
ದಿವಾಕರ ಶೆಟ್ಟಿಗಾರ್ ಗುರುಸ್ವಾಮಿ 25ನೇ ಶಬರಿಮಲೆ ಯಾತ್ರೆ
ಮುಂಬೈ ಡಿ 14. ಮಲಾಡ್ ಪಶ್ಚಿಮದ ಧಾರ್ಮಿಕ ಮುಂದಾಳು ಸಮಾಜ ಸೇವಕ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಯವರು ಸ್ಥಾಪಿಸಿರುವ.ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್ ಪಶ್ಚಿಮ ಇದರ 28 ವರ್ಷದ ಅಯ್ಯಪ್ಪ ಮಹಾಪೂಜೆದಿನಾಂಕ 7-12.2023 ರಂದು ರವಿವಾರ ಕನ್ಯಾ ಶಾಲಾ ಮೈದಾನ ಪೊಲೀಸ್ ಸ್ಟೇಷನ್ ಹತ್ತಿರ, ಮಾಲಾಡ್ ಪಶ್ಚಿಮ ಮುಂಬೈ 400064 ಇಲ್ಲಿ ಜರಗಲಿದೆ.
ಬೆಳಿಗ್ಗೆ 4:00:15 ನಿಮಿಷಕ್ಕೆ ಅಯ್ಯಪ್ಪ ಮೂರ್ತಿ ಅಭಿಷೇಕ ಬಳಿಕ ಶರಣ ಘೋಷ ಅನಂತರ ಆರತಿ. ಬೆಳಿಗ್ಗೆ 6:00ಗೆ ನ ಬಳಿಕ ಶ್ರೀ ನಿತ್ಯಾನಂದ ಭಜನಾ ಮಂಡಳಿ ಕಲ್ಯಾಣ್ ಇದರ ಬುವಾಜಿ ದಯಾನಂದ ಮತ್ತು ಬಳಗದವರಿಂದ ಭಜನೆ ಅನಂತರ ಊರಿನಿಂದ ಆಗಮಿಸಿದ ಭಗವತಿ ಭಜನ ಮಂಡಳಿ ಕಾಜಿಲ ತಂಡದವರಿಂದ ಕುಣಿತ ಭಜನೆ ನಡೆಯಲಿದೆ 25ನೇ ವರ್ಷ ಯಾತ್ರೆ ಮಾಡುತ್ತಿರುವ ದಿವಾಕರ್ ಗುರುಸ್ವಾಮಿಯವರಿಗೆ ಗುರು ವಂದನೆ ಆ ಬಳಿಕ ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ
ಜನಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಯ್ಯಪ್ಪ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ಫಾಟ್ಲಾದೇವಿ ಶ್ರೀ ಸದ್ಗುರು ಅಯ್ಯಪ್ಪ ಟ್ರಸ್ಟ್ನ ತಿಸಿಕೊಂಡಿದೆ

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್ ಪಶ್ಚಿಮ ಇದರ ರೂವಾರಿ ದಿವಾಕರ ಗುರುಸ್ವಾಮಿಯವರು ಕಳೆದ 24 ವರ್ಷಗಳಿಂದ ನಿರಂತರವಾಗಿ ಶಬರಿಮಲೆ ಯಾತ್ರೆಗೆ ಗೈದು ಇದೀಗ 25ನೇ ವರ್ಷದ ಶಬರಿಮಲೆ ಯಾತ್ರೆಯ ಸಿದ್ಧತೆಯಲ್ಲಿದ್ದಾರೆ.
ಕೊಪ್ಪಳದಲ್ಲಿರುವ ಕಟಪಾಡಿ ದೂಜಿ ಶೆಟ್ಟಿಗಾರ ಮತ್ತು ಮುತ್ತು ಶೆಟ್ಟಿಗಾರ್ತಿ ದಂಪತಿಯ ಪುತ್ರರಾದ ದಿವಾಕರ ಶೆಟ್ಟಿಗಾರ್ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಗೈದು ಮುಂದೆ ಉದ್ಯೋಗ ನಿಮಿತ್ತ ಮುಂಬೈಗೆ ಬಂದು ಹೋಟೆಲ್ ನಲ್ಲಿ ಕೆಲಸ ಮಾಡಿ ನಂತರ ಮಲಾಡ್ ನಲ್ಲಿ ಕ್ಯಾಟ್ರಿಂಗ್ ಉದ್ಯಮ ಮತ್ತು ತನ್ನ ಸ್ವಂತ ಶ್ರೀ ಪಟ್ಲದೇವಿ ಜನರಲ್ ಸ್ಟೋರ್ಸ್ ಅನ್ನು ಸ್ಥಾಪಿಸಿದವರು. ದೈವ ಭಕ್ತರಾದ ದಿವಾಕರ ಗುರುಸ್ವಾಮಿ ಯವರು ಮಲ್ಯಾಡ್ ನ ಸೋಮವಾರ ಬಜಾರ್ ನಲ್ಲಿರುವ ಪೂಜೆ ಭಜನೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 1998ರಲ್ಲಿ ಶ್ರೀ ಗಣೇಶ್ ಗುರುಸ್ವಾಮಿ ಪ್ರಭಾಕರ ಶೆಟ್ಟಿ ಸ್ವಾಮಿ ಹಾಗೂ ರತ್ನಾಕರ್ ಶೆಟ್ಟಿ ಸ್ವಾಮಿ ಅವರೊಂದಿಗೆ ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದದ ಸ್ಥಾಪನೆ ನಂತರ ಮಾಲಾ ಧಾರಣೆ ಮಾಡಿ ಶಬರಿಮಲೆ ಯಾತ್ರೆ ಯಾತ್ರೆದು ಎರಡನೇ ಬಾರಿಗೆ ಶ್ರೀ ಗಣೇಶ ಗುರುಸ್ವಾಮಿಯವರ ಆಶೀರ್ವಾದ ದೊಂದಿಗೆ ಶಿಬಿರವನ್ನು ಸ್ಥಾಪಿಸಿ ಶಿಬಿರದ ಗುರುಸ್ವಾಮಿ ಆದರು ಅಂದಿನಿಂದ ಪ್ರತಿ ವರ್ಷ 10 – 20 ಸ್ವಾಮಿಗಳೊಂದಿಗೆ ಕಟ್ಟು ನಿಟ್ಟಾಗಿ ಶಬರಿಮಲೆಗೆ ತೆರಳುತ್ತಿರುವರು. ಮಾಲಾ ಧಾರಣೆ ಮಾಡಿ ಸತತ ಏರು ಮೇಲೆ ಯಿಂದ ಶಬರಿಮಲೆಗೆ ಪಾದಯಾತ್ರೆ ಮಾಡಿ ಮಕರ ಜ್ಯೋತಿಯ ದರ್ಶನ ಮಾಡುತ್ತಿದ್ದಾರೆ. ಕಳೆದ 51 ವರ್ಷಗಳಿಂದ ದಿವಾಕರ ಗುರುಸ್ವಾಮಿಯವರು ಕಲಾಮಂಡಲವನ್ನು, ಕನ್ನಡ ನವತಾರ ಕಲಾಮಂಡಲವನ್ನು ಸ್ಥಾಪಿಸಿ ಪರಿಸರದಲ್ಲಿ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ಸು ಪಡೆದವರು. ಪ್ರತಿ ವರ್ಷ ಕನ್ನಡ ನವತಾರ ಕಲಾಮಂಡಳದ ಮೂಲಕ ಮಹಾಪೂಜೆ ಅನ್ನ ಸಂತರ್ಪಣೆ ಹಾಗೂ ರಾತ್ರಿ ಯಕ್ಷಗಾನ ಬಯಲಾಟ ವನ್ನು ನಿರಂತರವಾಗಿ ಆಯೋಜಿಸಿ ಕೊಂಡು ಬರುತ್ತಿರುತ್ತಾರೆ. ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಭಕ್ತ ಅಭಿಮಾನಿಗಳ ಸಹಕಾರವನ್ನು ಅವರು ಸದಾ ಸ್ಮರಿಸುತ್ತಾರೆ. 25ನೇ ಶಬರಿಮಲೆ ಯಾತ್ರೆಯ ವೃತಾಚಾರಣೆಯಲ್ಲಿದ್ದು ಶಬರಿಮಲೆ ಯಾತ್ರೆ ಮಾಡಲಿರುವರು. ಬಾಲ್ಯದಲ್ಲಿ ಧಾರ್ಮಿಕತೆಯನ್ನು ತನ್ನಲ್ಲಿ ಮೈಗೂಡಿಸಿಕೊಂಡು ಅವರು ಈಗಲೂ ಇದನ್ನು ಮುಂದುವರಿಸಿಕೊಂಡು ಬಂದಿರುವರು. ಭಜನಾಪ್ರಿಯರಾದ ಇವರು ಪರಿಸರದಲ್ಲಿ ನಡೆಯುವ ಭಜನಾ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೀ ಪಾಟ್ಲಾದೇವಿಯ ಪರಮ ಭಕ್ತರಾದ ಮುಟ್ಟು ಕೊಪ್ಪಳ ಕಟ್ಪಾಡಿ ದಿವಾಕರ ಗುರುಸ್ವಾಮಿಯವರು 1991ರಲ್ಲಿ ಕೇಶವ ಶೆಟ್ಟಿಗಾರರಾದ ಶೆಟ್ಟಿಗಾರ ರ ಮಗಳಾದ ತುಳಸಿಯವರನ್ನು ವಿವಾಹವಾಗಿ ಎರಡು ಹೆಣ್ಣು ಮಕ್ಕಳು, ಒಬ್ಬ ಮಗನನ್ನು ಪಡೆದಿದ್ದು ಸಂತೃಪ್ತ ಸಂಸಾರ ಇವರದ್ದು. ಮಕ್ಕಳಾದ ದಿವ್ಯಶ್ರೀ, ಶಿಲ್ಪಾಶ್ರೀ ಎಂ.ಕಾಂ. ಸಿ. ಎಸ್ . ವ್ಯಸಂಗ ಮಾಡುತ್ತಿದ್ದಾರೆ. ಸುಪುತ್ರ ಅಂಜನ್ ಡಿ ಶೆಟ್ಟಿಗಾರ್ ಇಂಜಿನಿಯರಿಂಗ್ ಉನ್ನತ ಹುದ್ದೆಯಲ್ಲಿರುವರು.
ಮಲಾಡ್ ಪಶ್ಚಿಮ ಪಟ್ಲಾದೇವಿಯ ಪಕ್ಕದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಶಿಬಿರ ಮಾಡಿ ಪ್ರತಿ ಶನಿವಾರ ಭಕ್ತರ ಪಡಿಪೂಜೆ ಹಾಗೂ ಅನ್ನ ಸಂತರ್ಪಣೆ ಹಾಗೂ ಹರಕೆ ಯನ್ನು ಮಾಡಲಾಗುತ್ತಿದೆ. ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದದ ಸ್ಥಾಪಕರಾದ ಪ್ರಭಾಕರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಹಾಗೂ ಹರೀಶ್ ಬಿ ಶೆಟ್ಟಿ ಯವರು ಶ್ರೀ ಗಣೇಶ್ ಗುರುಸ್ವಾಮಿ ಅವರ ಆಶೀರ್ವಾದದಿಂದ ನಡೆಸಲಾಗುತ್ತದೆ. ಸುರೇಂದ್ರ ಶೆಟ್ಟಿ ಸಿಎ ಗೌರವ ಅಧ್ಯಕ್ಷರು, ಜಯಂತ್ ಎಸ್ ಶೆಟ್ಟಿ ಅವರು ಅಧ್ಯಕ್ಷ ಸ್ಥಾನದಲ್ಲಿದ್ದಾರೆ.ಅರುಣ್ ಸಿ ಬಂಗೇರ ಪ್ರಶಾಂತ್ ಶೆಟ್ಟಿ, ಅವಿತ್ ಶೆಟ್ಟಿ ಚಂದ್ರಶೇಖರ್ ಶೆಟ್ಟಿ ಸುರೇಶ್ ಶೆಟ್ಟಿ ಮಲ್ನಾಡ್, ಗಂಗಾಧರ ಶೆಟ್ಟಿ ಲಿಂಕಿಂಗ್ ರೋಡ್, ಶಂಕರ್ ಶೆಟ್ಟಿ ಸೋಮವಾರ ಬಜಾರ್, ಸದಾಶಿವ ಬಂಗೇರ ವೀರಾಲ್ ಸದಾ ಭಂಡಾರಿ ಸೋಮವಾರ ಬಜಾರ್ ಸುಧೀರ್ ಭಂಡಾರಿ ಹರಿಶ್ಚಂದ್ರ ಹೆಗ್ಡೆ ಲೋಕಂಡವಾಳ ವಿಶ್ವನಾಥ್ ಕುಲಾಲ್ , ಪಾಟ್ಲಾದೇವಿ ಮಲಾಡ್ ಮನೋಜ್ ಹೋದೆ ರಾಮಲಾಲ್ ಪಾಂಡುರಂಗ ಎಸ್ ಶೆಟ್ಟಿ ಕಾಂಧಿವಲ್ಲಿ ಪ್ರಭಾಕರ್ ಪೂಜಾ ಗಣೇಶ್, ಎಲ್ ಬಿ ಬಂಗೇರ ಲಿಂಕ್ ಪ್ಯಾಲೇಸ್, ವಿಜಯ ಬಂಡಾರಿ ಸಂದೀಪ್ ಶೆಟ್ಟಿ ಜನರಲ್ ಸ್ಟೋರ್ಸ್, ರಾಮಚಂದ್ರ ಮಲಾಡ್ ಇವರು ಸೇವೆ ಸಲ್ಲಿಸುತ್ತಿದ್ದಾರೆ ಡಿಸೆಂಬರ್ 17ರಂದು ರವಿವಾರ ನಡೆಯಲಿರುವ 28ನೇ ವಾರ್ಷಿಕ ಅಯ್ಯಪ್ಪ ಮಹಾಸಭೆಯ ಸುಸಂದರ್ಭದಲ್ಲಿ ಭಕ್ತಾಭಿಮಾನಿಗಳು, ಅತಿಥಿಗಳ ಸಮ್ಮುಖದಲ್ಲಿ ನಡೆಯಲಿರುವ ಪೂಜೆ ಮತ್ತು ಕಟ್ಪಾಡಿ ದಿವಾಕರ ಗುರುಸ್ವಾಮಿ ಅವರ ಪರಮಪೂಜ್ಯ ಗುರು ಗಳಾದ ಶ್ರೀ ಗಣೇಶ್ ಗುರುಸ್ವಾಮಿ ಠಾಣೆ ಈರಾನಂದಾನಿ ಅವರನ್ನು ಅವರ ಶಿಷ್ಯರಾದ ಶ್ರೀ ದಿವಾಕರ ಗುರುಸ್ವಾಮಿ ಅವರು 25ನೇ ವರ್ಷದ ಶ್ರೀ ಅಯ್ಯಪ್ಪ ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಸನ್ಮಾನಿಸಲಾಗಿರುವರು ಹಾಗೂ ಮಾಲಾರ್ಪಣೆ ಮಾಡಿದ ಶಿಬಿರಗಳ ಗುರುಸ್ವಾಮಿಗಳಿಗೆ ಗಳಿಗೂ ಗೌರವಿಸಲಾಗುವುದು