
ಮುಲ್ಕಿ: ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಇಂಡಿಯನ್ ರೋಡ್ ಕಾಂಗ್ರೆಸ್ ಇದರ 82 ನೇ ಸಭೆಯಲ್ಲಿ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಬಪ್ಪನಾಡು ಜಂಕ್ಷನ್ ನಿಂದ ಕೊಲ್ನಾಡು ಜಂಕ್ಷನ್ ವರೆಗೆ 5 ಡೇಂಜರ್ ಜೋನ್ ಗಳ ಸಮಸ್ಯೆ ನಿವಾರಣೆಯ ಬಗ್ಗೆ ಇಂಜಿನಿಯರ್ ಮೂಲ್ಕಿ ಜೀವನ್ ಕೆ. ಶೆಟ್ಟಿ , ಮನವಿಯನ್ನು ನೀಡಿದ್ದಾರೆ.
ಗುಜರಾತ್ ಗಾಂಧಿ ನಗರದ ಮಹಾತ್ಮ ಮಂದಿರ ಕನ್ವೆನ್ಷನ್ ಮತ್ತು ಎಕ್ಸಿಹಿಬಿಷನ್ ಸೆಂಟರ್ ನಲ್ಲಿ ಡಿ 2 ರಿಂದ 5 ರವರೆಗೆ ನಡೆದ 82ನೇ ವಾರ್ಷಿಕ ಸಭೆಯಲ್ಲಿ ಶಾರದಾ ಇನ್ಫ್ರಾ ಡಿಸೈನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರು, ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಸ್ಥಾಪಕ ಅಧ್ಯಕ್ಷ ಹಾಗೂ ಇಂಡಿಯನ್ ರೋಡ್ ಕಾಂಗ್ರೆಸ್ (IRC) ಇದರ ಸದಸ್ಯರಾದ ಮೂಲ್ಕಿ ಜೀವನ್ ಕೆ.ಶೆಟ್ಟಿ ಅವರು ಭಾಗವಹಿಸಿ ಮೂಲ್ಕಿಯ ಹೆದ್ದಾರಿಯ 5 ಡೆಂಜರ್ ಜೋನ್ ಗಳ ಬಗ್ಗೆ ವಿವರಿಸಿ ಪರ್ಯಾಯ ವ್ಯವಸ್ಥೆಯಾಗಿ ಅಂಡರ್ ಪಾಸ್ ಮತ್ತು ಬಪ್ಪನಾಡು ಶಾಂಭವಿ ಸೇತುವೆ ಯಿಂದ ಕೊಲ್ನಾಡು ಜಂಕ್ಷನ್ ವರೆಗೆ ಸರ್ವಿಸ್ ರೋಡ್ ಅತ್ಯವಶ್ಯಕತೆಯಿದೆ ಎಂದು ತಿಳಿಸಿದರು.
ಇಂಡಿಯನ್ ರೋಡ್ ಕಾಂಗ್ರೆಸ್ ಹಾಗೂ ಡೈರೆಕ್ಟರ್ ಜನರಲ್, ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್ ಪೋರ್ಟ್ ಆಂಡ್ ಹೈವೇಸ್ (MORTH) ಆದ ಎಸ್. ಕೆ. ನಿರ್ಮಲ್ ಇವರಿಗೆ ಮನವಿಯನ್ನು ಡಿ 4 ರಂದು ಒಪ್ಪಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಅವರು ಚೆರ್ ಮೆನ್- ಎನ್ ಹೆಚ್ಎಐ (NHAI) ಇವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಪಂಕಜ್ ಅಗರ್ವಾಲ್,ಚೀಫ್ ಇಂಜಿನಿಯರ್, ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ ಸ್ಪೋರ್ಟ್ ಮತ್ತು ಹೈವೇಸ್ ಇವರು ಉಪಸ್ಥಿತರಿದ್ದರು.