23.5 C
Karnataka
April 4, 2025
ಮುಂಬಯಿ

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ



ಅಂಧೇರಿ ಪಶ್ಚಿಮ ,ವೀರ ದೇಸಾಯಿ ರೋಡ್ ,ಮಹಾಲಕ್ಷ್ಮೀ ಕಾಲನಿಯ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿಯ 35ನೇ ವಾರ್ಷಿಕ ಪೂಜೆ ಡಿ.17ರಂದು ಭಕ್ತಿ, ಸಡಗರದಿಂದ ಜರಗಿತು.

ಡಿ.16 ಶನಿವಾರ ಬೆಳ್ಳಿಗ್ಗೆ 7 ಗಂಟೆಗೆ, ನಾಗೇಶ್ ಪುತ್ರನ್-ದಯಾವತಿ ಎನ್ ಪುತ್ರನ್ ದಂಪತಿಯ ಯಜಮಾನಿಕೆಯಲ್ಲಿ ಗಣಹೋಮ ನಡೆಯಿತು.

ಡಿ.17 ಆದಿತ್ಯವಾರ ರಂದು ಬೆಳ್ಳಿಗ್ಗೆ 6.30 ಕ್ಕೆ ಕಲಶ ಆರೋಹಣವಾದ ಬಳಿಕ ದೀಪ ಪ್ರಜ್ವಲಿಸಿ ಮಂಗಲೋತ್ಸವಕ್ಕೆ ಚಾಲನೆ ನೀಡಲಾಯಿತು.
ಬಳಿಕ ಆಹ್ವಾನಿತ ಭಜನಾ ಮಂಡಳಿಯವರಿಂದ ಹರಿನಾಮ ಸಂಕೀರ್ತನೆ ಆರಂಭವಾಯಿತು.


ಶ್ರೀ ಮಹಾವಿಷ್ಣು ಮುಂಬ್ರಾ ಮಿತ್ರ ಮಂಡಳಿ ದೊಂಬಿವಲಿ, ಶ್ರೀ ಮದ್ಭಾರತ ಮಂಡಳಿ ಹಾಗೂ ಪೌರಾಣಿಕ ವಾಚಕ ಸಮಿತಿ ಅಂಧೇರಿ, ಶ್ರೀ ವಿದ್ಯಾದಾಯಿನಿ ಭಜನಾ ಮಂಡಳಿ ಪೋರ್ಟ್, ನವಿ ಮುಂಬೈ ಮಕ್ಕಳ ಭಜನಾ ಮಂಡಳಿ ನೆರುಲ್,ಶ್ರೀ ಶನೀಶ್ವರ ದೇವಸ್ಥಾನ ನೆರುಲ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಪೋರ್ಟ್, ಶ್ರೀ ದತ್ತಾತ್ರೇಯ ದುರ್ಗಂಬಿಕಾ ದೇವಸ್ಥಾನ ಅಸಲ್ಫಾ, ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಮೀರಾರೋಡ್ ,ಇದರ ಸದಸ್ಯರು ಭಜನಾ ಕಾರ್ಯಕ್ರಮ ನೀಡಿದರು.
ಕೋನೆಗೆ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಹಾಗೂ ಶ್ರೀ ಮಹಾಲಕ್ಷ್ಮೀ ಬಾಲ ಭಜನಾ ವ್ರ0ದದ ಮಕ್ಕಳು ಶ್ರೀ ಹರಿಯನ್ನು ಭಜಿಸಿದರು.
ಅರ್ಚಕರಾದ ಮನೋಜ್ ಓ ಮೆಂಡನ್ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಮಹಾ ಆರತಿ ಬೆಳಗುವ ಮೂಲಕ 35ನೇ ವಾರ್ಷಿಕ ಮಹಾಪೂಜೆ ಸಂಪನ್ನ ಕಂಡಿತು.


ಈ ಸಂದರ್ಭದಲ್ಲಿ ಕಾಲನಿಯಲ್ಲಿ ನೆಲೆಸಿ, ಮಂದಿರದ ಸೇವಾ ಕಾರ್ಯಗಳಲ್ಲಿ ಸಹಕರಿಸುತ್ತಿರುವ ಜೇಷ್ಠ ನಾಗಾರಿಕರಾದ ವಿದ್ಯಾ ಕಾಂಚನ್, ಹರಿಶ್ಚಂದ್ರ ಕಾಂಚನ್, ಪ್ರತಿಭಾ ಸಾಲ್ಯಾನ್, ದಯಾವತಿ ಸುವರ್ಣ, ಹಾಗೂ ಮಲ್ಲಿಕಾ ಕರ್ಕೇರ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಅರ್ಚಕರಾಗಿ ಸೇವೆ ಮಾಡುತ್ತಿರುವ ಹಿರಿಯರಾದ ಆನಂದ ಮೆಂಡನ್, ಪುರಂದರ ಸಾಲ್ಯಾನ್ ಹಾಗೂ ಮನೋಜ್ ಮೆಂಡನ್ ರನ್ನು ಗೌರವಿಸಲಾಯಿತು.
ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿ, ಭುವಾಜಿ ಆಗಿ ಕಳೆದ ಕೆಲವು ವರ್ಷಗಳಿಂದ ಸೇವೆ ಮಾಡುತ್ತಿರುವ ದಯಾನಂದ ಎಲ್.ಬಂಗೇರ ಹಾಗೂ ಮಂಡಳಿಯ ಎಲ್ಲಾ ಕಾರ್ಯಗಳು ಸಾಂಗವಾಗಿ ಜರಗುವಲ್ಲಿ ವಿಶೇಷವಾಗಿ ಶ್ರಮಿಸುತ್ತಿರುವ ,ಕೋಶಾಧಿಕಾರಿ, ಭಜನಾ ತರಬೇತಿದಾರ ಪೃಪುಲ್ ಬಿ ಶ್ರೀಯಾನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ದಯಾನಂದ ಬಂಗೇರ ಸನ್ಮಾನಕ್ಕೆ ಉತ್ತರಿಸಿದರು.
ಮಂದಿರದಲ್ಲಿ ಪ್ರತಿ ಶನಿವಾರ ನಡೆಯುವ ಪೂಜೆ,ಭಜನೆಯಲ್ಲಿ ಸ್ವಇಚ್ಛೆಯಿಂದ, ಬಹಳ ಸಮಯದಿಂದ ಸಹಕರಿಸುತ್ತಿರುವ ಶಶಿಯಕ್ಕ, ನಾಗೇಶ್ ಕೋಟ್ಯಾನ್, ಹರಿನಾರಾಯಣ, ತಲವಡಿಕರ್, ಏಕನಾಥ ಕರ್ಕೇರ ಇವರನ್ನು ಗೌರವಿಸಲಾಯಿತು.
ಭುವಾಜಿ ದಿವಂಗತ ರಾಮ ಕೋಟ್ಯಾನ್ ಅವರ ಸುಪುತ್ರ ಚಂದ್ರಶೇಖರ್ ಸಾಲ್ಯಾನ್ ಮಂಡಳಿಯ ಸ್ಥಾಪನೆಯ ದಿನದಿಂದ ,ಇಂದಿನ ತನಕ ವಿಶೇಷ ಸಹಕಾರ ನೀಡುತ್ತಿದ್ದು, ಅವರನ್ನು ಅಭಿನಂದಿಸಲಾಯಿತು.
ಜತೆ ಕಾರ್ಯದರ್ಶಿ ದಯಾವತಿ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.
ಕೊನೆಯಲ್ಲಿ ಪೂಜೆ ಸಲ್ಲಿಸಿದವರಿಗೆ, ದಾನಿಗಳಿಗೆ ,ಉಪಸ್ಥಿತರಿದ್ದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.
ಮದ್ಯಾಹ್ನ ಜಯಶ್ರೀ ಸಾಲ್ಯಾನ್- ಚಂದ್ರಶೇಕರ್ ಸಾಲ್ಯಾನ್, ಸುಧಾಕರ ಕರ್ಕೇರ , ಚೈತನ್ಯ ನಾಯಕ್, ಅನಿಷ್ ರಾಘವನ್ ಅವರು ಸೇವಾ ರೂಪದಲ್ಲಿ ನೀಡಿದ ಅನ್ನ ಸಂತರ್ಪಣೆಯಲ್ಲಿ ಸುಮಾರು ಒಂದು ಸಾವಿರ ಜನರು ಭಾಗಿಯಾದರು.


ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ವಾರ್ಷಿಕ ಪೂಜೆಯಲ್ಲಿ ಅಧ್ಯಕ್ಷರಾದ ಪದ್ಮನಾಭ ಎನ್ ಕಾಂಚನ್ , ಕಾರ್ಯದರ್ಶಿ ದಯಾನಂದ ಎಲ್ ಬಂಗೇರ, ಕೋಶಧಿಕಾರಿ ಪ್ರಫುಲ್ಚಚಂದ್ರ ಬಿ.ಶ್ರೀಯಾನ್, ಉಪಾಧ್ಯಕ್ಷರುಗಳಾದ ಪುರಂದರ ಜಿ ಸಾಲ್ಯಾನ್, ವೇದಾವತಿ ಎ ಮಂಡನ್, ಜತೆ ಕಾರ್ಯದರ್ಶಿ ದಯಾವತಿ ಎಂ.ಸುವರ್ಣ, ಜತೆ ಕೋಶಾಧಿಕಾರಿ ತಾರಾನಾಥ ಎಲ್.ಮೆಂಡನ್, ಅರ್ಚಕರುಗಳಾದ ಆನಂದ ಸಿ ಮೆಂಡನ್, ಪುರಂದರ ಜಿ ಸಾಲ್ಯಾನ್, ಮನೋಜ್ ಓ ಮೆಂಡನ್, ಲೆಕ್ಜ ಪರಿಶೋಧಕ ಕುಮಾರ ಕೆ ಕಾಂಚನ್, ಸದಸ್ಯರು , ಮಹಿಳಾ ಸದಸ್ಯರು, ಟ್ರಸ್ಟಿಗಳು, ಶ್ರೀ ಮಹಾಲಕ್ಷ್ಮೀ ಸೊಸೈಟಿಯ ಪದಾಧಿಕಾರಿಗಳು,ಸದಸ್ಯರು, ಶ್ರೀ ಮಹಾಲಕ್ಷ್ಮೀ ಬಾಲ ಭಜನಾ ವ್ರ0ದದ ಮಕ್ಕಳು ಸಹಕರಿಸಿದರು.
ತಬಲದಲ್ಲಿ ಅಶೋಕ್ ಕೋಟ್ಯಾನ್, ಹಾರ್ಮೋನಿಯಂ ಮತ್ತು ತಬಲಾದಲ್ಲಿ ಹೇಮಚಂದ್ರ ಎರ್ಮಾಳು ಭಜನಾ ತಂಡಕ್ಕೆ ಸಾಥ್ ನೀಡಿದರು.

1988ರಲ್ಲಿ ಅಂಧೇರಿ ಪಶ್ಚಿಮ ಮಹಾಲಕ್ಷ್ಮೀ ಕಾಲನಿಯಲ್ಲಿ ಮೊಗವೀರ ಸಮಾಜದ ಹಿರಿಯರಿಂದ ಸ್ಥಾಪನೆಯಾದ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯಲ್ಲಿ ಪ್ರತಿ ಶನಿವಾರ ಭಜನೆ, ಪೂಜೆ, ಪರ್ವ ದಿನಗಳಲ್ಲಿ ವಿಶೇಷ ಪೂಜೆ, ಹರಿನಾಮ ಸಂಕೀರ್ತನೆ ,ವ್ಯವಸ್ಥಿತವಾಗಿ ನಡೆಯುತ್ತಿದೆ. ಮಂಡಳಿಯ ವಾರ್ಷಿಕ ಮಹಾಪೂಜೆಯ ನಿಮಿತ್ತ 12 ಗಂಟೆಗಳ ಕಾಲ ನಿರಂತರವಾಗಿ ನಡೆದ ಭಜನೆ ಸೇರಿದ್ದ ಎಲ್ಲರನ್ನೂ ಭಕ್ತಿ ಪರವಶರನ್ನಾಗಿಸಿ ಮೈಮರೆಯುವಂತ್ತೆ ಮಾಡಿತು.

Related posts

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ದಿವ್ಯ ಮೂರ್ತಿಯ ವಿಸರ್ಜನಾ ಮೆರವಣಿಗೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮೀರಾ – ಬಾಯಂದರ್ ಶಾಖೆಯಲ್ಲಿ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ

Mumbai News Desk

ಭಾಯಂದರ್ ಆರಾಧನಾ ಫ್ರೆಂಡ್ಸ್ ವತಿಯಿಂದ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಕುಲಾಲ ಸಂಘ ಮುಂಬಯಿ ನವರಾತ್ರಿ ಉತ್ಸವ.ದುರ್ಗಾ ಪೂಜೆ, ಗರ್ಬಾ ನೃತ್ಯ

Mumbai News Desk

ಮುಂಬಯಿ ನ್ಯೂಸ್ ವೀಕ್ಷಕರ / ಓದುಗರ ಮನೆ, ಮನೆ ಗಣಪತಿ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಅರವಿಂದ್ ಪದ್ಮಶಾಲಿ ಗೆ ಶೇ 96 ಅಂಕ.

Mumbai News Desk