
ಶ್ರೀ ಮಣಿಕಂಠ ಸೇವಾ ಸಮಿತಿ, ವಸಾಯಿ ಇದರ 22ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಡಿಸೆಂಬರ್ 13 ರಂದು ಬುಧವಾರ ವಸಯಿ (ಪ)ಆರ್ನ ಸ್ವರ್ಣ ಬಾಂಕ್ವೆಟ್ ಹಾಲ್, ದತ್ತನಿ ಮಾಲ್, ಸ್ಮಾರ್ಟ್ ಬಾಜರ್ ಹತ್ತಿರ, ಇಲ್ಲಿ ಜಯಶೀಲ ಗುರುಸ್ವಾಮಿ ಮೀರಾ ರೋಡ್ ಇವರ ದಿವ್ಯ ಹಸ್ತದಿಂದ ಮಹಾಪೂಜೆ ನಡೆಯಲಿದೆ.
ಬೆಳಿಗ್ಗೆ 06.30 ರಿಂದ : ಗಣಹೋಮ ಶ್ರೀ ಕೃಷ್ಣ ಭಟ್ ನಲ್ಲಸೋಪರ ಅವರಿಂದ.
ಬೆಳಿಗ್ಗೆ 09.00 ರಿಂದ 11.00ರ ತನಕ : ಭಜನಾ ಕಾರ್ಯಕ್ರಮ ಸ್ಥಳೀಯ ಮಹಿಳೆಯರಿಂದ
ಬೆಳಿಗ್ಗೆ 11.00 ರಿಂದ 12.00ರ ತನಕ * ಭಜನಾ ಕಾರ್ಯಕ್ರಮ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮೀರಾರೋಡ್. ಮಧ್ಯಾಹ್ನ 12.00 ರಿಂದ 01.30ರ ತನಕ – ಮಹಾಪೂಜೆ, ಮಂಗಳಾರತಿ ಆ ಬಳಿಕ ತೀರ್ಥ-ಪ್ರಸಾದ ವಿತರಣೆಮಧ್ಯಾಹ್ನ 01.30 ರಿಂದ 04.00ರ ತನಕ ಅನ್ನ ಸಂತರ್ಪಣೆ ನಡೆಯಲಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಮ್ಮೆಲ್ಲರ ತನು-ಮನ-ಧನಗಳ ಸಹಕಾರವನ್ನು ಅಪೇಕ್ಷಿಸುವುದರೊಂದಿಗೆ ಸದ್ರಿ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ತೀರ್ಥ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿ ಕರ್ನೂರು ಶಂಕರ್ ಆಳ್ವ (ಗೌರವ ಅಧ್ಯಕ್ಷ)ಯಶೋಧರ್ ವಿ. ಕೋಟ್ಯಾನ್ (ಅಧ್ಯಕ್ಷ)ಎಕ್ಕಾರ್ ದಿನೇಶ್ ಹೆಗ್ಡೆ (ಉಪಾಧ್ಯಕ್ಷ)ನಿತ್ಯಾನಂದ ಶೆಟ್ಟಿ (ಕಾರ್ಯದರ್ಶಿ)ದಿನೇಶ್ ಭಂಡಾರಿ (ಪೂಜಾ ಸಮಿತಿ ಸಲಹಾಗಾರ)ರಾಧಕೃಷ್ಣ ಶೆಟ್ಟಿ (ಖಜಾಂಚಿ)ಸುಧೀರ್ ಸಾಲ್ಯಾನ್ (ಜೊತೆ ಖಜಾಂಚಿ)ಉಮೇಶ್ ಕಾಂತಾವರ (ಪೂಜಾ ಸಮಿತಿ ಸಲಹಾಗಾರ) ಸದಸ್ಯರು ಭಕ್ತರು ವಿನಂತಿಸಿಕೊಂಡಿದ್ದಾರೆ
.
.