
ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ, ಪಡುಗ್ರಾಮ,ಕಾಪು , ಇದರ ಈ ಬಾರಿಯ ನೇಮೋತ್ಸವ ದ ದಿನಾಂಕ ನಿಗದಿ ಪಡಿಸುವಿಕೆ ಬಗ್ಗೆ ಗ್ರಾಮಸ್ಥರು ಹಾಗೂ ಹತ್ತು ಸಮಸ್ತರ ಸಭೆ ಇಂದು ಜರಗಿತು.
ಈ ಸಭೆಯಲ್ಲಿ ದಿನಾಂಕ 30/04/2024 ರ ಮಂಗಳವಾರದಿಂದ 04/05/2024ರ ಶನಿವಾರದವರೆಗೆ ನೇಮೋತ್ಸವ ನಡೆಸುವುದೆಂದು ನಿರ್ಣಯಿಸಲಾಯಿತು.

ಬೈರುಗುತ್ತು ದೊರೆಗಳ ಗುತ್ತು, ಅಯೋಧ್ಯಾ ಮನೆ ,ಸಾನದ ಮನೆ, ಗರಡಿ ಮನೆ, ಪಿಲಿಚಂಡಿ ಮನೆ ಸಹಿತ 16ಮನೆತನದ ಸದಸ್ಯರು ಹಾಗೂ ದೈವಸ್ಥಾನದ ಹತ್ತು ಸಮಸ್ತರು ಉಪಸ್ಥಿತರಿದ್ದರು.

ನೇಮೋತ್ಸವದ ಕಾರ್ಯಕ್ರಮಗಳು :
30/04/2024 ಮಂಗಳವಾರ ಸಂಜೆ 7.00 ರಿಂದ
ಬಬ್ಬರ್ಯ ದೈವದ ಬಡಗು ಸವಾರಿ
01/05/2024 ಬುಧವಾರ ಸಂಜೆ 7ರಿಂದ ಮುಗ್ಗೆರ್ಕಳ ದೈವದ ನೇಮೋತ್ಸವ ಹಾಗೂ ರಾತ್ರಿ 12.00ಕ್ಕೆ ತನ್ನಿಮಾನಿಗ ದೇವಿಯ ನೇಮೋತ್ಸವ
02/05/2024 ಗುರುವಾರ ಬೆಳ್ಳಿಗ್ಗೆ ಗಂಟೆ 10.30ಕ್ಕೆ ಉರಿಚೌoಡಿ ದೈವದ ನೇಮೋತ್ಸವ ಹಾಗೂ ಗಂಟೆ 12.00ಕ್ಕೆಕತ್ತಲೆಕಾನದ ಗುಳಿಗ ದೈವದ ನೇಮೋತ್ಸವ
03/05/2024 ಶುಕ್ರವಾರ
ಸಂಜೆ ಗಂಟೆ 6.00ರಿಂದ ಪರಿವಾರದ ದೈವಗಳ ನೇಮೋತ್ಸವ
04/05/2024 ಶನಿವಾರ ಮದ್ಯಾಹ್ನ ಗಂಟೆ 1.00ರಿಂದ ಇತಿಹಾಸ ಪ್ರಸಿದ್ಧ ಕಾಪು “ಪಿಲಿಕೋಲ” ನಡೆಯಲಿದೆ.
ಪ್ರತಿ ಎರಡು ವರ್ಷಕೊಮ್ಮೆ ಜರಗುವ ಪಿಲಿಕೋಲ ದೇಶ, ವಿದೇಶದಲ್ಲಿ ಕಾಪು ಪಿಲಿಕೋಲ ಎಂದೇ ಪ್ರಸಿದ್ಧಿಯಾಗಿದೆ.
.
.