುವ ನಾಟಕ ತಂಡಗಳಿಗೆ ಇಲ್ಲಿ ನಾಟಕ ಪ್ರದರ್ಶನಗೊಂಡಾಗ ನಾವೆಲ್ಲರೂ ಪ್ರೋತ್ಸಾಹಿಸೋಣ. ಮಲಾಡ್ ಗೋರೆಗಾಂವ್ ನ ಮಧ್ಯದಲ್ಲಿರುವ ಶನಿಮಂದಿರ ಮಹಾನಗರದಲ್ಲಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವೆಗಳನ್ನು ಮಾಡುತ್ತಾ ಪ್ರಸಿದ್ದನ್ನು ಪಡೆದಿದೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಶನಿಮಂದಿರದಲ್ಲಿ ನಡೆಸುತ್ತಾ ಬಂದಿದ್ದೇವೆ . ಇಲ್ಲಿ ನಡೆಯುವ ಸೇವ ಕಾರ್ಯಗಳನ್ನು ಗುರುತಿಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ನನ್ನನ್ನು ಬಹಳ ಅಭಿಮಾನದಿಂದ ಸನ್ಮಾನಿಸಿದ್ದಿ ಇರುವುದು ಸಂತಸ ತಂದಿದೆ ಈ ಕ್ಷೇತ್ರದಲ್ಲಿ ಬಹಳಷ್ಟು ಭಕ್ತರು ಬಂದು ಪ್ರಾರ್ಥಿಸುವವರ ಬೇಡಿಕೆ ಖಂಡಿತವಾಗಿ ಇಡೇರುತ್ತದೆ. ಈ ಕ್ಷೇತ್ರಕ್ಕೆ ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ. ಧಾರ್ಮಿಕ ಸೇವೆಯೊಂದಿಗೆ ನಾವು ಕ್ಷೇತ್ರದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ .. ಈ ಸನ್ಮಾನ ಶನಿಮಹಾತ್ಮ ಪೂಜಾ ಸಮಿತಿಯ ಸರ್ವರಿಗೆ ಸಲ್ಲುತ್ತದೆ ಕುಲಾಲ ಸಮಾಜದಲ್ಲಿ ಬೆಳೆದಿರುವ ನನ್ನನ್ನು ಪ್ರಥಮ ಬಾರಿಗೆ ಪ್ರತಿಷ್ಠಾನ ಗುರುತಿಸಿದೆ ನನ್ನ ಸೇವಾಕರಿಗಳು ಸಮಾಜಕ್ಕೆ ಸದಾ ಇದೆ ಎಂದು ನುಡಿದರು