September 6, 2026
Mumbai News Kannada
ಪ್ರಕಟಣೆ

ಪತ್ರಕರ್ತ ಪ್ರದೀಪ್ ಕುಮಾರೈ ಐಕಳಬಾವರವರಿಗೆ ಸುಳ್ಯ ಬಂಟರ ಸಂಘದಿಂದ ಸನ್ಮಾನ





  ಮಂಗಳೂರಿನ  ಡಿ. 31: ಪ್ರದೀಪ್‌ ಕುಮಾರ್‌ ರೈ  ಅವರಿಗೆ ಸನ್ಮಾನ ಮಂಗಳೂರು: ಸುಳ್ಯ ಬಂಟರ ಯಾನೆ ನಾಡವರ ಸಂಘದಿಂದ ಡಿ. 31ರಂದು ಸಂಘದ ಬಂಟರ ಭವನದಲ್ಲಿ ಬಂಟ ಸಮಾವೇಶ ನಡೆಯಲಿದ್ದು, ಈ ಸಂದರ್ಭದಲ್ಲಿ ಬಂಟರ ವಾಹಿನಿ ಸುದ್ದಿ ಮಾಸಪತ್ರಿಕೆಯ ಸಂಪಾದಕರಾದ. ಪತ್ರಕರ್ತ ಪ್ರದೀಪ್‌ ಕುಮಾರ್‌ ರೈ ಐಕಳಬಾವ ಅವರಿಗೆ ಸನ್ಮಾನ ನಡೆಯಲಿದೆ. ಪತ್ರಿಕಾರಂಗದಲ್ಲಿ ಅವರು ಮಾಡುತ್ತಿರುವ ಸಾಧನೆ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ. ಇವರ ಜತೆಗೆ ಇನ್ನೂ ಹಲವಾರು ಮಂದಿಗೆ ಸನ್ಮಾನ ನಡೆಯಲಿದೆ. ಅಂದು ಇಡೀ ದಿನ  ಕಾರ್ಯಕ್ರಮ ನಡೆಯಲಿದೆ.  ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್‌ ಕುಮಾರ್‌, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ,,  ಮಂಗಳೂರಿನ ಹಿರಿಯ ಉದ್ಯಮಿ ಡಾ। ಎ. ಸದಾನಂದ ಶೆಟ್ಟಿ, ಶಾಸಕರಾದ ಅಶೋಕ್‌ ಕುಮಾರ್‌ ರೈ, ಭಾಗೀರಥಿ ಮುರುಳ್ಯ, ಮಾಜಿ ಸಚಿವ ಬಿ. ರಮಾನಾಥ ರೈ, ಬೆಂಗಳೂರು  ಬಂಟರ ಸಂಘದ ಅಧ್ಯಕ್ಷ ಮುರಳೀಧರ ಹೆಗ್ಡೆ,  ಗೃಹ ನಿರ್ಮಾಣ ಸಹಕಾರಿ  ಸಂಘ ಬೆಂಗಳೂರು  ಇದರ ಅಧ್ಯಕ್ಷ ಗುರುಪ್ರಸಾದ್‌ ರೈ ಮೊರಂಗಲ್ಲು, ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ,  ಎಣ್ಣೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಅದಿ ಬೈದೇರುಗಳ ಗರಡಿಯ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ವಿದ್ಮಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ  ಸೀತಾರಾಮ ರೈ ಸವಣೂರು, ಸುಳ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್‌ ಶೆಟ್ಟಿ ಮುಂತಾದವರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿರುವರು.



Related posts

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಜುಪಾಡ, ಕುರ್ಲಾ (ಪ ) : ಅ.25ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Mumbai News Desk

ಡೊಂಬಿವಲಿ: ಆ. 9 ರಂದು ‘ಕರ್ಣಬೇಧನ- ಕರ್ಣಾವಸಾನ’ ಯಕ್ಷಗಾನ ತಾಳಮದ್ದಳೆ

Mumbai News Desk

ಜ.7 ರಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ ಇದರ 41ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

Mumbai News Desk

ಶ್ರೀ ಹಟ್ಟಿಯಂಗಡಿ ಮೇಳದ ಹನ್ನೆರಡನೇ ವರ್ಷದ ಮುಂಬಯಿ ಪ್ರವಾಸ: ಜುಲೈ 10 ರಿಂದ 25 ರವರೆಗೆ ಯಕ್ಷಗಾನ ವೈಭವ

Mumbai News Desk

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಅಗಸ್ಟ್ 3 ರಂದು ಯಕ್ಷಗಾನ ತಾಳಮದ್ದಳೆ

Mumbai News Desk