September 6, 2026
Mumbai News Kannada
ಸುದ್ದಿ

ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಉದ್ಯಾವರ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುವ ಮುದ್ರಣ ಯಂತ್ರ ಕೊಡುಗೆ





ಮುಂಬಯಿ : ಶ್ರೀ ಭಗವತೀ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ವಿದ್ಯಾ ಭ್ಯಾಸಕ್ಕೆ ಪೂರಕವಾಗುವ ದೃಷ್ಟಿಯಿಂದ ಒಂದು ಮುದ್ರಣ ಯಂತ್ರ (ಪ್ರಿಂಟರ್) ನ್ನು ಶಾಲಾ ಆಡಳಿತ ಮಂಡಳಿಗೆ,ಶಾಲಾ ಮುಖ್ಯ್ಯೊಪಾಧ್ಯಾಯರ ಉಪಸ್ಥಿಯಲ್ಲಿ ದಿನಾಂಕ 29.08.2025 ರಂದು
ನೀಡಲಾಯಿತು. ಕಳೆದ ವರ್ಷ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಕಂಪ್ಯೂಟರನ್ನು ನೀಡಿದ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಬೇಕಾದ ಕೆಲವು ಪರಿಕರಗಳನ್ನು ಕೊಟ್ಟು ಸಹಕರಿಸಿದ್ದಾರೆ. ಶಾಲೆಯಲ್ಲಿ ಓಣಂ ಪ್ರಯುಕ್ತ ವಿಶೇಷವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷ ರವಿ ಉಚ್ಚಿಲ್ ಮುಂಬಯಿ ಇವರು ಫೌಂಡೇಶನ್ ನ ಕಾರ್ಯಕ್ಷಮತೆಯನ್ನು ಪ್ರಸ್ತಾಪಿಸಿ ಅನೇಕ ದಶಕಗಳನ್ನು ಕಂಡ ಶಾಲೆಯ ಉಳಿವಿಕೆಗಾಗಿ ನಮ್ಮ ಶ್ರಮ ನಿರಂತರವಾಗಿ ಇರಲಿದೆ, ಗ್ಲೋಬಲ್ ಫೌಂಡೇಶನ್ ಪ್ರಪಂಚದಾಧ್ಯoತ ಒಂದು ವಿಭಿನ್ನ ಸಂಸ್ಥೆಯಾಗಿ ರೂಪುಗೊಳ್ಳಲಿದೆ ಎಂದು ಸಂಸ್ಥೆಯ ಬಗ್ಗೆ ವಿವರಣೆ ನೀಡಿದರು, ಸಂಸ್ಥೆಯ ಮಂಗಳೂರು ದಕ್ಷಿಣ ವಲಯ ಸದಸ್ಯೆರಾದ ಪಾವನ ಟೀಚರ್ ಕೋಟೆಕಾರ್ ಇವರು ಶಾಲಾ ಹಳೆ ವಿದ್ಯಾರ್ಥಿಯಾಗಿದ್ದು ಶಾಲೆ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದರು. ಉದ್ಯಾವರ ಭಗವತಿ ಕ್ಷೇತ್ರದ ಮೊಕ್ತೇಸರರಾದ ರಘುಕಾರ್ಣವರು ಶಾಲೆಯ ಮೇಲೆ ಇಟ್ಟಿರುವ ಪ್ರೀತಿ ಹಾಗೂ ನಮೋ ಗ್ಲೋಬಲ್ ಫೌಂಡೇಶನ್ ಸಂಸ್ಥೆಯ ಮೇಲಿನ ನಂಬಿಕೆಯನ್ನು ಶ್ಲಾ ಗಿಸಿದರು. ನವೀನ್ ಬೆಳ್ಚಪ್ಪಾಡ ಅಡ್ಕ ಇವರು ಗ್ಲೋಬಲ್ ಫೌಂಡೇಶನ್ ನಾ ಕಾರ್ಯಕ್ಷಮತೆ ಬಗ್ಗೆ ವಿವರಿಸಿದರು. ಶ್ರೀಮತಿ ಚಂಚಲಾಕ್ಷಿ ಟೀಚರ್ ಇವರು ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. ಶ್ರೀಮತಿ ಅಮಿತಾ ಟೀಚರ್ ಅವರು ಕಂಪ್ಯೂಟರ್ ಹಾಗೂ ಮುದ್ರಣ ಯಂತ್ರವನ್ನು ನೀಡಿದ ಬಗ್ಗೆ ವಿದ್ಯಾರ್ಥಿಗಳು ಹೇಗೆ ಅದರ ಸದುಪಯೋಗ ಪಡೆಯಬಹುದು ಎಂಬುದನ್ನು ವಿವರಿಸಿದರು ಉದ್ಯಾವರ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾಗಿರುವಂತಹ ಕೃಷ್ಣಪ್ಪ ಬೆಂಗರೆ ಇವರು ಪ್ರಸ್ತುತ ಇರುವ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಕ್ಕಳ ಮುಂದಿನ ಪೀಳಿಗೆಯ ಬಗ್ಗೆ ಹಾಗೂ ಶಾಲೆಯ ಮುಂದಿನ ದುರಸ್ತೀಕರಣದ ಬಗ್ಗೆ ಪ್ರಸ್ತಾಪಿಸಿದರು, ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಸಂಸ್ಥೆಯನ್ನು ಶ್ಲಾಘಿಸಿದರು .

ಶಾಲಾ ಕ್ರೀಡಾ ಅಧ್ಯಾಪಕಿ ಆಗಿರುವಂತಹ ಶ್ವೇತಾ ರಾಜೇಶ್ ಉದ್ಯಾವರ್ ಇವರು ವಿದ್ಯಾರ್ಥಿಗಳಿಗೆ ಬಗ್ಗೆ ಶುಭ ಸಂದೇಶವನ್ನು ನೀಡಿದರು. ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ನ ಅಧ್ಯಕ್ಷರಾದ ರವಿ, ಇವರ ಧರ್ಮಪತ್ನಿ ಶ್ರೀಮತಿ ಸೌಮ್ಯ ರವಿ ಉಚ್ಚಿಲ್ ಸಕ್ರಿಯ ಸದಸ್ಯರಾದ , ಸಂದೇಶ ಐಲ್, ಶ್ರೀಮತಿ ಶಾಲಿನಿ ಕೃಷ್ಣಪ್ಪ ಬೆಂಗರೆ, ಉದ್ಯಾವರ ಭಗವತೀ ಕ್ಷೇತ್ರದ ಕಾರ್ಯದರ್ಶಿ ವಿಶ್ವನಾಥ ಪಿ,ಉದ್ಯಾವರ ಶಾಲಾ ಪ್ರಬಂಧಕರು ಶ್ರೀನಿವಾಸ್ ಉದ್ಯಾವರ, ಶಾಲಾ ಸಮಿತಿ ಸದಸ್ಯ ವಿಶ್ವನಾಥ ಸಿ, ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತಾ ಎಚ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಅಧ್ಯಾಪಕಿ ರಮ್ಯಾ ಇವರು ಮುಕ್ತಾಯದ ಧನ್ಯವಾದಗಳನ್ನು ಸಮರ್ಪಿಸಿದರು. ಶಾಲಾ ಪೋಷಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕೇರಳದ ಪ್ರಸಿದ್ಧ ಓಣಂ ಹಬ್ಬವನ್ನು ಆಚರಿಸುವುದರ ಮೂಲಕ ಪ್ರತಿಯೊಬ್ಬರಿಗೂ ಸಿಹಿ ಊಟವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.



Related posts

ಪಡುಬಿದ್ರೆ-ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ(ಬಾಂಬೆ) ಮತ್ತ್ವಗಂಧ ರೈಲ್ವೆ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟಿಕರಣ:

Mumbai News Desk

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜನಾಕರ್ಷಣೆ ಪಡೆಯುತ್ತಿರುವ ಪುಂಗನೂರು ತಳಿಯ ಹಸು

Mumbai News Desk

ತೊಕ್ಕೊಟ್ಟು ಸಾಯಿ ಪರಿವಾರ್ ನ ಆಹಾರ ಸಾಮಗ್ರಿ‌ ಕಿಟ್ ಸ್ವೀಕರಿಸಿದ ನಿಜವಾದ ಅಶಕ್ತ ಬಂದುಗಳು, ಧನ್ಯತಾ ಭಾವ, ಸಾಯಿ ಸೇವೆಗೆ ಕೃತಜ್ಞತೆ. ತೆನೆಗೆ ಹಾಲೆರೆದು ಉದ್ಘಾಟಿಸಿದ ಜೀವ ರಕ್ಷಕ ಈಶ್ವರ್ ಮಲ್ಪೆ

Mumbai News Desk

ಸುಮಾರು 50 ತಾಸು ಸತತ ಮಳೆ : ಡಹಾಣೂ ಮರಳಿ ಸಹಜ ಸ್ಥಿತಿಯತ್ತ

Mumbai News Desk

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಜಯಲೀಲಾ ಟ್ರಸ್ಟ್ ನ ವತಿಯಿಂದ ಗೌರವ ಧನ

Mumbai News Desk