
ಮುಂಬಯಿ, ಡಿ.24- ಉಪನಗರ ಸಾಂತಾಕ್ರೂಸ್ (ಪ.), ಮಿಲನ್ ಸಬ್ ವೇ ರೋಡ್, ಆಶಾ ಚಾಳ್‌ನಲ್ಲಿ ಮಂತ್ರ ದೇವಿಯ ಆರಾಧಕ, ಧಾರ್ಮಿಕ ಚಿಂತಕ ಕುತ್ಯಾರು ವಾಸುದೇವ ಬಂಜನ್ ಮಾರ್ಗದರ್ಶನದಲ್ಲಿ ಸ್ಥಾಪಿಸಿರುವ ಶ್ರೀಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಆಡಳಿತದ ಶ್ರೀಮಂತ್ರ ದೇವಿ ಕ್ಷೇತ್ರದ ವಾರ್ಷಿಕ ಮಹಾಪೂಜೆಯು ಡಿ.26 ಮಂಗಳ ವಾರ. ರಂದು ಬೆಳಿಗ್ಗೆಯಿಂದ ಸಂಜೆವರೆಗೆ
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು ಶ್ರೀದೇವಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವತೆಗಳಿಗೆ ಹೋಮ-ಹವನ, ಅಮ್ಮನವರಿಗೆ ಗದ್ದಿಗೆ ಏರಿಸಿ ಶ್ರೀದೇವಿಯ ಆವೇಶದೊಂದಿಗೆ ಪ್ರಸಾದ ವಿತರಣೆ .
ಸಂಜೆ 4 ಗಂಟೆ ತನಕ ಮಹಾ ಅನ್ನದಾನ ನಡೆಯಲಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತನು, ಮನ, ಧನದೊಂದಿಗೆ ಸಹಕರಿಸಬೇಕಾಗಿ ಮೊತ್ತೇಸರರಾದ ವಾಸುದೇವ ಬಂಜನ್ (ಅರ್ಚಕರು), ಅಧ್ಯಕ್ಷರು, ಟ್ರಸ್ಟಿ, ಮಧ್ಯಸ್ಥರು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಭಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.