
ಶ್ರೀ ಉದ್ಭವ ದುರ್ಗಾಪರಮೇಶ್ವರಿ ಮಂದಿರ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಚೆಂಬೂರು, ಅಯ್ಯಪ್ಪ ಸ್ವಾಮಿಯ ವಾರ್ಷಿಕ ಪಡಿಪೂಜೆ ಮತ್ತು ಮಹಾಪೂಜೆ
ಚೆಂಬೂರು ಆಶೀಶ್ ಥೀಯೇಟರ್ ಸಮೀಪದ ಶಬರಿ ಶಾನ್ ಟವರ್ ನ ಬದಿಯಲ್ಲಿರುವ ಶ್ರೀ ಉದ್ಭವ ದುರ್ಗಾಪರಮೇಶ್ವರಿ ಮಂದಿರದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ವತಿಯಿಂದ ವಾರ್ಷಿಕ ಪಡಿಪೂಜೆ, ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ಡಿಸೆಂಬರ್ 25 ಸೋಮವಾರದಂದು ಶ್ರೀ ರಾಜು ದೇವಾಡಿಗ ಗುರುಸ್ವಾಮಿ ತ್ರಾಸಿ ಇವರ ಮಾರ್ಗದರ್ಶನದಲ್ಲಿ ಶಿಬಿರದ ಉದಯ ದೇವಾಡಿಗ ಗುರುಸ್ವಾಮಿ, ರಾಘವೇಂದ್ರ ದೇವಾಡಿಗ ಗುರುಸ್ವಾಮಿ ಮತ್ತು ಶ್ರೀಮತಿ ತುಂಗಾ ಕೆ. ದೇವಾಡಿಗರವರ ಮುಂದಾಳತ್ವದಲ್ಲಿ ಜರಗಿತು.

ಅಂದು ಬೆಳಿಗ್ಗೆ ಮಂದಿರದ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನವಿಮುಂಬಯಿ ಇವರಿಂದ ಭಜನೆ, ಉದ್ಭವ ದುರ್ಗಾಪರಮೇಶ್ವರಿ ಮಂದಿರದ ಮಹಾ ಆರತಿ, ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆ, ಮಹಾಪೂಜೆ ತದನಂತರ ತೀರ್ಥಪ್ರಸಾದ ವಿತರಣೆಗೊಂಡು, ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಅನ್ನಪ್ರಸಾದವನ್ನು ಸ್ವೀಕರಿಸಿದರು.
