24.7 C
Karnataka
April 3, 2025
ಪ್ರಕಟಣೆ

ಆಮ್ಮಿ ರಂಗಕರ್ಮಿ ( ರಿ ), ಮುಂಬಯಿ ಕೊಂಕಣಿಯಲ್ಲಿ ಜಯಭೇರಿ ಗಳಿಸಿದ ‘ ಲಗ್ನಾ ಪಿಶ್ಶ್ಯೆ ‘ ನಾಟಕ ತಂಡದ ಕರಾವಳಿ ಪ್ರವಾಸ (  26.12.23 ರಿಂದ 31.12.2023 ರ ವರೆಗೆ )



ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡಿನ ಅಪ್ರತಿಮ ಕೊಂಕಣಿ ಲೇಖಕ ಬಾಲಕೃಷ್ಣ ಪುರಾಣಿಕ ವಿರಚಿತ ‘ ಲಗ್ನಾ ಪಿಶ್ಶ್ಯೆ ‘ ಕೊಂಕಣಿ ನಾಟಕದ 6 ಪ್ರದರ್ಶನಗಳು ಲಿಮ್ಕಾ ಖ್ಯಾತಿ ಡಾI ಚಂದ್ರಶೇಖರ್ ಶೆಣೈ ಯವರ ಅನುಪಮ ನಿರ್ದೇಶನದಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಡಿ 26 ರಿಂದ 31 ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಕಾಶೀ ಮಠಾಧಿಪತಿ ಪರಮಪೂಜ್ಯ ಶ್ರೀಮದ್ ಸoಯಮೀಂದ್ರ ತೀರ್ಥ ಶ್ರೀಪಾದಂಗಳವರ ಬೆಂಗಳೂರು ನಲ್ಲಿ 2023 ರಲ್ಲಿ ಆಚರಿಸಲ್ಪಟ್ಟ ಶೋಭಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತದ ಅಂತರ್ಗತ ಗುರುಗಳ ಸಾನಿಧ್ಯದಲ್ಲಿ ಮತ್ತು ಅನುಗ್ರಗಳ ಮೇರೆಗೆ ‘ ಲಗ್ನಾ ಪಿಶ್ಶ್ಯೆ ‘ ನಾಟಕದ ಅದ್ವಿತೀಯ ಪ್ರದರ್ಶನವು ಕಾಶೀ ಮಠದ ಸಂಕಿರಣದಲ್ಲಿ ತಾರೀಖು 14.10.2023 ರಂದು ಅಪಾರ ಸಂಖ್ಯೆಯಲ್ಲಿ ನೆರೆದ ಕಲಾಭಿಮಾನಿಗಳ ಸಮ್ಮುಖ ಶ್ರೀ ದಯಾನಂದ ಪೈ ಅವರ ಸೌಜನ್ಯದಿಂದ ಯಶಸ್ವಿ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟಿತು. 

ತದನಂತರ 22.10.2023 ರಂದು ಮುಂಬಯಿಯ ಖಾರ ದಾಂಡಾದ ಶ್ರೀ ಭದ್ರಕಾಳಿ ಮಹಾಲಕ್ಷ್ಮಿ ದುರ್ಗಾ ಹೊನ್ನಮ್ಮ ದೇವಿಯ ದಿವ್ಯ ಚರಣಗಳಲ್ಲಿ ಈ ನಾಟಕವನ್ನು ಅರ್ಪಿಸಲಾಯಿತು. ಅಂತೆಯೇ, ಡಿಸೆಂಬರ್ 2 ರಂದು ದಹಿಸರ್ ಕಾಶೀ ಮಠದ ವಿಠ್ಠಲ್ ರಖುಮಾಯಿ ದೇವಸ್ಥಾನದಲ್ಲಿ ಕಿಕ್ಕಿರಿದು ನೆರೆದ ಕೊಂಕಣಿ ನಾಟಕಾಸಕ್ತರ ಉಪಸ್ಥಿತಿಯಲ್ಲಿ ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಆಶೀರ್ವಾದ ಗಳೊಂದಿಗೆ ‘ ಲಗ್ನಾ ಪಿಶ್ಶ್ಯೆ ‘ ನಾಟಕವನ್ನು ‘ ಗುರು ಕೃಪಾ ಕಲಾ ರಂಗ, ಶ್ರೀ ಕಾಶೀ ಮಠ, ದಹಿಸರ ಪ್ರಸ್ತುತ ಪಡಿಸಿ ಪ್ರೇಕ್ಷಕರು ನಾಟಕದ ಪಾತ್ರ ಪ್ರಪಂಚ ಆಯ್ಕೆ, ನಿರ್ದೇಶನ, ಕಲಾವಿದರ  ಅಭಿನಯ, ಸಂಗೀತ, ರಂಗವಿನ್ಯಾಸ ವೀಕ್ಷಿಸಿ, ಹಾಸ್ಯ ಚಟಾಕಿಗಳ ನಿರಂತರ ಸವಿಯನ್ನು ಅನುಭವಿಸಿ ಅತೀವ ಖುಷಿಯಿಂದ ಚಪ್ಪಾಳೆ ತಟ್ಟಿ ಪ್ರಶಂಸಿದರು.

‘ ಲಗ್ನಾ ಪಿಶ್ಶ್ಯೆ ‘ ಕೊಂಕಣಿ 6 ಪ್ರದರ್ಶನ ಗಳನ್ನು ತಂಡದ ಈ ವರ್ಷದ ಪ್ರವಾಸದ ಅಂತರ್ಗತ ‘ ಉದುಪಿ ‘ ( ಡಿ.26 ) ಸಿದ್ದಾಪುರ ( ಉಡುಪಿ ಜಿಲ್ಲೆ – ಡಿ .27), ಕುಂದಾಪುರ ( ಡಿ.28 ) ಶಿರಾಲಿ ( ಡಿ.29 ), ಭಟ್ಕಳ ( ಡಿ.30 ), ಮಂಗಳೂರು ( ಡಿ 31) ರಂದು ಪ್ರಾಯೋಜಿಸಲಾಗಿದೆ.

ನಾಟಕದ ಪಾತ್ರವರ್ಗದಲ್ಲಿ ಮುಂಬಯಿಯ ಖ್ಯಾತ ಕೊಂಕಣಿ – ಕನ್ನಡ ಹಾಸ್ಯ ರಂಗ ನಟ ಕಮಲಾಕ್ಷ ಸರಾಫ್, ಸಾರಸ್ವತ ಸಮಾಜದ ಜನಮಾನ್ಯ ರಂಗನಟ ಹರೀಶ್ ಚಂದಾವರ, ಯಕ್ಷಗಾನ ಕಲಾವಿದ ಹಿರಿಯ ರಂಗನಟ ತೋನ್ಸೆ ವೆಂಕಟೇಶ್ ಶೆಣೈ, ಬಹುಮುಖ ಪ್ರತಿಭೆಯ ನಾಟಕ ಹಾಗೂ ಯಕ್ಷಗಾನ ಕಲಾವಿದೆ ಅಕ್ಷತಾ ಕಾಮತ್, ಉದಯೋನ್ಮುಖ ಯುವ ಕಲಾವಿದ ಪ್ರಮೋದ್ ಮಲ್ಯ, ಅರ್ಚನಾ ಭಟ್ ಇನ್ನಿತರರು ಅಭಿನಯಿಸಲಿದ್ದಾರೆ.

ಸಾರಸ್ವತ ಸಮಾಜದ ಖ್ಯಾತ ಸಂಗೀತ ನಿರ್ದೇಶಕ ಕೃಷ್ಣ ಚಂದಾವರ್ ಸಂಗೀತ ನೀಡಲಿರುವರು. ತೋನ್ಸೆ ವೆಂಕಟೇಶ್ ಶೆಣೈ  ಸಹ ನಿರ್ದೇಶನದಲ್ಲಿ ವಿಶ್ವ ಕೊಂಕಣಿ ಪುರಸ್ಕೃತ  ಎ. ಜಿ. ಕಾಮತ್ ಇವರು ವಿಶೇಷ ಮಾರ್ಗದರ್ಶನ ನೀಡಿದ್ದಾರೆ. ರಂಗ ವಿನ್ಯಾಸ, ಬೆಳಕು, ದ್ವನಿ ನಿಯಂತ್ರಣ ಹಾಗೂ ಪಾರ್ಶ್ವ ಸಂಗೀತದ ಹೊಣೆಯನ್ನು ಸುಧಾಕರ ಭಟ್ ಇವರು ಹೊತ್ತಿದ್ದಾರೆ.

ಆಮ್ಮಿ ರಂಗಕರ್ಮಿ ( ರಿ ), ಮುಂಬಯಿ ವತಿಯಿಂದ N S Kamath, T V Shenoy ಹಾಗೂ Sudhakar Bhat ನಾಟಕದ ನಿರ್ಮಿತಿಯ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

 

———- 

Related posts

ಕಾಂತೇಶ್ವರ ದೇವಸ್ಥಾನ ಕಾಂತಾವರ ಜ14ರಿಂದ 23  ವರ್ಷಾವಧಿ ಜಾತ್ರೆ ರಥೋತ್ಸವ,

Mumbai News Desk

ಜು.21, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಆಚರಣೆ.

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಮಂಜೇಶ್ವರ : ಡಿ. 14ರಿಂದ 17ರ ತನಕ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವ

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk