April 2, 2025
ಮುಂಬಯಿ

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಪ್ರವೇಶ ದ್ವಾರದಲ್ಲಿ ವಾಲ್ ಅಫ್ ಹೇಪಿನೆಸ್ ಉದ್ಘಾಟನೆ.



ಚಿತ್ರ ವರದಿ : ಈಶ್ವರ್ ಐಲ್

ಮುಂಬಯಿ : ನಗರದ ಜನಪ್ರಿಯ ನ್ಯಾಯವಾದಿ ಕನ್ನಡಿಗ ರಾಘವ ಎಂ. ಅವರು ತಮ್ಮ ಪೋಷಕರಾದ ಬಾಳಪ್ಪ ಕೆ ಮತ್ತು ರುಕ್ಮಿಣಿ, ಮರ್ವಂಗೋಡಿ ಅವರ ಸ್ಮರಣಾರ್ಥ ಬೋರಿವಲಿ ಪೂರ್ವ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ (ಎಸ್‌.ಜಿ.ಎನ್‌.ಪಿ.) ದ ಪ್ರವೇಶ ದ್ವಾರದಲ್ಲಿ “ವಾಲ್ ಅಫ್ ಹೇಪಿನೆಸ್” ನ್ನು ಪ್ರಾರಂಭಿಸಿದ್ದು ಜ. 6 ರಂದು ಮುಂಜಾನೆ ಉದ್ಘಾಟಿಸಲಾಯಿತು.

ಎಸ್‌ಜಿಎನ್‌ಪಿಯ ನಿರ್ದೇಶಕರಾದ ಮಲ್ಲಿಕಾರ್ಜುನ ಐಎಫ್‌ಎಸ್ ಮತ್ತು ಸೆಂಟ್ರಲ್ ರೈಲ್ವೇಯ ಎಟಿಎಚ್ ಕೋಚ್ ಮೆಲ್ವಿನ್ ಕ್ರಾಸ್ಟೊ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಬಾಗವಹಿಸಿದ್ದು ನೂರಾರು ಜನರು ಭಾಗವಹಿಸಿದ್ದರು.

ನಿಯಮಗಳ ಪ್ರಕಾರ ಬಟ್ಟೆ, ಶಾಲಾ ಪುಸ್ತಕಗಳು, ಸ್ಟೇಷನರಿಗಳು, ಗೃಹೋಪಯೋಗಿ ವಸ್ತುಗಳು, ಆಟಿಕೆಗಳು ಇತ್ಯಾದಿಗಳನ್ನು ಹ್ಯಾಪಿನೆಸ್ ಜರ್ನಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ದಾನದ ರೂಪದಲ್ಲಿ ಇಡಬಹುದು ಎಂದು ನ್ಯಾಯವಾದಿ ರಾಘವ ಎಂ. ವಿವರಿಸಿದರು. ಇದರಿಂದ ಅಗತ್ಯವಿರುವವರು ಒಂದು ಜೋಡಿ ಬಟ್ಟೆಗಳನ್ನು ಮಾತ್ರ ತೆಗೆದುಕೊಂಡು ಹೋಗುವುದು ಉತ್ತಮ ಎಂದರು.

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ನಿರ್ದೇಶಕರಾದ ಮಲ್ಲಿಕಾರ್ಜುನ್ ಅವರು ಮಾತನಾಡುತ್ತಾ ಜನಸಾಮಾನ್ಯರ ಪ್ರಯೋಜನಕ್ಕಾಗಿ ಬೆಂಬಲ ನೀಡಿದ ಎಲ್ಲರನ್ನು ಶ್ಲಾಘಿಸಿದರು. ಪ್ರತಿಯೊಬ್ಬರೂ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಅದನ್ನು ಯಶಸ್ವಿ ಗೊಳಿಸಬೇಕು ಎಂದರು. ಈ ಕಾರ್ಯಕ್ಕೆ ಜಲರಾಮ್ ಪಟೇಲ್ ಅವರು ವಿನ್ಯಾಸ ಮತ್ತು ವಿಜಯ್ ಬಬಾರಿಯಾ ಅವರು ಹೆಸರಿನ ವಿನ್ಯಾಸವನ್ನು ಮಾಡಿ ಸಹಕರಿಸಿದ್ದಾರೆ.
ಸೆಲೆಬ್ರಿಟಿ ಕೋಚ್ ಮೆಲ್ವಿನ್ ಕ್ರಾಸ್ಟೊ ಅವರು ಮಾತನಾಡಿ ರಾಘವ ಅವರು ಇಂತಹ ಕಾರ್ಯವನ್ನು ಎಲ್ಲರೂ ಬೆಂಬಲಿಸಬೇಕು ಎಂದರು. ಮುಂಬೈಮಾರ್ಚ್ ತಂಡ ಮತ್ತು ಸ್ಕೆಚರ್ಸ್ ಜಿ ರನ್ ಕ್ಲಬ್ ರಾಘವ ಅವರಿಗೆ ಈ ಕಾರ್ಯದಲ್ಲಿ ಬೆಂಬಲಿಸಿದೆ.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಅವಿನಾಶ್ ತವಣಿ ಅವರು ವಂದನಾರ್ಪಣೆ ಮಾಡಿದರು.

.

.

.

.

Related posts

ಬೈಂಗನ್ ವಾಡಿ, ಗೋವಂಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರ;ವಿಜೃಂಭಣೆಯ 45 ನೇ ವಾರ್ಷಿಕೋತ್ಸವ: ಕಲ್ಕುಡ -ಕಲ್ಲುರ್ಟಿ- ಗುಳಿಗ ದೈವಗಳ ಕೋಲ

Mumbai News Desk

ಬಿಲ್ಲವರ ಅಸೋಸಿಯೇಶನ್ ಮಲಾಡ್ ಸ್ಥಳೀಯ ಕಚೇರಿ – 170ನೇ ಗುರು ಜಯಂತಿ ಆಚರಣೆ.

Mumbai News Desk

ಆರೋಹಿ(ಖುಷಿ )ಶಿವ ಪ್ರಸಾದ ಪೂಜಾರಿಗೆ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬಂಗಾರದ ಪದಕ

Mumbai News Desk

ಮುಲುಂಡಿನ ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಮಾಧ್ಯಮದ ಶಾಲೆಯಲ್ಲಿ ಪಾಲಕ ಶಿಕ್ಷಕ ಸಂಘದ ಮಹಾಸಭೆ

Mumbai News Desk

ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ ಸಂಪನ್ನ

Mumbai News Desk

ರತನ್ ಪೂಜಾರಿ ಯವರಿಗೆ ಶ್ರೀ ವಿಷ್ಣು ಮಂದಿರದಲ್ಲಿ ಗೌರವಾರ್ಪಣೆ.

Mumbai News Desk