
ಕಾಪುವಿನ ಜನಪ್ರಿಯ ಸಮಾಜ ಸೇವಕ, ಹೆಸರಾಂತ ಕಲಾ ಸಂಸ್ಥೆ ಕಾಪು ರಂಗತರಂಗ ದ ಸ್ಟಾಪಕ, ನಿರ್ದೇಶಕ ಲೀಲಾದರ್ ಶೆಟ್ಟಿ ಮತ್ತು ಅವರ ಪತ್ನಿ ವಸುಂದರ ಅವರು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನೂ ದಿಗ್ರಮೆ ಗೋಳಿಸಿದೆ.
ಬಡವರಿಗೆ, ಕಷ್ಟದಲಿರುವವರಿಗೆ ,ಕಲಾವಿದರಿಗೆ ಸದಾ ಸಹಾಯ ಮಾಡಲು ಧಾವಿಸುತ್ತಿದ್ದ , ಅವರು ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಖ್ಯಾತ ನಾಟಕ ಸಂಸ್ಥೆ ಕಾಪು ರಂಗತರಂಗವನ್ನು ಸ್ಥಾಪಿಸಿ ,ಉತ್ತಮ ನಾಟಕಗಳ ಮೂಲಕ ರಾಜ್ಯ, ಹೊರರಾಜ್ಯದಲ್ಲೂ ಕಲಾಭಿಮಾನಿ ಅಭಿಮಾನಿಗಳನ್ನು ಲೀಲಾಧರ್ ಶೆಟ್ಟಿ ಹೊಂದಿದ್ದರು.
ಲೀಲಾಧರ್ ಶೆಟ್ಟಿ ಮತ್ತು ಅವರ ಪತ್ನಿಯ ಹಠಾತ್ ನಿಧನದಿಂದ ಅವರ ಅಭಿಮಾನಿಗಳು, ಕಲಾವಿದರು, ಕಲಾಭಿಮಾನಿಗಳು ದುಃಖಿತರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ (ಡಿ.13) 4 ಗಂಟೆಗೆ ನಡೆಯಲಿದೆ.