23.5 C
Karnataka
April 4, 2025
ಸುದ್ದಿ

ಗೊರೆಗಾಂವ್ ಶ್ರೀ ಶಾಂತಾದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಧಾರ್ಮಿಕ ಸಭೆ



ದೇವರ ಅನುಗ್ರಹ , ಹಿರಿಯರ ಆಶೀರ್ವಾದದಿಂದ ನಮ್ಮೆಲ್ಲರ ಕೆಲಸ ಸಫಲವಾಗುವುದು – ಮುಂಡಪ್ಪ ಎಸ್. ಪಯ್ಯಡೆ 

ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ ಜ 4 , ಜನ ಸೇರಿದ್ದು ಅದು ಲೆಕ್ಕ ಅಲ್ಲ, ಯಾರು ಭಕ್ತಿಯಿಂದ ಸೇರಿದ್ದಾರೆ ಅದು ಮುಖ್ಯ. ಯಾವುದೇ ಒಂದು ಕೆಲಸದಲ್ಲಿ ನಾವು ಪ್ರತಿಫಲ ಬಯಸಬಾರದು,  ಯಾವುದೇ ಸಮಯದಲ್ಲಿ ಅದರ ಪ್ರತಿಫಲ ನಮಗೆ ಸಿಗುತ್ತದೆ. ದೇವರ ಅನುಗ್ರಹ ಹಾಗೂ ಹಿರಿಯರ ಆಶೀರ್ವಾದ ಇದ್ದಲ್ಲಿ ನಮ್ಮ ಯಾವುದೇ ಕಾರ್ಯದಲ್ಲಿ ಯಶಸ್ಸಿ ಕಾಣಲು ಸಾಧ್ಯ ಎಂದು ಬಂಟರ ಸಂಘ ಮುಂಬೈಯ ಮಾಜಿ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ ಅವರು ನುಡಿದರು.

ಡಿ. 27ರಂದು ಗೊರೆಗಾಂವ್ ಪಶ್ಚಿಮ ಮೋತಿಲಾಲ್ ನಗರ ಶ್ರೀ ಶಾಂತದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿದ್ದು ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು  ಜೀವನದಲ್ಲಿ ಶಾಂತಿ ಸಿಗಬೇಕಾದರೆ ನಾವು ಉತ್ತಮವಾದ ಮಾತುಕತೆಯನ್ನು ಸಡೆಸಬೇಕು. ಶ್ರೀಮಂತಿಕೆಯಲ್ಲಿ ಎರಡು ವಿಧಗಳಿದ್ದು ಸಾಲವಿಲ್ಲದ ಜೀವನ ಹಾಗೂ  ಶರೀರಕ್ಕೆ ರೋಗ ರುಜಿನವಿಲ್ಲದ ಜೀವನ ಶ್ರೀಮಂತ ಜೀವನವಾಗಿದೆ.  ತಂದೆ ತಾಯಂದಿರ ಮುಂದೆ ಮೃದುವಾಗಿರಬೇಕು.  ಮುಂದಿನ ಜನಾಂಗಕ್ಕೆ ಉತ್ತಮ ಶಿಕ್ಷಣ ನೀಡೋಣ ಶಾಂತಾದುರ್ಗಾದೇವಿ ಅವರು ನಮ್ಮ ದೇವತೆ ನಾ ಪೂಜಿಸುವ ದೇವರು ಸುಖ ಶಾಂತಿಯನ್ನು ನೀಡಲಿ ಎಂದರು.

ಮುಂಬಯಿಯ ಖ್ಯಾತ ಪುರೋಹಿತರು ಹಾಗೂ ಕ್ಷೇತ್ರದ ಧಾರ್ಮಿಕ ಸಲಹೆಗಾರರುದ ವಿದ್ವಾನ್  ಕೃಷ್ಣರಾಜ ತಂತ್ರಿ ಆಶೀರ್ವಚನ ನೀಡುತ್ತ ಭಗವಂತನಿಗೆ ಆಡಂಬರ ಬೇಡ ಭಕ್ತಿ ಅಗತ್ಯ,  ಭಕ್ತಿಗೆ ಭಗವಂತನು ಒಲಿಯುತ್ತಾನೆ. ಎಲ್ಲರ ಸಹಕಾರದಿಂದ ಇಂದು ಇಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ.  ಧರ್ಮದ ಸಂರಕ್ಷಣೆಗೆ ಇಂಥಹ ಧಾರ್ಮಿಕ ಕ್ಷೇತ್ರಗಳು ಹುಟ್ಟಿ ಬೆಳೆಯಬೇಕು. ದೇವಲೋಕದ ಗಂಗೆಯನ್ನು ಭೂಲೋಕಕ್ಕೆ ತಂದವರು ಭಗೀರಥ.  ಅದೇ ರೀತಿ ಉದಯ ಸಾಲ್ಯಾನ್ ಅವರು ಶಾಂತದುರ್ಗೆಯನ್ನು ಉತ್ತಮ ದುರ್ಗೆಯಾಗಿ ಮಾಡಿ  ದೊಡ್ಡ ಬ್ರಹ್ಮ ಕೆಲಸ ಮಾಡಿ ಆ ದೇವಿಯನ್ನು ಸಂತೋಷಪಡಿಸಿದ್ದಾರೆ ಎಂದರು. 

ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರಘುನಾಥ್ ಎನ್ ಶೆಟ್ಟಿಯವರು ಸ್ವಾಗತಿಸುತ್ತಾ ಬ್ರಹ್ಮ ಕಲಶೋತ್ಸವ ವಿಜೃಂಭಣೆಯಲ್ಲಿ ನಡೆಯಲು ಸಹಕರಿಸಿದ ಎಲ್ಲರಿಗೂ ಅಬಾರಿಯಾಗಿದ್ದೇನೆ.  ಶ್ರೀ ದೇವಿಯ ಅನುಗ್ರಹದಿಂದ ನನಗೆ ನೀಡಿದ ಈ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಡೆಸುವ ಪ್ರಯತ್ನ ಮಾಡುತ್ತಿರುವೆನು ಎಂದರು. 

ಬಂಟರ ಸಂಘ ಮುಂಬೈಯ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯ ಅಧ್ಯಕ್ಷ ವಾಗ್ಮಿ ಅಶೋಕ್ ಪಕ್ಕಳ ಅವರು  ಹಿಂದೂ ಧರ್ಮದಲ್ಲಿ ವೈದಿಕ ಸಿದ್ಧಾಂತ – ಜಾನಪದ ನಂಬಿಕೆ ಬಗ್ಗೆ ಧಾರ್ಮಿಕ ಉಪನ್ಯಾಸ  ಇಡುತ್ತಾ ಹಿಂದೂ ಧರ್ಮ ಜಾಗೃತವಾಗಬೇಕಿದ್ದರೆ ಪ್ರತಿಯೊಬ್ಬ ಹಿಂದುಗಳು ಜಾಗೃತವಾಗಬೇಕು. ನಮ್ಮ ಸಂಸ್ಕೃತಿಗಳನ್ನು ಸಂಸ್ಕಾರಗಳನ್ನು ಕೀಳಾಗಿ ಕಾಣಬಾರದು. ಪೇಷನ್ ಹುಚ್ಚಿನಿಂದ ಯುವ ಜನಾಂಗ ಪಾಶ್ಯಾತ ಸಂಸ್ಕೃತಿಯನ್ನು ಅವಲಂಬಿಸಿಕೊಂಡು ಬೆಳೆಯುತ್ತಿದ್ದಾರೆ. ಒಂದು ಕಾಲದಲ್ಲಿ ಬಡತನ ನಮ್ಮಲ್ಲಿ ಆಳವಾಗಿದ್ದು ಈಗ ನಮ್ಮಲ್ಲಿ ಶ್ರೀಮಂತಿಕೆ ಯ ಮದ ಹೆಚ್ಚಾದ್ದರಿಂದ  ನಮ್ಮಲ್ಲಿ ಸಂಸ್ಕೃತಿ ಸಂಸ್ಕಾರಗಳು ಎಷ್ಟು ನಾಶವಾಗಿದೆ ಎಂಬುದನ್ನು ಅರಿವಾಗ ಬೇಕಿದ್ದರೆ ಮಕ್ಕಳು  ಹಾಕುತ್ತಿರುವ ಬಟ್ಟೆಗಳು ಅವರ ವಿಚಾರಗಳು ತಂದೆ ತಾಯಂದಿರಲ್ಲಿ ಭಯವನ್ನು ಹುಟ್ಟಿಸುತ್ತದೆ. ಇಂದಿನ ಮಕ್ಕಳು

 ಹರಿದು ಹಾಕುವ ಬಟ್ಟೆ  ಪೇಷನ್ ಆಗಿದೆ ಅದೆಲ್ಲವೂ  ಮನೆಯಿಂದಲೇ ಪ್ರಾರಂಭವಾಗಿದೆ ಯಾಕೆಂದರೆ ಅದಕ್ಕೆ ಪ್ರೇರಣೆ ನೀಡುವವರೇ ತಾಯಂದಿರು ಅಂತ ಪಾಶ್ವತ ಸಂಸ್ಕೃತಿಯನ್ನು ಈ ದೃಷ್ಟಿಕೋನವನ್ನು ಬದಲಾಯಿಸಬೇಕು ಅದು ಧರ್ಮ ಜಾಗೃತಿ ಯ ಕೇಂದ್ರವಾಗಿರುವ ದೇವಸ್ಥಾನಗಳಿಂದ ಆಗಬೇಕು.

ಇಂದು ಧರ್ಮವೆಂದರೆ ಎಲ್ಲ ಧರ್ಮವನ್ನು ಪ್ರೀತಿಸುವ ಧರ್ಮ ವಾಗಿದೆ. ಎಂದು ಸುದೀರ್ಘವಾಗಿ ಜಾನಪದ ನಂಬಿಕೆಯ ಬಗ್ಗೆ. ವೈದಿಕಸಿದ್ದಾಂತಗಳ ಬಗ್ಗೆ ಮಾತನಾಡಿದರು.

ಬಂಟರ ಸಂಘ, ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಉಮಾ ಕೃಷ್ಣ ಶೆಟ್ಟಿ  ಮಾತನಾಡಿದರು. 

ಈ ಸಂದರ್ಭದಲ್ಲಿ ಮುಂಬಯಿಯಲ್ಲಿರುವ ತುಳು-ಕನ್ನಡಿಗರ ದೇವಸ್ಥಾನ, ದೈವಸ್ಥಾನ ಹಾಗೂ ಇತರ ಧಾರ್ಮಿಕ ಸಂಸ್ಥೆಗಳ ಧರ್ಮದರ್ಶಿಗಳಿಗೆ . ಆಡಳಿತ ಮೊತ್ತೇಸರರಿಗೆ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಶಿಬಿರಗಳ ಗುರುಸ್ವಾಮಿಗಳಿಗೆ ಎಂದು ಗೌರವ ಅರ್ಪಣೆ ಮಾಡಿದರೆ.

ಸಕ್ಸೋಫೋನ್ ವಾದಕ ರಾಜೇಶ್ ಕೋಟ್ಯಾನ್ ಮತ್ತು ದಿನೇಶ್ ಕೋಟ್ಯಾನ್ ಅವರಿಗೆ ಗೌರವ ಪೂರಕವಾಗಿ ಬಂಗಾರದ ನಾಣ್ಯವನ್ನು ನೀಡಿ ಸನ್ಮಾನಿಸಲಾಯಿತು  .

ಸಭಾ ಕಾರ್ಯಕ್ರಮವನ್ನು ಅಶೋಕ್ ಶೆಟ್ಟಿ (ಎಲ್ ಐ ಸಿ) ಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.  ಜೊತೆ ಕೋಶಾಧಿಕಾರಿ ಸಂತೋಷ್ ಕೆ ಶೆಟ್ಟಿ ವಂದನಾರ್ಪಣೆ ಮಾಡಿದರು. 

ರಜನಿ ರಘುನಾಥ್ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮೃತ್ಯುಂಜಯ ಹೋಮ, ಚಂಡಿಕಾ ಹೋಮ, ಭಜನೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ಶಾಂತದುರ್ಗ ದೇವಿಯ ಪಲ್ಲಕಿ ಶೋಭಾ ಯಾತ್ರೆ, ದಿನೇಶ್ ಕೋಟ್ಯಾನ್ ಬಳಗದ ಸಾಂಸ್ಕೃತಿಕ ಕಾರ್ಯಕ್ರಮ, ಕುಣಿತ ಭಜನೆ ನಡೆಯಿತು.

ಕಾರ್ಯಕ್ರಮದ ಪದ್ಮಾವತಿ ಯಸ್ ಸಾಲಿಯಾನ್ ಹಾಗೂ ಉದಯ ಯಸ್ ಸಾಲಿಯಾನ್ (ಆಡಳಿತ ವಿಶ್ವಸ್ಥರು), ಬ್ರಹ್ಮ ಕಲಶೋತ್ಸವ ಸಮಿತಿಯ ಹುರ್ಲಾಡಿ ರಘುವೀರ ಶೆಟ್ಟಿ, ನಲ್ಲೂರು (ಗೌ. ಅಧ್ಯಕ್ಷರು) ರಘುನಾಥ ಯನ್ ಶೆಟ್ಟಿ ಕಾಂದಿವಲಿ(ಅಧ್ಯಕ್ಷರು),ಭೋಜ ಯಸ್ ಶೆಟ್ಟಿ ಕೇದಗೆ (ಉಪಾಧ್ಯಕ್ಷರು), ಚಂದ್ರಶೇಕರ ಜೆ ಸಾಲಿಯಾನ್(ಗೌ. ಪ್ರ. ಕಾರ್ಯದರ್ಶಿ), ಪ್ರವೀಣ್ ವಿ ಪುತ್ರನ್,(ಗೌ.ಕೋಶಾಧಿಕಾರಿ), ಸುಮಂತ್ ಯಸ್ ಕುಂದರ್ (ಜತೆ ಕಾರ್ಯದರ್ಶಿ), ಸಂತೋಷ್ ಕೆ ಶೆಟ್ಟಿ, ಹಾಗೂ ಶ್ರೀಮತಿ ವೈಭವಿ ವಿ ವೈರಾಳ್ ( ಜತೆ ಕೋಶಾಧಿಕಾರಿಗಳು),ಮುಖ್ಯ ಸಲಹೆಗಾರರಾದ ರವೀಂದ್ರ ಬಿ ಸಾಲಿಯಾನ್,ಪ್ರಸಾದ್ ಸಾಲಿಯಾನ್, ಕಲ್ಯಾ, ಅನಿಲ್ ಸಾಲಿಯಾನ್, ಧರ್ಮೇಂದ್ರ ಶೆಟ್ಟಿ,ರಾಜಾರಾಮ್ ಪುಜಾರೆ, ರಾಜೇಶ್ ಶಿರ್ಕೆ, ದತ್ತಾರಾಮ್ ಕೊನ್ವಿಲ್ಕರ್, ವಿಷ್ಣು ವಿ ರಾಣೆ, ಕಾರ್ಯಾಕಾರಿ ಸಮಿತಿ ಸದಸ್ಯರಾದ ವಿನಯ ಪೂಜಾರಿ, ಓಂಕಾರ್ ಶೆಟ್ಟಿ, ಪ್ರಸಾದ್ ಶೆಟ್ಚಿ, ಸಧೀರ್ ಕುಂದರ್, ಉದಯ ಸಾಲಿಯಾನ್, ಸಾಯಿ ಪೂಜಾರಿ, ಅಶೋಕ್ ಶೆಟ್ಟಿ, ಚೇತನ್ ಬಾಂಡ್ಬೆ, ಪ್ರಶಾಂತ ಸೌದಾಗರ್, ಮನೀಶ್ ಶೇರುಗಾರ್,ಗೋಪಾಲ್ ಪೂಜಾರಿ, ಪ್ರಸಾದ್ ಪಾಲನ್ , ಆನಂದ್ ಪೂಜಾರಿ, ಬಾಲಕೃಷ್ಣ ಆಚಾರ್ಯ, ಅಜಿತ್ ಚೌವಾಣ್, ಮಹಿಳಾ ವಿಭಾಗದ  ನ್ಯಾ. ವಿಹಾ ವಿ ರಾಣೆ, (ಕಾರ್ಯಾಧ್ಯಕ್ಷೆ) ಅನುರಾಧ ಯಸ್ ಕರ್ಕೇರ ( ಕಾರ್ಯದರ್ಶಿ) , ಜ್ಯೋತಿ ಸಾಲಿಯಾನ್, ರಶ್ಮಿ ಪುಜಾರೆ, ರಂಜೀತಾ ಶೆಟ್ಚಿ,ವಿಜಯಲಕ್ಷ್ಮಿ ಪಾಂಡೆ, ರಶ್ಮಿ ಶಿರ್ಕೆ, ಸುಮಿತ್ರ ಕುಂದರ್,ಸುಮತಿ ಸಾಲಿಯಾನ್,ವಿಮಲಾ ಕುಂದರ್,ನಿರ್ಮಲಾ ಕಾಂಬ್ಳೆ, ಶಾಂತಿ ಪೂಜಾರಿ, ಲಕ್ಷ್ಮಿ ಶೆಟ್ಚಿ, ಸವಿತಾ ಕುಂದರ್, ಅಶ್ವಿನಿ ಅಂಗಾರ್ಕ್,ರೀಮಾ ಪವಾರ್ , ವೇದಾವತಿ ಶೆಟ್ಚಿ, ಯುವ ವಿಭಾಗದ ಗೋಲು ಶುಕ್ಲಾ, ಸಾಯಿಪ್ರಸಾದ್ ಕುಂದರ್,ಪ್ರಿಯಾಂಕಾ ನಾಯ್ಕ್,ಸಾರ್ಥ್ ಶೆಟ್ಚಿ,ದೇವೇಶ್ ಶೆಟ್ಟಿ,ರಹುಲ್ ಸಾಲಿಯಾನ್,ಅಕ್ಷಯ ಮೊಗವೀರ, ರಚನಾ ರೈ, ರಶ್ಮಿ ರೈ, ಸೌಮ್ಯ ಪೂಜಾರಿ, ಶಶಾಂಕ್ ಶೆಟ್ಟಿ, ಪವನ್ ಶೆಟ್ಚಿ, ರೇಷ್ಮಾ ಪೂಜಾರಿ, ಸುಮಿತ್ ಪೂಜಾರೆ, ಅಲ್ಕಾ ಕದಂ ಹಾಗೂ ಎಲ್ಲಾ ಸದಸ್ಯರೂ ಸಹಕರಿಸಿದರು

==

 ಹಿಂದೂ ಧರ್ಮದ ಪ್ರಗತಿಗಾಗಿ ದೇವಸ್ಥಾನಗಳ ಜೀರ್ಣೋದ್ದಾರ ಅಗತ್ಯವಾಗಿದೆ. ಈ ದೇವಸ್ಥಾನದ ಆಡಳಿತ ಸಮಿತಿ ಉತ್ತಮವಾಗಿ ಶ್ರದ್ಧಾಭಕ್ತಿಯಿಂದ ಕಾರ್ಯವನ್ನು ನಿರ್ವಹಿಸುತ್ತಿದೆ.

ಅಮರನಾಥ ಎಲ್. ಶೆಟ್ಟಿ (CMD, ಎಲ್. ಡಿ. ಎಸ್. ಇನ್ಫೋಟೆಕ್ ಪ್ರೈವೇಟ್ ಲಿ., ಮುಂಬಯಿ) 

==

 ದೇವಸ್ಥಾನದಲ್ಲಿ ವಿಶೇಷ ಶಕ್ತಿ ಇದೆ.  ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಬಾಗ್ಯ ಬೇಕು ಇಲ್ಲಿ ಎಲ್ಲಾ ಸದಸ್ಯರು, ಮುಖ್ಯವಾಗಿ ಮಹಿಳೆಯರು ಉತ್ತವಮಾಗಿ ಕಾರ್ಯ ನಡೆಸುತ್ತಿದ್ದಾರೆ. 

ರವೀಂದ್ರನಾಥ ಭಂಡಾರಿ (CMD, ವೆಲ್‌ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್, ಮುಂಬಯಿ) 

==

 ತುಳು ಕನ್ನಡಿಗರು ಊರಿನಿಂದ ಇಲ್ಲಿಗೆ ಬರುವಾಗ ತಮ್ಮೊಂದಿಗೆ ತಮ್ಮ ಧರ್ಮ ಸಂಸ್ಕೃತಿಯನ್ನು ತಂದಿದ್ದಾರೆ.  ಶಿಕ್ಷಣ ಸಂಸ್ಥೆ ಹಾಗೂ ದೇವಸ್ಥಾನ ನಡುಸುವುದು ಸುಲಭವಲ್ಲ, ದೇವರು ಎಲ್ಲರನ್ನೂ ಹರಸಲಿ.

ನಿತ್ಯಾನಂದ ಹೆಗ್ಡೆ, ಶಿರ್ವ ನಡಿಬೆಟ್ಟು (ಕಾರ್ಯದರ್ಶಿ, ಬೋರಿವಲಿ ಶಿಕ್ಷಣ ಸಮಿತಿ, ಬಂಟರ ಸಂಘ, ಮುಂಬಯಿ) 

===

 ಮಕ್ಕಳಿಗೆ  ಶಾಲಾ ಜೀವನದಲ್ಲಿ ಬಾಲ್ಯದಿಂದಲೇ ಸನಾತನ ಧರ್ಮದ ಬಗ್ಗೆ ತಿಳಿಸಬೇಕಾಗಿದೆ . ಅವರಲ್ಲಿ ಧಾರ್ಮಿಕ ಚಿಂತನೆಯನ್ನು ಮೂಡಿಸಬೇಕಾಗಿದೆ. ಧರ್ಮ ಸಂಸ್ಕೃತಿಯ ಬಗ್ಗೆ ಅವರಿಗೆ ಅರಿವನ್ನು ಉಂಟುಮಾಡಬೇಕಾಗಿದೆ

ರಘು ಎ. ಮೂಲ್ಯ, ಪಾದೆಬೆಟ್ಟು (ಅಧ್ಯಕ್ಷರು, ಕುಲಾಲ ಸಂಘ, ಮುಂಬಯಿ) 

==

 50 ವರ್ಷದಿಂದ ಈ ಕ್ಷೇತ್ರವು ಧಾರ್ಮಿಕ ಕ್ಷೇತ್ರವಾಗಿ ಬೆಳೆದಿದೆ.  ಈ ಕ್ಷೇತ್ರವು ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳೆದಿದೆ. 

ಮನೋಹರ ಎನ್. ಶೆಟ್ಟಿ

 (ಸಮ್ಮೇಳನ ಬಾರ್ ಎಂಡ್ ರೆಸ್ಟೋರೆಂಟ್, ದಹಿಸರ್ ಪೂರ್ವ) 

==

ಸೂರ್ಯ ಚಂದ್ರ ರಿರುವ ತನಕ ಈ ಕ್ಷೇತ್ರವು ಒಂದು ಉನ್ನತ ಮಟ್ಟದ ಧಾರ್ಮಿಕ ಕ್ಷೇತ್ರವಾಗಿ ಬೆಳೆಯಲಿ. ಇಲ್ಲಿ ಧರ್ಮ ಜಾಗೃತಿ ಉಂಟಾಗಲಿ.

ನಿಟ್ಟೆ ಎಂ. ಜಿ. ಶೆಟ್ಟಿ.

ಉದ್ಯಮಿ, ಮಾಜಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ

===

ಉತ್ತರ ಎಲ್ಲರ ಸಹಕಾರ ಬ್ರಹ್ಮ ಕಳಸ ಯಶಸ್ವಿಯಾಗಿದೆ: ಉದಯ ಸಾಲಿಯಾನ್

ದೇವಸ್ಥಾನದ ಟ್ರಸ್ಟಿ, ಉದಯ ಸಾಲಿಯಾನ್ ಪ್ರಾಸ್ತವಿಕ ಮಾತುಗಳನ್ನಾಡುತ್ತಾ  ಸಾತ್ ರಸ್ತಾಯ ನಿರಂಜನ ಸ್ವಾಮೀಜಿಯವರ ಅಪೇಕ್ಷೇಯಂತೆ ಅವರು ದೇವಸ್ಥಾನಕ್ಕೆ ಐವತ್ತು ವರ್ಷ ತುಂಬಿದಾಗ ಬ್ರಹ್ಮ ಕಲಶೋತ್ಸವ ಮಾಡುವ ಸೌಭಾಗ್ಯ ನಮಗೆ ಒದಗಿ ಬಂದಿದೆ. ನಮ್ಮ ತಂದೆಯವರು ಈ ಕ್ಷೇತ್ರಕ್ಕೆ 50 ವರ್ಷ ತುಂಬುವ ಸಂದರ್ಭದಲ್ಲಿ ಬ್ರಹ್ಮಕಲಸ ಮಾಡಬೇಕೆ ಎನ್ನುವ ಸಂಕಲ್ಪವನ್ನು ಹೊಂದಿದ್ದರು ಅದಕ್ಕೆ . ವಿದ್ವಾನ್  ಕೃಷ್ಣರಾಜ ತಂತ್ರಿ ಹಾಗೂ ರಘುನಾಥ್ ಶೆಟ್ಟಿ  ಅವರ ಮತ್ತು ಕ್ಷೇತ್ರದ ಭಕ್ತರು ನಮ್ಮ ಹಿತೈಷಿಗಳ ಸಲಹೆ ಸಹಕಾರದಿಂದ ತಂದೆ ಯ ಕನಸು ನನಸಾಗಿಸುವ ಪ್ರಯತ್ನ ನಡೆದಿದೆ. ಬಹಳಷ್ಟು ಭಕ್ತರು ವಿವಿಧ ರೀತಿಯಲ್ಲಿ ಸೇವೆಗಳನ್ನು ಮಾಡಿ ಬ್ರಹ್ಮಕಲಸ ಯಶಸ್ವಿಯಾಗುವಲ್ಲಿ ನಮ್ಮೊಂದಿಗೆ ಸದಾ ಸಹಕಾರವನ್ನು ನೀಡಿದ್ದಾರೆಎಂದರು.


Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸ್ತನ್ಯಪಾನ ಕೊಠಡಿ ಉದ್ಘಾಟನೆ

Mumbai News Desk

ಬೊಯಿಸರ್ : ಸದ್ಗುರು ಸ್ವಾಮಿ ನಿತ್ಯಾನಂದ ಮಂದಿರದಲ್ಲಿ  63 ನೇ ಪುಣ್ಯತಿಥಿ ಆಚರಣೆ.

Mumbai News Desk

ದಿವಿಜ ಚಂದ್ರಶೇಖರ್ ನಿಧನ

Mumbai News Desk

ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ, ಮಲ್ಪೆ – ರಕ್ತದಾನ ಶಿಬಿರ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ವೈದ್ಯಕೀಯ, ಮನೆ ನಿರ್ಮಾಣಕ್ಕೆ ಸಹಾಯ ಧನದ ಹಸ್ತಾoತರ.

Mumbai News Desk

ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ

Mumbai News Desk