
ಚಿತ್ರ : ಯೋಗೇಶ್ ಪುತ್ರನ್, ವರದಿ ವಾಣಿ ಪ್ರಸಾದ್
ಭಾಯಂದರ್ ಪೂರ್ವ ಗೋಡ್ ದೇವ್ ಫಾಟಕ್ ರೋಡ್ ಹನುಮಾನ್ ನಗರದ ಶ್ರೀ ಹನುಮಾನ್ ಭಜನಾ ಮಂಡಳಿ(ಶ್ರೀ ಮಣಿಕಂಠ ಸೇವಾ ಸಂಘದ ಸದಸ್ಯ) ,ಇದರ 26ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಸಪೂಜೆಯು ಡಿ.30 ರಂದು ಬ್ರಹ್ಮಶ್ರೀ ಅರುಣ್ ತಂತ್ರಿ, ವೇದ ಮೂರ್ತಿ ಗಣೇಶ್ ಸರಳಾಯ ಉಡುಪಿ ,ಸಂತೋಷ್ ಗುರುಸ್ವಾಮಿ ಮೂಡುಮಾರ್ನಾಡ್ ಇವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮಹಾಪೂಜೆಯಂದು
ಬೆಳ್ಳಿಗ್ಗೆ 6 ಗಂಟೆಗೆ ಸ್ವಸ್ತಿ ಪುಣ್ಯಾವಾಚನ, ಮಹಾವಿಷ್ಣು ಯಾಗ,ಪ್ರಧಾನ ಹೋಮ, ದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಾಶಾಭಿಷೇಕ, ಲಕ್ಷ ತುಳಸಿ ಆರ್ಚನೆ ಮಾಡಲಾಯಿತು.
ಆ ಬಳಿಕ ಶ್ರೀ ಹನುಮಾನ್ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನೀಡಿದರು.
ನಂತರ ಸಂತೋಷ್ ಗುರುಸ್ವಾಮಿ ಮೂಡು ಮಾರ್ನಾಡ್ ಅವರು ಪ್ರಸನ್ನ ಪೂಜೆ, ಪಡಿಪೂಜೆ ನೆರವೇರಿಸಿ ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾ ಪೂಜೆ, ಮಹಾ ಮಂಗಳಾರತಿಗೈದರು.
ತದ ನಂತರ ಪಲ್ಲಾಪೂಜೆ ನಡೆದು ಸೇರಿದ್ದ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು.




ಸಾವಿರಾರು ಜನರು ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 5ರಿಂದ 6 ಸಾವಿರ ಜನರು ಭಾಗಿಯಾದರು.
ಮಹಾಪೂಜೆಯಲ್ಲಿ ರಾಜಕೀಯ ಮುಖಂಡರು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ದಾನಿಗಳು, ಹೋಟೆಲ್ ಉದ್ಯಮಿಗಳು ,ಸಹಸ್ರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.




ಸಂತೋಷ್ ಗುರುಸ್ವಾಮಿ, ಗೌರವ ಅಧ್ಯಕ್ಷ ಅರವಿಂದ ಶೆಟ್ಟಿ(ಮಾಜಿ ನಗರ ಸೇವಕ), ಅಧ್ಯಕ್ಷ ಜಯರಾಮ್ ಎಂ.ಶೆಟ್ಟಿ, ಗೌರವ ಕಾರ್ಯದರ್ಶಿ ಅಶೋಕ್ ಕೆ ಕೋಟ್ಯಾನ್, ಗೌರವ ಕೋಶಾಧಿಕಾರಿ ಸುಕುಮಾರ ಎಂ ಶೆಟ್ಟಿ, ಉಪಾಧ್ಯಕ್ಷರುಗಳಾದ ಚಂದ್ರಮೋಹನ ಆರ್ ಅಮೀನ್, ಸುರೇಶ್ ಶೆಟ್ಟಿ ಕಳತ್ತೂರು, ಜತೆ ಕಾರ್ಯದರ್ಶಿ ಶೇಖರ್ ಎ ಬಂಗೇರ, ಆನಿಲ್ ವಿ ಕುಕ್ಯಾನ್, ಜತೆ ಕೋಶಾಧಿಕಾರಿ ಅಶೋಕ್ ಆರ್ ಅಮೀನ್, ದಯಾನಂದ ಜಿ ಕರ್ಕೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುನಿತ ಎಸ್.ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಿ ಎಸ್ ಸುವರ್ಣ ,ಭುವಾಜಿ ದಯಾನಂದ ವಿ ಮೆಂಡನ್, ಯುವ ವಿಭಾಗದ ಅಧ್ಯಕ್ಷ ದೀಪಕ್ ಕೆ ಕೋಟ್ಯಾನ್, ಕಾರ್ಯದರ್ಶಿ ನಿಖಿಲ್ ಎಸ್ ಬಂಗೇರ, ಹಾಗೂ ಶ್ರೀ ಮಣಿಕಂಠ ಭಜನಾ ಮಂಡಳಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ,ಸಮಿತಿಯ ಸ್ವಾಮಿಗಳು 26ನೇ ವಾರ್ಷಿಕ ಮಹಾಪೂಜೆ ಸಾಂಗವಾಗಿ ನಡೆಯುವಲ್ಲಿ ಸಹಕರಿಸಿದರು.