April 2, 2025
ಕರಾವಳಿ

ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ50,000 ರೂ. ದೇಣಿಗೆ ಘೋಷಣೆ

ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ
50,000 ರೂ. ದೇಣಿಗೆ ಘೋಷಣೆ
ಮುಂದಿನ ಭಾನುವಾರ ಕರಸೇವೆ ಮತ್ತು ಚೆಕ್ ಹಸ್ತಾಂತರ

ಬಂಟ್ವಾಳ: ಸಾಮಾಜಿಕ ಚಟುವಟಿಕೆಗಳ ಜೊತೆಗೆ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದಾಗ ಭಗವಂತನ ಕೃಪಾಶೀರ್ವಾದ ಪಡೆಯಲು ಸಾಧ್ಯ. ಡಿಸೆಂಬರ್ 17 ಭಾನುವಾರ ಬೆಳಿಗ್ಗೆ 7ರಿಂದ ಸಂಜೆಯವರೆಗೆ ವಿಶ್ವ ಗಾಣಿಗರ ಚಾವಡಿ (ರಿ.) ಟ್ರಸ್ಟ್ ತಂಡದ ಸದಸ್ಯರು ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದಲ್ಲಿ ಕರಸೇವೆ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ ಬ್ರಹ್ಮಕಲಶೋತ್ಸವ ಅಂಗವಾಗಿ ಟ್ರಸ್ಟ್ ವತಿಯಿಂದ 50,000 ರೂ. ಮೊತ್ತದ ಭಕ್ತಿದ ತುಡರ್ ಚೆಕ್ ಸೇವಾರೂಪದಲ್ಲಿ ಪರಮಪೂಜ್ಯ ಶ್ರೀ ದೇವು ಮೂಲ್ಯಣ್ಣನವರಿಗೆ ಹಸ್ತಾಂತರಿಸಲಾಗುವುದು. ಈ ಸೇವಾ ಕಾರ್ಯದಲ್ಲಿ ಗಾಣಿಗ ಸಮಾಜದ ಎಲ್ಲಾ ಬಂಧುಗಳು ಭಾಗವಹಿಸುವಂತೆ ವಿಶ್ವ ಗಾಣಿಗರ ಚಾವಡಿ (ರಿ.) ಟ್ರಸ್ಟ್ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ ತಿಳಿಸಿದರು.
ಅವರು ಭಾನುವಾರ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದ ವಿಜಿಸಿ(ರಿ.) ಟ್ರಸ್ಟ್ ವಾರ್ಷಿಕ ಮಹಾಸಭೆಯಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜಿಸಿ(ರಿ.) ಟ್ರಸ್ಟ್ ಸಮಾಜದಲ್ಲಿ ಕಾಮಧೇನುವಿನ ರೀತಿ ಕಾರ್ಯಾಚರಿಸುತ್ತಿದೆ. ಗೋವಿಗೆ ನಾವು ಹುಲ್ಲನ್ನು ನೀಡುತ್ತೇವೆ. ನಾವು ಉಪಯೋಗಿಸಿ ಎಸೆಯುವ ಅನ್ನದ ನೀರನ್ನು ಕೊಡುತ್ತೇವೆ. ಆದರೆ ಗೋವು ನಮಗೆ ಪವಿತ್ರ ಸೆಗಣಿ, ಗೋಮೂತ್ರ, ಹಾಲು ನೀಡುತ್ತಾಳೆ. ಈ ಹಾಲಿನಿಂದ ತುಪ್ಪ, ಬೆಣ್ಣೆ, ಮೊಸರು, ಇನ್ನಿತರ ಉತ್ಪನ್ನಗಳನ್ನ ನಾವು ಪಡೆಯುತ್ತೇವೆ. ಅದೇ ರೀತಿ ಸದಸ್ಯರು, ದಾನಿಗಳು ವಿಜಿಸಿ(ರಿ.) ಟ್ರಸ್ಟ್ ಎಂಬ ಕಾಮಧೇನುವಿಗೆ ಮಾಸಿಕ 100 ರೂ. ದೇಣಿಗೆ ಅಥವಾ ವಾರ್ಷಿಕ ದೇಣಿಗೆ 1200 ರೂ. ನೀಡಿ ಪೋಷಿಸಿದಾಗ ಅದರಿಂದ ಸಮಾಜಕ್ಕೆ ಶುಭಮಸ್ತು, ಆರೋಗ್ಯ ಸಂಜೀವಿನಿ, ಗೇನದ ತುಡರ್, ಭಕ್ತಿದ ತುಡರ್, ಚಾವಡಿದ ತುಡರ್ ಎಂಬ ಐದು ಸೇವಾ ಯೋಜನೆಗಳು ಹಾಗೂ ಇದರ ಜೊತೆಗೆ ರಕ್ತದಾನ, ನೇತ್ರದಾನ, ಶ್ರಮದಾನ ಮೂಲಕ ತನುಮನಧನ ಸೇವಾಕೈಂಕರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲು ಸಾಧ್ಯ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಎಂ ತಿಳಿಸಿದರು.
ಶೈಕ್ಷಣಿಕ ತರಬೇತಿ: ತಂಡದ ದಶಮಾನೋತ್ಸವ ಪ್ರಯುಕ್ತ ಗೇನದ ತುಡರ್ ಯೋಜನೆಯಡಿ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಶಿಬಿರ ನಡೆಸಲು ನಿರ್ಧರಿಸಲಾಯಿತು.
ವಾರ್ಷಿಕ ಕ್ರೀಡಾಕೂಟ: ಫೆಬ್ರವರಿ ತಿಂಗಳಲ್ಲಿ ತಂಡದ ವಾರ್ಷಿಕ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದ್ದು, ಪುರುಷರಿಗೆ ಕ್ರಿಕೆಟ್ ಮತ್ತು ಸಾರ್ವಜನಿಕ ವಿಭಾಗದಲ್ಲಿ ವಿವಿಧ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಗಿದೆ.
ಕೋಶಾಧಿಕಾರಿ ಹೇಮಲತಾ ಮೆಂಡನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಇದೇ ಸಂದರ್ಭದಲ್ಲಿ ವಿಜಿಸಿ(ರಿ.) ಟ್ರಸ್ಟ್ ಸದಸ್ಯರಿಗೆ ಉಳಿಯ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಬ್ರಹ್ಮಕಲಶೋತ್ಸವ ಆಮಂತ್ರಣ ನೀಡಲಾಯಿತು.
ಬ್ರಹ್ಮಕಲಶೋತ್ಸವ ಸಮತಿ ಪದಾಧಿಕಾರಿಗಳಾದ ಅಜಿತ್ ಕುಮಾರ್ ಶೆಟ್ಟಿ ಸೋಮೇಶ್ವರ, ರಾಮ್ ದಾಸ್ ಸೋಮೇಶ್ವರ, ಗಣೇಶ್ ಕಣೀರ್ ತೋಟ, ಶೇಖರ್ ಸೋಮೇಶ್ವರ, ವಿಜಿಸಿ(ರಿ.) ಟ್ರಸ್ಟ್ ಉಪಾಧ್ಯಕ್ಷ ಗಣೇಶ್ ಡಿ. ಶಂಭೂರು, ಕಾರ್ಯದರ್ಶಿ ಸಂದೀಪ್ ಎಸ್ ಮೆಂಡನ್, ಅನಂತ ವಿಜಯ ಕೆ ತುಂಬೆ, ರಕ್ಷಿತ್ ಉಳ್ಳಾಲ, ಪವನ್ ದೊಂಡೋಲೆ, ದೀಕ್ಷಿತ್ ಮಂಜೇಶ್ವರ, ಲತೀಶ್ ಕುಂಪಲ, ಸುಶ್ಮಿತಾ ಸುನೀಲ್ ಉಪ್ಪಿನಂಗಡಿ, ವಿನಯ ಅನಂತ ವಿಜಯ, ಭವ್ಯ ಮಂಜೇಶ್ವರ, ವನಿತಾ ಕರಿಂಗಾನ, ಸುಮಿತ್ರಾ ನೂಯಿ, ಹೇಮಾಂಬಿಕಾ ಎಸ್ ಮೆಂಡನ್, ವೀಕ್ಷಿತಾ ನರೇಶ್ ಬಾರಾಡಿ, ಮಿಥುನ್ ಸುವರ್ಣ ಕುಂಪಲ, ಹರಿಶ್ಚಂದ್ರ ಶಕ್ತಿನಗರ, ಕಿಶೋರ್ ನರಿಕೊಂಬು, ಮಾಯಾಕ್ಷಿ ಲತೀಶ್ ಕುಂಪಲ, ಶ್ರುತಿ ವಿಕಾಸ್ ತಲಪಾಡಿ, ಚಿತ್ರಾಕ್ಷಿ ಕೆಲಿಂಜ, ಅಕ್ಷಿತಾ ಮಿಥುನ್ ಕುಂಪಲ, ದೇವರಾಜ್ ಎಡಪದವು, ಯುವರಾಜ್ ಬೋಳಂಗಡಿ, ಉಷಾ ಯುವರಾಜ್, ಶ್ವೇತಾ ಎಸ್ ಬ್ರಹ್ಮರಕೂಟ್ಲು, ರಾಜೀವಿ ದೇವಂದಬೆಟ್ಟು, ಶರ್ಮಿಳಾ ಅಳಪೆ, ದೀಕ್ಷಿತಾ ಕುರ್ನಾಡು, ದೀಪಿಕಾ ಮಂಜೇಶ್ವರ, ಗೌತಮಿ ಮಂಜೇಶ್ವರ, ಲೋಹಿತ್ ಪೆರಾಜೆ, ಶೈಲೇಶ್ ಮಾಣಿ, ಸುಕೇಶ್ ಮಾಣಿ, ಪುರುಷೋತ್ತಮ ಮಾಣಿ, ಜಯಲಕ್ಷ್ಮೀ, ಮನ್ವಿತಾ ಮತ್ತಿತರರು ಉಪಸ್ಥಿತರಿದ್ದರು.

Related posts

ಗುರುಪುರ ಬಂಟರ ಮಾತೃ ಸಂಘ : ಬೃಹತ್ ರಕ್ತದಾನ ಶಿಬಿರ

Mumbai News Desk

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ ಅಭಿನಂದನಾ ಕಾರ್ಯಕ್ರಮ – ಸಿರಿತುಪ್ಪೆ

Mumbai News Desk

ಡಿ.25ಕ್ಕೆ ಆಶಾ ಪ್ರಕಾಶ್ ಶೆಟ್ಟಿ “ನೆರವು” ಪ್ರದಾನ ಕಾರ್ಯಕ್ರಮ 

Mumbai News Desk

ನಟ ರಕ್ಷಿತ್ ಶೆಟ್ಟಿ : ಕಾಪು ಮಾರಿಯಮ್ಮ ದರುಶನಗೈದು, ಜೀರ್ಣೋದ್ಧಾರ ಕಾರ್ಯ ವೀಕ್ಷಣೆ

Mumbai News Desk

ಗಂಗೊಳ್ಳಿಯಲ್ಲಿ ಮೀನುಗಾರಿಕೆ ಬೋಟುಗಳಿಗೆ ಬೆಂಕಿ, ಕೋಟ್ಯಾಂತರ ರೂಪಾಯಿ ನಷ್ಟ.

Mumbai News Desk

ಪ್ರಸಾದ್ ಎನ್ ಮೂಲ್ಯ 89.33% ಅಂಕ 

Mumbai News Desk