April 2, 2025
ಮುಂಬಯಿ

ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ,

ಕಳೆದ 38 ವರ್ಷಗಳಿಂದ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತವನ್ನು ಮಾಡಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವ ಮುಂಬಯಿ ಮಹಾನಗರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿ ಗುರುತಿಸಿಕೊಂಡು ಧಾರ್ಮಿಕ, ಶೈಕ್ಷಣಿಕ ಸೇವೆಗಳಿಗೆ ತನ್ನ ಬದುಕನ್ನು ಮುಡುಪಾಗಿಟ್ಟದ್ದು ಸಾವಿರಾರು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಅನುದಾನವನ್ನು ನೀಡುತ್ತಾ ಬಂದಿರುವ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ಈ ವರ್ಷದ 35ನೇ ಅಯ್ಯಪ್ಪ ಮಹಾಪೂಜೆ ಡಿ. 24 ರಂದು  ರವಿವಾರ  ಅಂಧೇರಿ ಪಶ್ಚಿಮದ ಮಹಾಲಕ್ಷ್ಮೀ ಕೊಲೊನಿಯಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಶೃದ್ಧೆ ಭಕ್ತಿಯಿಂದ ಜರುಗಿತು.


ಬೆಳಿಗ್ಗೆ  ಶರಣುಘೋಷ ಮತ್ತು ನಿತ್ಯ ಪೂಜೆ,  ಮಹಾಗಣಪತಿ ಹೋಮ, ನಡೆದು ಶ್ರೀ ವರಮಹಾಲಕ್ಷ್ಮಿ ಪೂಜ ಸಮಿತಿ ಯ ಸದಸ್ಯರಿಂದ ಭಜನೆ ನಡೆಯಿತು.

ನಂತರ ಸಹಸ್ರ ನಾಮರ್ಚನೆ, ಮಹಾ ಆರತಿ, ಪಡಿಪೂಜೆ ನಡೆದು ಶ್ರೀ ಚಂದ್ರಹಾಸ ಗುರುಸ್ವಾಮಿಯವರಿಂದ ಮಹಾಪೂಜೆಯ ನಡೆಯಿತು.

ರಾಜಕೀಯ, ಧಾರ್ಮಿಕ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಹಸ್ರಾರು ಭಕ್ತರ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.

ಚಂದ್ರಹಾಸ ಎಸ್ ಶೆಟ್ಟಿ (ಗುರು ಸ್ವಾಮಿ) ಸಂಸ್ಥಾಪಕ, ಉಪಾಧ್ಯಕ್ಷರುಗಳಾದ ಚಂದ್ರಹಾಸ, ಜೆ.ಶೆಟ್ಟಿ, ಸೂರ್ಯಪ್ರಕಾಶ್ ಶೆಟ್ಟಿಗಾರ್‌, ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಎಂ ಶೆಟ್ಟಿ, , ಗೌರವ ಕೋಶಾಧಿಕಾರಿ ವಿಜಯ್‌ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ದಿಲೀಪ್ ಎಸ್.ಶೆಟ್ಟಿ,, ಪ್ರಭಾಶ್ಚಂದ್ರ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಭರತ್ ಕೆ ಶೆಟ್ಟಿ, ಶಂಕರ್ ಎನ್ ಶೆಟ್ಟಿ, ಹಾಗೂ ಸರ್ವ ಸ್ವಾಮಿ ಗಳು ಪೂಜೆ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದರು.

ಅಯ್ಯಪ್ಪ ಸ್ವಾಮಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ  ಸಮಾಜದ ಬಡ ಕುಟುಂಬಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ಶಾಲಾ ವಿದ್ಯಾರ್ಥಿಗಳಿಗೆ, ಸಂಘ – ಸಂಸ್ಥೆಗಳಿಗೆ ನೀಡುತ್ತಾ ಬಂದಿದ್ದಾರೆ.  38 ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತಾಚರಣೆಯನ್ನು ಮಾಡಿ ಧರ್ಮನಿಷ್ಠೆಯಿಂದ ಶಬರಿಮಲೆಗೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವರು.
ಏಳು ವರುಷ ಮುಂಬಯಿಯಿಂದ ಪಾದಯಾತ್ರೆಯ ಮೂಲಕ ಕಲಿಯುಗ ವರದ ಶ್ರೀ ಅಯ್ಯಪ್ಪನ ದರ್ಶನ ಮಾಡಿರುವ ಇವರು ಸುಮಾರು 18 ವರ್ಷಗಳಿಂದ ತನ್ನ ಕಾಲಿಗೆ ಚಪ್ಪಲಿಯನ್ನು ಹಾಕದೆ ಎಲ್ಲಾ ಊರುಗಳನ್ನು ಸಂಚರಿಸುವವರು ಮತ್ತು ಅಯ್ಯಪ್ಪ ಸ್ವಾಮಿಯಂತೆ ಬ್ರಹ್ಮಚಾರಿಯಾಗಿರುವ ಇವರು ತನ್ನ 60ನೇ ವರ್ಷದ ಪ್ರಾಯದಲ್ಲಿಯೂ 1800 ಕಿಲೋಮೀಟರ್ ಪಾದಯಾತ್ರೆಯನ್ನು ಮಾಡಿರುವರು. ಊರಿನಲ್ಲಿಯೂ ಹಾಗೂ ಮುಂಬಯಿಯಲ್ಲಿಯೂ ಗುರುಸ್ವಾಮಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

Related posts

ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜ್ ಐರೋಲಿ: ವಿದ್ಯಾರ್ಥಿಗಳಿಗೆ  ಲೀಡರ್ಶಿಪ್ ಬಗ್ಗೆ ಉಪನ್ಯಾಸ. 

Mumbai News Desk

ವಿಜಯ ಕಾಲೇಜ್ ಮೂಲ್ಕಿ ವಿಶ್ವ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಕೂಡುವಿಕೆ

Mumbai News Desk

ಬಿಲ್ಲವರ  ಎಸೋಸಿಯೇಶನ್, ಮುಂಬಯಿ ಇದರ 2024-27ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ, ಹರೀಶ್ ಜಿ. ಅಮೀನ್, ನೇತೃತ್ವದ ಸ್ವಾಭಿಮಾನಿ ಬಿಲ್ಲವವರು ಬಣಕ್ಕೆ ಜಯ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ಆಷಾಢೋತ್ಸವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರೋಷನ್ ಬಾಲಕೃಷ್ಣ ಮೂಲ್ಯ ಗೆ ಶೇ 84.60 ಅಂಕ.

Mumbai News Desk

ಗೊರೆಗಾಂವ್ ಕರ್ನಾಟಕ ಸಂಘದ 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ, ಸಮಾರೋಪ ಸಮಾರಂಭ

Mumbai News Desk