
ನಾಡಿನ ಹೆಸರಾಂತ ಪತ್ರಕರ್ತ ,ರಾಜಕೀಯ ವಿಶ್ಲೇಷಕ ,ವಾಗ್ಮಿ, ಬಿಲ್ಲವ ಸಮಾಜದ ಹೆಮ್ಮೆಯ ರತ್ನ ,2023ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾಧ್ಯಮ ವಿಭಾಗದಲ್ಲಿ ಪಡೆದ ದಿನೇಶ್ ಅಮೀನ್ ಮಟ್ಟು ಅವರಿಗೆ ಜ.6ರಂದು ಮುಂಬೈಯಲ್ಲಿ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ಆಶ್ರಯದಲ್ಲಿ ,ಗೋರೆಗಾಂವ್ ಪೂರ್ವದ ಜಯಲೀಲಾ ಸಭಾಗ್ರಹದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ,ಮುಲ್ಕಿ ಇದರ ಉಪಾಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ ವಹಿಸಲಿರುವರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಉಪಸ್ಥಿತರಿರುವರು.
ಶ್ರೀ ಗುರುನಾರಾಯಣ ಅಧ್ಯಯನ ಪೀಠ ಮಂಗಳೂರು, ಇದರ ನಿರ್ದೇಶಕ ಡಾ.ಗಣೇಶ್ ಸಂಕಮಾರ್ ಅಭಿನಂದನಾ ಭಾಷಣಗೈಯಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಧಾಕೃಷ್ಣ ನ್ರತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ನ್ರತ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.
ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
.
.
.
.
.