
ಶ್ರೀ ಅಯ್ಯಪ್ಪ ಸ್ಪೋಟ್ಸ್ ಕ್ಲಬ್ (ಲಿ) ಫೋರ್ಟ್, ಮುಂಬಯಿ (27, ಎಸ್.ಎ. ಬ್ರೆಲ್ವಿ ರೋಡ್, ಫೋರ್ಟ್, ಮುಂಬಯಿ-400 001). ಸಂಚಾಲಕತ್ವದ ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ ಇದರ 41ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಇರುಮುಡಿ ಸೇವೆ ಹಾಗೂ ಅನ್ನಸಂತರ್ಪಣೆ ಜನವರಿ 7 ರ ರವಿವಾರ ಫೋರ್ಟ್ ಪರಿಸರದಲ್ಲಿರುವ ವಾಡಿಯಾ ಬಿಲ್ಡಿಂಗ್‌ನ ತಳ ಮಾಳಿಗೆಯಲ್ಲಿ ನ್ಯೂ ಉಡುಪಿ ರೆಸ್ಟೋರೆಂಟ್ ಎದುರುಗಡೆಯಲ್ಲಿ (ಹಲವಾರು ಭಕ್ತಾಭಿಮಾನಿಗಳು ಮತ್ತು ಅಯ್ಯಪ್ಪ ಸೇವಾ ಸಮಿತಿಯ ಸದಸ್ಯರು ಜತೆಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಇರುಮುಡಿ ಹಾಗೂ ಅನ್ನಸಂತರ್ಪಣೆಯ ಸೇವೆಯು ದಿ| ಶ್ರೀ ಎ. ಬಿ. ಶೆಟ್ಟಿಯವರ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಅದ್ದೂರಿಯಿಂದ ಜರಗುತ್ತಿತ್ತು.) ಈ ವರ್ಷವೂ ಕೂಡ ವಿಜೃಂಭಣೆಯಿಂದ ಜರಗಲಿದೆ.
ಕಾರ್ಯಕ್ರಮ :
ಬೆಳಿಗ್ಗೆ 4.00ಕ್ಕೆ : ಗಣಹೋಮ
ಬೆಳಿಗ್ಗೆ 4.30ಕ್ಕೆ : ಶ್ರೀ ದೇವರಿಗೆ ಅಭಿಷೇಕ
ಬೆಳಿಗ್ಗೆ 5.00ಕ್ಕೆ : ಶರಣುಘೋಷ
ಬೆಳಿಗ್ಗೆ 6.30ಕ್ಕೆ : ಮಂಗಳಾರತಿ
ಬೆಳಿಗ್ಗೆ 6.30ರಿಂದ 10.00ರಿಂದ : ಇರುಮುಡಿ ಕಾರ್ಯಕ್ರಮ
ಬೆಳಿಗ್ಗೆ 9.00ರಿಂದ 11.00ರ ವರೆಗೆ : ಭಜನಾ ಕಾರ್ಯಕ್ರಮ ಮಂಡಳಿಯ ಸದಸ್ಯರಿಂದ
ಬೆಳಿಗ್ಗೆ 11.30ರಿಂದ 12.30ರ ವರೆಗೆ : ಧಾರ್ಮಿಕ ಸಭಾ ಕಾರ್ಯಕ್ರಮ.
ಮಧ್ಯಾಹ್ನ 1.00ಕ್ಕೆ : ಮಹಾಮಂಗಳಾರತಿ
ಮಧ್ಯಾಹ್ನ 1.30ಕ್ಕೆ : ಮಹಾಅನ್ನ ಸಂತರ್ಪಣೆ
ಅಪರಾಹ್ನ 3.30ಕ್ಕೆ : ವೃತದಾರಿ ಸ್ವಾಮಿಗಳೊಂದಿಗೆ ಇರುಮುಡಿ ಮೆರವಣಿಗೆಯೊಂದಿಗೆ ಶಬರಿಮಲೆ ಯಾತ್ರೆ
ಅ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಶ್ರೀ ಕಲಾಯಿ ಕೃಷ್ಣ ಶೆಟ್ಟಿ, (ಅಧ್ಯಕ್ಷರು, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ) ಮುಖ್ಯ ಅತಿಥಿಯಾಗಿ ಶ್ರೀ ವೇಣುಗೋಪಾಲ ಶೆಟ್ಟಿ (ಮಾಜಿ ಅಧ್ಯಕ್ಷರು, ಥಾಣೆ ಬಂಟ್ಸ್ ಅಸೋಸಿಯೇಶನ್) ಗೌರವ ಅತಿಥಿಗಳಾಗಿ ಶ್ರೀ ರವೀಂದ್ರ ಭಂಡಾರಿ (ಕಾರ್ಯಾಧ್ಯಕ್ಷರು, ‘ಬಂಟರವಾಣಿ’, ಬಂಟ್ಸ್ ಸಂಘ, ಮುಂಬಯಿ) ಶ್ರೀ ಕರ್ನೂರು ಮೋಹನ್ ರೈ (ಕಲಾ ಪೋಷಕ ಮತ್ತು ಸಮಾಜ ಸೇವಕ) ಶ್ರೀ ಭರತ್ ಶೆಟ್ಟಿ (ಕೈಗಾರಿಕೋದ್ಯಮಿ) ಶ್ರೀ ರಾಜೇಶ್ ಹೆಗ್ಡೆ (ಹೋಟೆಲ್ ಉದ್ಯಮಿ) ಶ್ರೀ ಕರುಣಾಕರ ಪೂಜಾರಿ (ಹೋಟೆಲ್ ಉದ್ಯಮಿ)
ಉಪಸ್ಥಿತರಿರುವರು.
ಆ ಪ್ರಯುಕ್ತ ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳೆಲ್ಲರೂ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ತೀರ್ಥ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಕೃಪಾನುಗೃಹಕ್ಕೆ ಪಾತ್ರರಾಗಿ ಶ್ರೀ ಕ್ಷೇತ್ರ ಶಬರಿಮಲೆ ಯಾತ್ರೆಗೆ ಹೊರಡಲಿರುವ ಸ್ವಾಮಿಗಳನ್ನು ಆಶೀರ್ವದಿಸಬೇಕಾಗಿ ಇನ್ನಂಜೆ ಶ್ರೀ ಚಂದ್ರಶೇಖರ ಗುರುಸ್ವಾಮಿ, ಸಸಿಹಿತ್ತು ಶ್ರೀ ರಾಜ್‌ಕುಮಾರ್ ಗುರುಸ್ವಾಮಿ, ಕಾಪು ಶ್ರೀ ಪ್ರಕಾಶ್ ಗುರುಸ್ವಾಮಿ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ, ಶ್ರೀ ಅಯ್ಯಪ್ಪ ಸ್ಪೋಟ್ಸ್ ಕ್ಲಬ್ (ಲಿ) ಫೋರ್ಟ್, ಮುಂಬಯಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.
.