
ಈ ಮಂಡಳಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ – ಆನಂದ್ ಶೆಟ್ಟಿ ಎಕ್ಕಾರು.
ಇವರ ಪ್ರೀತಿ ಆದರ ಕಂಡು, ತುಂಬಾ ಸಂತೋಷ ವಾಗುತ್ತದೆ, ಇವರಿಂದ ನಾವು ಕಲಿಯಬೇಕಾದುದು ತುಂಬಾ ಇದೆ ಅನಿಸುತ್ತದೆ, ಇವರಿಗೆ ಆ ಅಯ್ಯಪ್ಪ ಸ್ವಾಮಿಯ ಅನುಗ್ರಹ ಸದಾ ಇರಲಿ, ಈ ಮಂಡಳಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಎಂದು ಸಭಾಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಡೊಂಬಿವಲಿ, ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಅನಂದ್ ಶೆಟ್ಟಿ ಎಕ್ಕಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಇವರು ಮುಂಬಯಿ ಉಪನಗರ ಡೊಂಬಿವಲಿ ಪಶ್ಚಿಮದ ಟಿಲ್ಕಸ್ ವಾಡಿಯ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ, ಇವರ ವ್ಯವಸ್ಥಾಪಕತ್ವ ಹಾಗೂ ಸಂಯೋಜನೆಯಲ್ಲಿ ದಶಮಾನೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್ 17 ರ ಭಾನುವಾರ ಡೊಂಬಿವಲಿ ಪಶ್ಚಿಮದ ಜನ ಗಣ ಮನ ಶಾಲಾ ವಠಾರದಲ್ಲಿ ಸಿರಿಕಲಾಮೇಳ (ರಿ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಕಂಸ ದಿಗ್ವಿಜಯ ಕಂಸ ವಧೆ” ಪೌರಾಣಿಕ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
ಮೊದಲಿಗೆ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.



ಶ್ರೀ ರಾಧಾಕೃಷ್ಣಶನೀಶ್ವರ ಮಂದಿರ, ಡೊಂಬಿವಲಿಯ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ ಭಟ್ ಕಾನಾಂಗಿ ಶುಭ ಆಶೀರ್ವಚನ ನೀಡಿದರು,
ಶರತ್ ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ರಾಜೇಶ್ ಗೌಡ ಸಿಂದೂರ ಮಾತನಾಡುತ್ತ ಮಂಡಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಜನಗಣ ಮನ ಶಾಲೆ ಹಾಗೂ ಕಾಲೇಜಿನ ಸ್ಥಾಪಕರಾದ ಡಾ. ರಾಜ್ ಕುಮಾರ್ ಕೋಲ್ಹೆ ಹಾಗೂ ಡಾ ಪ್ರೇರಣ ಆರ್ ಕೋಲ್ಹೆ ಅವರನ್ನು ಸನ್ಮಾನಿಸಲಾಯಿತು.
ಮಂಡಳಿಯ ಸ್ಥಾಪನೆ ಹಾಗೂ ಪೂಜಾ ಕಾರ್ಯದಲ್ಲಿ ವಿಶೇಷ ಸಹಕಾರ ನೀಡುತ್ತಿರುವ ತಾಯಿ ಶಾರದಾ ಮೊಗವೀರ ಅವರನ್ನು ಸತ್ಕರಿಸಲಾಯಿತು.
ಶರತ್ ಗುರುಸ್ವಾಮಿ ಹಾಗೂ ಅವರ ಶಿಷ್ಯಂದಿರಾದ ದಿನೇಶ್ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಸುಧಾಕರ ಸ್ವಾಮಿ, ಹರೀಶ್ ಸ್ವಾಮಿ ಅವರನ್ನು ಗೌರವಿಸಲಾಯಿತು.
ಮಂಡಳಿಯ ಸ್ಥಾಪನೆಯಾದಂದಿನಿಂದ ವಿಶೇಷ ಕೊಡುಗೆ ನೀಡಿದ್ದ ದಿವಂಗತ ಗಿರೀಶ್ ಪೂಜಾರಿ ಅವರ ಕೊಡುಗೆಯನ್ನು ಸ್ಮರಿಸಿ ಅವರ ಧರ್ಮಪತ್ನಿ ಶ್ರೀಮತಿ ಶೋಭಾ ಪೂಜಾರಿ ಅವರನ್ನು ಗೌರವಿಸಲಾಯಿತು.






ಅತಿಥಿ ಗಣ್ಯರುಗಳಾಗಿ ಕಲ್ಯಾಣ್ ನ ಪ್ರತಿಷ್ಠಿತ ಹೋಟೆಲ್ ಉದ್ಯಮಿ, ಸುಧೀರ್ ಶೆಟ್ಟಿ ವಂಡ್ಸೆ, ಪ್ರೀತಿ ಬ್ಯಾಂಕ್ವೆಟ್ ಹಾಲ್, ಡೊಂಬಿವಲಿಯ ಲಕ್ಷ್ಮಣ ಪೂಜಾರಿ, ಉದ್ಯಮಿ, ಹೋಟೆಲ್ ರಂಜೀತ್ ಪ್ಯಾಲೇಸ್, ಡೊಂಬಿವಲಿಯ ಗಣೇಶ ಶೆಟ್ಟಿ, ಹೊಟೇಲ್ ಉದ್ಯಮಿ, ಕಲಾಪೋಷಕರು ಕಲ್ಯಾಣ್ ನ ಶ್ರೀ ಅನಿಲ್ ಶೆಟ್ಟಿ,
ಹೊಟೇಲ್ ಸಾಯಿರಾಜ್, ಡೊಂಬಿವಲಿಯ ಜಯರಾಮ ಶೆಟ್ಟಿ, ಹೊಟೇಲ್ ಇಗೋ, ಡೊಂಬಿವಲಿಯ ಸತೀಶ್ ಶೆಟ್ಟಿ, ಜಗಜ್ಯೋತಿ ಕಲಾವೃಂದ, ಡೊಂಬಿವಲಿಯ ಅಧ್ಯಕ್ಷರಾದ ರಮೇಶ ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ, ಹೋಬಳಿ, ಮುಂಬೈ ಯ ಅದ್ಯಕ್ಷರಾದ ರಾಜು ಮೆಂಡನ್ ವಂಡ್ಸೆ, ಸಾಯಿನಾಥ್ ಮಿತ್ರ ಮಂಡಳಿ, ಡೊಂಬಿವಲಿ ಅಧ್ಯಕ್ಷರಾದ ಮೋಹನ ಸಾಲ್ಯಾನ್, ಡೊಂಬಿವಲಿಯ ಕಲಾಪೋಷಕರಾದ ಶ್ರೀಮತಿ ಪ್ರಫುಲ್ಲ ದಿನೇಶ ಪೂಜಾರಿ, ಪವನ್ ಜ್ಯುವೆಲ್ಲರ್ಸ್, ಡೊಂಬಿವಲಿಯ ಪುರುಷೋತ್ತಮ ಆಚಾರ್ಯ, ಸಮಾಜ ಸೇವಕರಾದ ಡೊಂಬಿವಲಿಯ ಗಣೇಶ ಮೊಗವೀರ, ಜಗದಂಬಾ ಮಂದಿರ, ಡೊಂಬಿವಲಿಯ ಸಾಂಸ್ಕೃತಿಕ ಕಾರ್ಯಾಧ್ಯಕ್ಷರಾದ ವಿಜಯ ಶೆಟ್ಟಿ ಸಜೀಪ ಗುತ್ತು, ಡೊಂಬಿವಲಿಯ ಕಲಾ ಸೇವಕರಾದ ಗೋಪಾಲ ಕೋಟ್ಯಾನ್, ಖ್ಯಾತ ಕ್ಯಾಟರಿಂಗ್ ಉದ್ಯಮಿ, ಡೊಂಬಿವಲಿಯ ಸತೀಶ ಸುವರ್ಣ, ಡೊಂಬಿವಲಿಯ ಕಲಾಪೋಷಕರು ಆದ ಶ್ರೀಮತಿ ಸುಮಿತ್ರ ಭಟ್, ಶಿವಸೇನಾ ಸೌಥ್ ಸೇಲ್, ಥಾಣೆ ಜಿಲ್ಲೆಯ ಮಹಿಳಾ ಕಾರ್ಯದರ್ಶಿ ಶ್ರೀಮತಿ ಅನುಪಮಾ ಶೆಟ್ಟಿ, ಡೊಂಬಿವಲಿಯ ಕ್ಯಾಟರಿಂಗ್ ಉದ್ಯಮಿ ಕೆ. ಟಿ. ಸಾಲ್ಯಾನ್, ಗಜಾನನ ಎಂಟರ್ಪ್ರೈಸಸ್ ನ ಶೇಖರ್ ಶೆಟ್ಟಿ, ಉಲ್ಲಾಸ್ ನಗರದ ಉದ್ಯಮಿಗಳಾದ ಉದಯ್ ಶೆಟ್ಟಿ, ಉದ್ಯಮಿ ಸುರೇಂದ್ರ ಶೆಟ್ಟಿ,
ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಲಿಯ ಗುರುಸ್ವಾಮಿ ಶ್ರೀ ಶರತ್ ಜಿ . ಮೊಗವೀರ ಗುರುಸ್ವಾಮಿ, ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಂಡಳಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಆರೂರು ಯಕ್ಷಗಾನ ಕಲಾಭಿಮಾನಿ ಬಳಗ ಮುಂಬೈ, ಹಾಗೂ ಯಕ್ಷ ಪ್ರಿಯರ ಬಳಗ ಡೊಂಬಿವಲಿ ಯ ರೂವಾರಿ, ಕಲಾಪ್ರೇಮಿ, ಕಲಾವಿದ, ಕಲಾಪ್ರೋತ್ಸಾಹಕ ಸೀತಾರಾಮ್ ಶೆಟ್ಟಿ ದಂಪತಿಗಳನ್ನು ಮಂಡಳಿಯ ಪರವಾಗಿ ಹಾಗೂ ಸಿರಿಕಲಾ ಮೇಳದ ವತಿಯಿಂದ ಸತ್ಕರಿಸಲಾಯಿತು.
ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಲ್ಲಿ ಸಹಕಾರ ನೀಡಿದ ಶುಭಾಸ್ ಶೆಟ್ಟಿ ಇನ್ನಂಜೆ, ರಾಜೇಶ್ ಕೋಟ್ಯಾನ್, ಸುರೇಶ್ ಶೆಟ್ಟಿ ಶೃಂಗೇರಿ ಅವರನ್ನು ಗೌರವಿಸಲಾಯಿತು.
ಶ್ರೀ ಶಬರಿ ಅಯ್ಯಪ್ಪ ಭಜನ ಮಂಡಳಿ, ಶ್ರೀ ಶಬರಿ ಅಯ್ಯಪ್ಪ ಮಹಿಳಾ ಭಜನ ತಂಡ, ಶ್ರೀ ಶಬರಿ ಅಯ್ಯಪ್ಪ ಮಕ್ಕಳ ಭಜನ ತಂಡ, ಶ್ರೀ ಶಬರಿ ಅಯ್ಯಪ್ಪ ಪೂಜಾ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಅನಂದ್ ಶೆಟ್ಟಿ ಎಕ್ಕಾರ್ ಮಾತನಾಡುತ್ತ ಇವರ ಪ್ರೀತಿ ಆದರ ಕಂಡು, ತುಂಬಾ ಸಂತೋಷ ವಾಗುತ್ತದೆ, ಇವರಿಂದ ನಾವು ಕಲಿಯಬೇಕಾದುದು ತುಂಬಾ ಇದೆ ಅನಿಸುತ್ತದೆ, ಈ ಮಂಡಳಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಎಂದರು.
ಸಂಘಟಕ, ಸಮಾಜ ಸೇವಕ, “ಡೊಂಬಿವಲಿಯ ಮುತ್ತು”, ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿ, ವಂದಿಸಿದರು. ವಾಸು ಮೊಗವೀರ ಸಹಕರಿಸಿದರು.
ಸಭಾ ಕಾರ್ಯಕ್ರಮದ ನಂತರ ಸಿರಿಕಲಾಮೇಳ (ರಿ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಕಂಸ ದಿಗ್ವಿಜಯ ಕಂಸ ವಧೆ” ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಭಿಮಾನಿಗಳು ಹಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿ ಯಾಗಿ ಸಂಪನ್ನ ಗೊಳ್ಳುವಲ್ಲಿ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯ ಸರ್ವ ಸದಸ್ಯರು ಸಹಕರಿಸಿದರು.