
ವರದಿ : ಬಿ. ದಿನೇಶ್ ಕುಲಾಲ್
ಮುಂಬಯಿ, ಡಿ.21 ಮುಂಬಯಿ ಮಹಾನಗರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿ ಗುರುತಿಸಿಕೊಂಡು ಧಾರ್ಮಿಕ, ಶೈಕ್ಷಣಿಕ ಸೇವೆಗಳಿಗೆ ತನ್ನ ಬದುಕನ್ನು ಮುಡುಪಾಗಿಟ್ಟದ್ದು ಕಳೆದ 38 ವರ್ಷಗಳಿಂದ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತವನ್ನು ಮಾಡಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವ ಅಂಧೇರಿ ಪರಿಸರದಲ್ಲಿ 34 ವರ್ಷಗಳ ಹಿಂದೆ ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಸಮಿತಿ ಸ್ಥಾಪಿಸಿ ಅಯ್ಯಪ್ಪ ಮಹಾಪೂಜೆಯನ್ನು ನಡೆಸುತ್ತಾ, ಸಾವಿರಾರು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಅನುದಾನವನ್ನು ನೀಡುತ್ತಾ ಬಂದಿರುವ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ಈ ವರ್ಷದ 35ನೇ ಅಯ್ಯಪ್ಪ ಮಹಾಪೂಜೆ ಡಿ. 24 ರಂದು ರವಿವಾರ ಅಂಧೇರಿ ಪಶ್ಚಿಮದ ಮಹಾಲಕ್ಷ್ಮೀ ಕೊಲೊನಿಯಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 5.00ಕ್ಕೆ ಶರಣುಘೋಷ ಮತ್ತು ನಿತ್ಯ ಪೂಜೆ, ಬೆಳಿಗ್ಗೆ 6ರಿಂದ 7ರ ತನಕ ಮಹಾಗಣಪತಿ ಹೋಮ, ಬೆಳಿಗ್ಗೆ 10ರಿಂದ ಭಜನೆ ಮಧ್ಯಾಹ್ನ 1ರಿಂದ ಶ್ರೀ ಚಂದ್ರಹಾಸ ಗುರುಸ್ವಾಮಿಯವರಿಂದ ಮಹಾಪೂಜೆಯ ಆರತಿ, ಆ ಬಳಿಕ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಬೇಕಾಗಿ ವಿನಂತಿಸುವ ಚಂದ್ರಹಾಸ ಎಸ್ ಶೆಟ್ಟಿ (ಗುರು ಸ್ವಾಮಿ) ಸಂಸ್ಥಾಪಕ, ಉಪಾಧ್ಯಕ್ಷರುಗಳಾದ ಚಂದ್ರಹಾಸ, ಜೆ.ಶೆಟ್ಟಿ, ಸೂರ್ಯಪ್ರಕಾಶ್ ಶೆಟ್ಟಿಗಾರ್, ಗೌರವ ಪ್ರಧಾನ ಕಾರ್ಯದರ್ಶಿ, ಬಾಬು ಎಂ ಶೆಟ್ಟಿ, , ಗೌರವ ಕೋಶಾಧಿಕಾರಿ ವಿಜಯ್ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ದಿಲೀಪ್ ಎಸ್.ಶೆಟ್ಟಿ,, ಪ್ರಭಾಶ್ಚಂದ್ರ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಭರತ್ ಕೆ ಶೆಟ್ಟಿ, ಶಂಕರ್ ಎನ್ ಶೆಟ್ಟಿ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ವೃತ್ತಿಯಲ್ಲಿ ಕ್ಯಾಂಟೀನ್ ಉದ್ಯಮವನ್ನು ನಡೆಸುತ್ತಾ ಬಂದಿದ್ದಾರೆ. ಉದ್ಯಮದಲ್ಲಿ ಸಂಪಾದಿಸಿದ ಬಹುಪಾಲನ್ನು ಸಮಾಜದ ಬಡ ಕುಟುಂಬಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ಶಾಲಾ ವಿದ್ಯಾರ್ಥಿಗಳಿಗೆ, ಸಂಘ – ಸಂಸ್ಥೆಗಳಿಗೆ ನೀಡುತ್ತಾ ಬಂದಿದ್ದಾರೆ. ಸಾಮಾಜಿಕ.
ಸ್ಥಾಪಕರಾಗಿರುವ ಇನ್ನಂಜೆ ಚಂದ್ರಹಾಸ ಗುರುಸ್ವಾಮಿಯವರು 38 ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತಾಚರಣೆಯನ್ನು ಮಾಡಿ ಧರ್ಮನಿಷ್ಠೆಯಿಂದ ಶಬರಿಮಲೆಗೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವರು.
ಏಳು ವರುಷ ಮುಂಬಯಿಯಿಂದ ಪಾದಯಾತ್ರೆಯ ಮೂಲಕ ಕಲಿಯುಗ ವರದ ಶ್ರೀ ಅಯ್ಯಪ್ಪನ ದರ್ಶನ ಮಾಡಿರುವ ಇವರು ಸುಮಾರು 18 ವರ್ಷಗಳಿಂದ ತನ್ನ ಕಾಲಿಗೆ ಚಪ್ಪಲಿಯನ್ನು ಹಾಕದೆ ಎಲ್ಲಾ ಊರುಗಳನ್ನು ಸಂಚರಿಸುವವರು ಮತ್ತು ಅಯ್ಯಪ್ಪ ಸ್ವಾಮಿಯಂತೆ ಬ್ರಹ್ಮಚಾರಿಯಾಗಿರುವ ಇವರು ತನ್ನ 60ನೇ ವರ್ಷದ ಪ್ರಾಯದಲ್ಲಿಯೂ 1800 ಕಿಲೋಮೀಟರ್ ಪಾದಯಾತ್ರೆಯನ್ನು ಮಾಡಿರುವರು. ಇವೆಲ್ಲವೂ ಕಲಿಯುಗವರದ ಶ್ರೀ ಅಯ್ಯಪ್ಪ ಸ್ವಾಮಿಯ ದಯೆಯಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ಅವರ ಮಾರ್ಗದರ್ಶನದಿಂದ ನಡೆದ ತನ್ನ ಎಲ್ಲಾ ಭಕ್ತರ ಕಷ್ಟಗಳು ದೂರ ಆಗಿ ತಮ್ಮ ಇಷ್ಟಾರ್ಥಗಳು ನೆರವೇರಿದ ಎಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.
ಅಯ್ಯಪ್ಪ ಸ್ವಾಮಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಗುರುಸ್ವಾಮಿಯವರು ತನ್ನ ಬಳಿ ಒಂದು ಸುಂದರವಾದ ಅಯ್ಯಪ್ಪ ಸ್ವಾ ಮಿಯ ವಿಗ್ರಹವಿಟ್ಟು ಕೊಂಡಿರುತ್ತಾರೆ. ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ಬೆಳ್ಳಿಯ ಪೀಠ, ಚಿನ್ನದ ಕಿರೀಟ, ಚಿನ್ನದ ಸರಗಳು ಹಾಗೂ ಅಯ್ಯಪ್ಪ ಸ್ವಾ ಮಿಯ ಎದೆಯ ಕವಚ ಹಾಗೆಯೇ ಸುಮಾರು 3 ಲಕ್ಷ ಬೆಲೆಬಾಳುವ ಚಿನ್ನದ ವಸ್ತುಗಳು ಕಾಣಿಕೆಯಾಗಿ ಭಕ್ತಾಭಿಮಾನಿಗಳಿಂದ ಬಂದಿರುತ್ತದೆ.
ಇವರು ಸ್ಥಾಪಿಸಿರುವ ಶ್ರೀ ಅಯ್ಯಪ್ಪ ಭಕ್ತವೃಂದದ ಮೂಲಕ ವಿಷ್ಣು ಮೂರ್ತಿ ಕ್ಷೇತ್ರಕ್ಕೆ ಸುಂದರವಾದ ಸ್ವಾಗತ ಗೋಪುರ ಹಾಗೂ ಕುಂಜಾರು ದುರ್ಗಾದೇವಿಗೆ ಸ್ವಾಗತ ಗೋಪುರ ನಿರ್ಮಾಣಗೊಲಿ ಸಹಕಾರವನ್ನು ನೀಡಿದವರು ಹಾಗೂ ಚಂದ್ರಹಾಸ ಗುರುಸ್ವಾಮಿಯವರು ಕಷ್ಟದಲ್ಲಿರುವವರಿಗೆ ಮದುವೆ ಹಾಗೂ ಮನೆ ಕಟ್ಟಲು ಹಾಗೂ ಅಸೌಖ್ಯದಲ್ಲಿ ಇರುವವರಿಗೆ ಸಾಧ್ಯವಾದಷ್ಟು ಧನ ಸಹಾಯ ಮಾಡಿರುವರು.
ಇನ್ನಂಜೆ ಚಂದ್ರಹಾಸ ಗುರುಸ್ವಾಮಿಯವರು ಊರಿನಲ್ಲಿಯೂ ಹಾಗೂ ಮುಂಬಯಿಯಲ್ಲಿಯೂ ಗುರುಸ್ವಾಮಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಊರಿನಲ್ಲಿ ಕೂಡ ವಿಜ್ರಂಭಣೆಯಿಂದ ಮಹಾಪೂಜೆಯನ್ನು ನಡೆಸಿ ಆ ಬಳಿಕ ಶಬರಿಮಲೆ ಯಾತ್ರೆಯನ್ನು ನಡೆಸುತ್ತಾರೆ