
ಆನಂದ ಶೆಟ್ಟಿ ಎಕ್ಕಾರ್ ಪರಿಚಯ
ಮಹಾರಾಷ್ಟ್ರದ ತುಳು ಸಾಂಸ್ಕೃತಿಕ ನಗರವೆಂದು ಹಾಗೂ ಮಹಾರಾಷ್ಟ್ರದ ತುಳುನಾಡೆಂದೇ ಖ್ಯಾತಿಯನ್ನು ಪಡೆದ ಡೊಂಬನಹಳ್ಳಿ ( ಡೊಂಬಿವಲಿ) ನಗರದ ನಿವಾಸಿಯಾಗಿರುವ ಶ್ರೀ ಆನಂದ ದೇಜು ಶೆಟ್ಟಿ ಎಕ್ಕಾರ್ ಇವರು ಮೂಲತ ಶ್ರೀ ದುರ್ಗಾಪರಮೇಶ್ವರಿ ನೆಲೆನಿಂತ ಕಟೀಲು ಸಮೀಪದ ಎಕ್ಕಾರಿನ ಅಜೀಲರ ಮನೆಯವರು, ತಾಯಿ ಸುಂದರಿ ದೇಜು ಶೆಟ್ಟಿ, ದೇಜು ಶೆಟ್ಟಿ ತಂದೆ ಪೊಳಲಿಯ ಅದೂರಿನವರು ಮೂರು ಗಂಡು ಎರಡು ಹೆಣ್ಣು ಮಕ್ಕಳಲ್ಲಿ ಇವರು ಮೂರನೇ ಯವರು ಎಕ್ಕಾರು ಕೊಡಮಣಿತ್ತಾಯ ಮತ್ತು ಶ್ರೀ ಕಟೀಲು ದುರ್ಗೆಯ ಪರಮ ಭಕ್ತರಾದ ಶ್ರೀಯುತರು ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ತನ್ನ ವಿದ್ಯಾಭ್ಯಾಸವನ್ನು ಎಕ್ಕಾರು ಸರಕಾರಿ ಶಾಲೆಯಲ್ಲಿ , 6 ನೇ ತರಗತಿಯಿಂದ ಎಸ್.ಎಸ್.ಸಿ ವರೆಗಿನ ವಿದ್ಯಾಭ್ಯಾಸವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ಪೂರೈಸಿ ಪಿಯುಸಿ ಶಿಕ್ಷಣವನ್ನು ದಾಮಸ್ ಕಟ್ಟೆ ಕಿನ್ನಿಗೋಳಿಯ ಪೊಂಪಯಿ ಕಾಲೇಜ್‌ನಲ್ಲಿ ಪೂರೈಸಿದರು ಉನ್ನತ ಶಿಕ್ಷಣವನ್ನು ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪೂರೈಸಿದರು ಮತ್ತು ಬದುಕು ನಿರ್ವಹಣೆಗಾಗಿ 1983 ರಲ್ಲಿ ಮಾಯನಗರಿ ಮುಂಬಯಿಗೆ ಅಗಮಿಸಿ ಎಂ.ಬಿ.ಎ ವಿದ್ಯಾಭ್ಯಾಸವನ್ನು ಮುಂಬಯಿಯ ಸಿದ್ಧಾರ್ಥ್ ಕಾಲೇಜ್ ನಲ್ಲಿ ಪೂರೈಸಿ ತಾನೊಬ್ಬ ಉದ್ಯೋಗಪತಿ ಯಾಗ ಬೇಕೆಂಬ ಕನಸ್ಸನ್ನು ಕಂಡು 1985 ರಲ್ಲಿ ಬದ್ಲಾಪುರ ಇಂಡಸ್ಟ್ರಿಯಲ್ ಪರಿಸರದಲ್ಲಿ ನೋವಕೆಮ್ ಇಂಡಸ್ಟ್ರೀಸ್, ನೋವ ಸ್ಪೆಸಾಲಿಟಿ ಕೆಮಿಕಲ್ಸ್ ಎಂಬ ತಮ್ಮ ಸ್ವಂತ ಕೆಮಿಕಲ್ ಉದ್ಯಮವನ್ನು ಪ್ರಾರಂಬಿಸಿ ಅದರಲ್ಲಿ ಯಶಸ್ಸುನ್ನು ಕಂಡಿದ್ದಾರೆ.
ಹಲವಾರು ಸಂಘ- ಸಂಸ್ಥೆಯ ಸದಸ್ಯರಾಗಿರುವ ಆನಂದ ಶೆಟ್ಟಿ, ಪ್ರತಿಷ್ಠಿತ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯಲ್ಲಿ 6 ವರ್ಷಗಳ ಕಾಲ ಉಪ ಕಾರ್ಯಾಧ್ಯಕ್ಷರಾಗಿ ಸದ್ಯ ಕಾರ್ಯಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.ಡೊಂಬಿವಲಿ ನಗರದ ಪ್ರತಿಯೊಂದು ಸಂಘ- ಸಂಸ್ಥೆಗಳ ನಿಕಟ ಸಂಬಂಧವನ್ನು ಹೊಂದಿರುವ ಶೆಟ್ಟರು ಪತ್ನಿ ಲತಾ, ಪುತ್ರಿಯರಾದ ದಿವ್ಯಾ ಕರುಣಾಕರ ಶೆಟ್ಟಿ, ನಿಧಿ ಶೆಟ್ಟಿ, ಅಳಿಯ ಕರುಣಾಕರ ಶೆಟ್ಟಿ ಹಾಗೂ ಮೊಮ್ಮಕ್ಕಳ ಸಹಿತ ಸಂತೃಪ್ತ ಬದುಕನ್ನು ಸಾಗಿಸುತ್ತಿದ್ದಾರೆ.