
ಸಂಘಟನೆ ಬಲ ಪಡಿಸಲು ಎಲ್ಲರ ಪ್ರಯತ್ನ ಅಗತ್ಯ – ಪ್ರಭಾಕರ ಪಿ.ಭಂಡಾರಿ
ಚಿತ್ರ : ಧನರಾಜ್ ಭಂಡಾರಿ, ವರದಿ : ವಾಣಿ ಪ್ರಸಾದ್.
ಮುಂಬಯಿ. ಡಿ.24. “ವಾರ್ಷಿಕ ಸಮಾರಂಭದಲ್ಲಿ ಸಮಾಜ ಬಾಂಧವರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿಸುವುದು ,ಬೇಸರದ ಸಂಗತಿ, ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಬಹಳ ಕಷ್ಟಪಟ್ಟು ಕಾರ್ಯಕ್ರಮ ಅಯೋಜಿಸಿದ್ದಾರೆ.
ಸಮಾಜದ ಯುವ ಜನಾಂಗ ಸಮಿತಿಯ ಚಟುವಟಿಕೆ ಗಳ್ಳಲ್ಲಿ ಮುಂದೆಬರದಿರುವುದು ಸರಿಯಲ್ಲ, ನಮ್ಮ ಹಿರಿಯರು ಕಷ್ಟಪಟ್ಟು ,ಧನ ಸಂಗ್ರಹಿಸಿ ಸಂಘ ಸ್ಥಾಪಿಸಿದ್ದಾರೆ, ಒಂದು ಸಮುದಾಯದ ಒಗ್ಗಟ್ಟು ಮತ್ತು ಏಳಗೆಗಾಗಿ ಸಂಘಟನೆ ಅಗತ್ಯ,ಅದನ್ನು ಬಲ ಪಡಿಸಲು ಎಲ್ಲರೂ ಪ್ರಯತ್ನಿಸಬೇಕು” ಎಂದು ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ಪ್ರಭಾಕರ ಪಿ ಭಂಡಾರಿ ನುಡಿದರು.
ಅವರು ಡಿ.24 ರಂದು ಘಾಟ್ಕೋಪರ್ ಪೂರ್ವ ಜವೇರಿ ಬೆಹನ್ ಪೋಪಟ್ ಲಾಲ್ ಸಭಾಗ್ರಹದಲ್ಲಿ ನಡೆದ ಸಮಿತಿಯ 70ನೇ ಕೌಟುಂಬಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಎ ಶೆಟ್ಟಿ ತನ್ನ ಅನಿಸಿಕೆಗಳನ್ನು ತಿಳಿಸುತ್ತಾ “ಸಮಾರಂಭದಲ್ಲಿ ಪಾಲ್ಗೊಂಡು ಸಂತೋಷವಾಯಿತು.
70 ವರ್ಷಗಳ ಹಿಂದೆ ಸಮುದಾಯ ಪ್ರಗತಿ ಸಾದಿಸಬೇಕು ಎಂಬ ಉದ್ದೇಶದಿಂದ ಹಿರಿಯರು ಹುಟ್ಟುಹಾಕಿದ ಭಂಡಾರಿ ಸೇವಾ ಸಮಿತಿ ಬಹಳಷ್ಟು ಅಭಿವೃದ್ಧಿಗೊಂಡಿದೆ.ಸಮಿತಿಯ ಹೆಚ್ಚಿನ ಪದಾಧಿಕಾರಿಗಳು ನನ್ನ ಗೆಳೆಯರು, ಸಮಾಜದ ಯುವಕರು ಸಕ್ರಿಯವಾಗಿ ಭಾಗವಹಿಸಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು.ನಮ್ಮ ಜಾತಿ,ಧರ್ಮ ಪ್ರೀತಿಸುವುದು ನಮ್ಮ ಕರ್ತ್ಯವ್ಯ, ಪರ ಜಾತಿ, ಪರಧರ್ಮವನ್ನು ಪ್ರೀತಿಸುವುದು ,ನಮ್ಮೆಲ್ಲರ ಸರ್ವೋಚ್ಚ ಕರ್ತವ್ಯ” ಎಂದರು.

ಗೌರವ ಅತಿಥಿ ಮಲಾಡ್ ಕನ್ನಡ ಸಂಘದ ಅಧ್ಯಕ್ಷ ನ್ಯಾಯವಾದಿ ಜಗಧೀಶ ಹೆಗ್ಡೆ ಮಾತನಾಡುತ್ತಾ “70 ವರ್ಷಗಳಿಂದ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದ್ದೀರಿ, ಎಲ್ಲರಿಗೂ ನನ್ನ ನಮನಗಳು.
ಸಂಘ-ಸಂಸ್ಥೆ ಸ್ಥಾಪಿಸುವುದು ಸುಲಭ, ಮುನ್ನಡೆಸುವುದು ಬಹಳ ಕಷ್ಟ.ವೇದಿಕೆಯಲ್ಲಿ ಭಾಷಣ ಬಿಗಿಯದೆ ,ಸಂಘದ ಜತೆ ಸೇರಿ ನಾಲ್ಕು ಜನಕ್ಕೆ ಸಹಾಯ ಮಾಡಿದರೆ,ಸಂಘ ಸೇರಿದ್ದು ಸಾರ್ಥಕವಾಗುತದೆ.
ಇಂದಿನ ದಿನದಲ್ಲಿ, ಯಾರಾದರೂ ಮುಂದೆ ಬಂದು ಕೆಲಸ ಮಾಡಿದರೆ, ಅದರಲ್ಲಿ ತಪ್ಪು ಹುಡುಕುವವರು ತುಂಬಾ ಜನ ಇದ್ದಾರೆ.ಕೆಲಸ ಮಾಡುವ ಮನಸು ಎಲ್ಲರಿಗೂ ಬೇಕು.ದಿನದ ಸಮಯದಲ್ಲಿ 5 ಪ್ರತಿಶತ ಸಮಯ ಸಮಾಜಮುಖಿ ಕಾರ್ಯಗಳಿಗೆ ನೀಡಬೇಕು.ನಾವೆಲ್ಲ ಒಂದೇ ಕುಟುಂಬದ ಸದಸ್ಯರಂತ್ತೆ ಬಾಳೋಣ” ಎಂದರು.
ಇನ್ನೋರ್ವ ಗೌರವ ಅತಿಥಿ ,ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ ಭಂಡಾರಿ ತಮ್ಮ ಅಭಿಪ್ರಾಯ ತಿಳಿಸುತ್ತಾ “ವರ್ಷದ ಒಂದು ದಿನವಾದರೂ ಸಮಾಜದವರು ಒಟ್ಟಾಗಬೇಕು, ಇದಕ್ಕಾಗಿ ಪದಾಧಿಕಾರಿಗಳು ತುಂಬಾ ಪ್ರಯತ್ನ ಪಡುತ್ತಾರೆ. ಕಾರ್ಯಕಾರಿ ಸಮಿತಿಗೆ ಯುವಕರು ಸೇರಿಕೊಳ್ಳಬೇಕು.ಸಮಿತಿಯ ಮುಂದಿನ ಚಟುವಟಿಕೆಗಳಿಗೆ ಎಲ್ಲರೂ ಸಹಕಾರ ನೀಡಿ ಎಂದರು.

ಸಮಿತಿಯ ಉಪಾಧ್ಯಕ್ಷರುಗಳಾದ ಶಶಿಧರ ಎಸ್ ಭಂಡಾರಿ, ರಮಾನಂದ ವಿ ಭಂಡಾರಿ, ಗೌರವ ಕಾರ್ಯದರ್ಶಿ ರಮೇಶ್ ವಿ ಭಂಡಾರಿ, ಗೌರವ ಕೋಶಾಧಿಕಾರಿ ಕೆ ಶೀನಾ ಭಂಡಾರಿ, ಜತೆ ಕಾರ್ಯದರ್ಶಿ ರಂಜಿತ್ ಭಂಡಾರಿ, ಜತೆ ಕೋಶಾಧಿಕಾರಿ ರಾಕೇಶ್ ಭಂಡಾರಿ, ಸಲಹಾ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ಆರ್.ಎಂ.ಭಂಡಾರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಾಲಿನಿ ಆರ್ ಭಂಡಾರಿ, ಉಪ ಕಾರ್ಯಧ್ಯಕ್ಷೆ ಜಯಸುಧಾ ಭಂಡಾರಿ, ಕಾರ್ಯದರ್ಶಿ ಲತಾ ವೈ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೌರವ ಕಾರ್ಯದರ್ಶಿ ರಮೇಶ್ ವಿ ಭಂಡಾರಿ ಸ್ವಾಗತಿಸಿ,ಪ್ರಸ್ತಾವಿಕ ನುಡಿಗಳನ್ನಾಡಿದರು.
ಪಲ್ಲವಿ ಭಂಡಾರಿ ಸಭಾ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ಸಮಿತಿಯ ಸದಸ್ಯರ ಭಜನೆಯೊಂದಿಗೆ ಸಮಾರಂಭ ಆರಂಭವಾಯಿತು.ಬಳಿಕ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು.

ಕೋಲಾರ ರಮೇಶ್ ಅವರ ತಂಡದವರ ರಾಮಾಯಣ ದರ್ಶನಂ ನ್ರತ್ಯ ರೂಪಕ ಎಲ್ಲರ ಗಮನ ಸೆಳೆಯಿತು.
ಮದ್ಯಾಹ್ನ ಭೋಜನದ ಬಳಿಕ ಕಲಾಸೌರಭ ದ ಪದ್ಮನಾಭ ಸಸಿಹಿತ್ಲು ಅವರ ಬಳಗದ ರಸಮಂಜರಿ, ಮಹಿಳಾ ಸದಸ್ಯರಿಂದ ಕುಣಿತ ಭಜನೆ, ಶೀನ ಭಂಡಾರಿ ಮತ್ತು ಸದಸ್ಯರ ಬಿಕ್ರ ಮೇಲ್ ಬಂಟ ತುಳು ಕಿರು ನಾಟಕ, ಭ್ರಾಮರಿ ಯಕ್ಷ ನ್ರತ್ಯ ಕಲಾ ನಿಲಯದ ಮಕ್ಕಳಿಂದ ಸುದರ್ಶನ ವಿಜಯ ತುಳು ಯಕ್ಷಗಾನ ಸೇರಿದ್ದ ಸಮಾಜ ಭಾಂದವರನ್ನು ರಂಜಿಸಿತು.