23.5 C
Karnataka
April 4, 2025
ಸುದ್ದಿ

ನ್ಯೂ ಪನ್ವೇಲ್  ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದ19ನೇ ಶ್ರೀ ಅಯ್ಯಪ್ಪ ಮಹಾಪೂಜೆ



ಪನ್ವೇಲ್ ಜ 5,   ಪನ್ವೆಲ್ ಪೂರ್ವ ದ ಯ ಸೆಕ್ಟರ್ 5/A, ಗುರುದ್ವಾರದ ಹಿಂದೆ   ಸ೦ತ ಶ್ರೀ ವೃಂದಾವನ ಬಾಬಾ ಸಮಾಧಿ ಮುಂದಿರದಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ವೃಂದಾವನ ಬಾಬಾ ಭಜನೆ ಮಂಡಳಿಯ ಸದಸ್ಯರು. ಅಯ್ಯಪ್ಪ ಭಕ್ತರು. ಹಾಗೂ  ನ್ಯೂ ಪನ್ವೇಲ್ ನಗರ ಸೇವಕ ಸಂತೋಷ ಜಿ ಶೆಟ್ಟಿ ಇವರೆಲ್ಲರ ಒಗ್ಗಟ್ಟಿನಲ್ಲಿ ಪ್ರಾರಂಭಿಸಿಕೊಂಡಿರುವ

ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದಾ  19 ನೇ ಶ್ರೀ ಅಯ್ಯಪ್ಪ ಮಹಾಪೂಜೆಯ ಜ 1 ಸೋಮವಾರ ಭಕ್ತಿ ಸಂಭ್ರಮದೊಂದಿಗೆ ಆಚರಿಸಲಾಯಿತು

ಬೆಳಗ್ಗೆ  ಮಹಾ ಗಣಪತಿ ಹೋಮ ಬಳಿಕ ಶ್ರೀ ವೃಂದಾವನ ಬಾಬಾ ಭಜನಾ ಮಂಡಳಿ ಭಜನೆ ಅನಂತರ ಜಯ  ಗುರುಸ್ವಾಮಿ ಮಹಾಮಂಗಳಾರತಿಯನ್ನು ನಡೆಸಿದರು.ಮಧ್ಯಾಹ್ನ ಮಹಾಪ್ರಸಾದ ಅನ್ನಸಂತರ್ಪಣೆ ಯಲ್ಲಿ ಸಾವಿರಾರು ಸಂಖ್ಯೆ ಅಯ್ಯಪ್ಪ ಸ್ವಾಮಿಯ ಭಕ್ತರು ಪಾಲ್ಗೊಂಡಿದ್ದರು.

ಮಧ್ಯಾಹ್ನ ನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ ಹಾಗೂ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಕೋರ್ದಬ್ಬು ಭಾರಗ” ಎಂಬ ತುಳು ಐತಿಹಾಸಿಕ ಯಕ್ಷಗಾನ ಪ್ರಸಂಗವನ್ನು ನಡೆಯಿತು

 ಪೂಜಾ ಕಾರ್ಯಕ್ಕೆ ಆಗಮಿಸಿದ   ಪನ್ವೆಲ್ ನ  ಶಾಸಕ ಪ್ರಶಾಂತ್ ಠಾಕೂರ್ . ಮತ್ತು  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ ಯ ಅಧ್ಯಕ್ಷ ಪ್ರವೀಣ್ ಶೆಟ್ಟಿ  ಪುತ್ತೂರು ಇವರನ್ನು ನಗರ ಸೇವಕ ಸಂತೋಷ ಜಿ ಶೆಟ್ಟಿ ಪನ್ವಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ( ಪದ್ಮ). ಬಿ ಕೆ ಗುರುಸ್ವಾಮಿ ಮತ್ತಿದ್ದರು ತುಳು ಕನ್ನಡಿಗರು ಗೌರವಿಸಿದರು.

ಪೂಜಾ ಕಾರ್ಯಗಳು ವಿಜ್ರಮ್ಮನೆಯಿಂದ ನಡೆಯಲು ವೃಂದಾವನ ಬಾಬಾ ಭಜನೆ ಮಂಡಳಿಯ ಸದಸ್ಯರು. ಅಯ್ಯಪ್ಪ ಭಕ್ತರು. ಪನ್ವಲ್ ಕರ್ನಾಟಕ ಸಂಘದ ಪದಾಧಿಕಾರಿಗಳು ಸದಸ್ಯರು  ಸಹಕರಿಸಿದರು 

Related posts

ಸಾರಸ್ಬತ ವೈದಿಕ ಸೇವಾ ಪ್ರತಿಷ್ಟಾನಮ್ (ರಿ) ಸಂಸ್ಥೆಯ ಉದ್ಘಾಟನೆ

Mumbai News Desk

ಪತ್ರಕರ್ತರ ಸಂಘದಿಂದ ಐಕಳ ಹರೀಶ್ ಶೆಟ್ಟಿ ಅವರಿಗೆ ಗೌರವ

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ : ಶರನ್ನವರಾತ್ರಿ ಉತ್ಸವ ಆರಂಭ

Mumbai News Desk

ಮೈಸೂರು ದಸರಾ -2023 ರ  ಪ್ರಧಾನ ಕವಿಗೋಷ್ಟಿಯಲ್ಲಿ ಶ್ರೀನಿವಾಸ ಜೋಕಟ್ಟೆ ಕವನ ವಾಚನ

Mumbai News Desk

ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಬಿಲ್ಲವ ಸಮಾಜದ ಮುಖಂಡರಿಂದ ಅಭಿನಂದನೆ

Mumbai News Desk

ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 18 ಜನರ ಸಾವು

Mumbai News Desk