
ಚಿತ್ರ ವರದಿ : ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಜ.3: ಡೊಂಬಿವಲಿ ಪರಿಸರದಲ್ಲಿ ವಜ್ರ ಮಹೋತ್ಸವನ್ನು ಅಚರಿಸಲು ಸಜ್ಜಾಗಿರುವ ಹಿರಿಯ ಧಾರ್ಮಿಕ ಸಂಸ್ಥೆಯಾದ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 32 ನೇ ವಾರ್ಷಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶನೀಶ್ವರ ಪೂಜೆಯು ಡೊಂಬಿವಲಿ ಪಶ್ಚಿಮ ರೈಲ್ವೆ ನಿಲ್ದಾಣದ ಸಮೀಪದ ಭರತ್ ಬೋಯಿರ್ ಸಭಾಗ್ರಹದಲ್ಲಿ ಸಂಪನ್ನಗೊಂಡಿತು



ಶುಕ್ರವಾರದಂದು ಸಂಜೆ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆದು ಶನಿವಾರ ಬೆಳಿಗ್ಗೆ 9.00 ಗಂಟೆಗೆ ಮಂಡಳಿಯ ಅರ್ಚಕರಾದ ಶುಭಕರ ಭಟ್ ಇವರ ಪೌರೋಹಿತ್ಯದಲ್ಲಿ ಮಂಡಳಿಯ ಧರ್ಮದರ್ಶಿ ಅಶೋಕ ಶೆಟ್ಟಿಯವರ ಉಪಸ್ಥಿತಿಯಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು ಸತ್ಯನಾರಾಯಣ ಪೂಜೆಯಲ್ಲಿ ವೃತಧಾರಿಗಳಾಗಿ ಗೋಪಾಲ ಶೆಟ್ಟಿ ದಂಪತಿ, ಸುನೀಲ್ ಸಂಜೀವ ಶೆಟ್ಟಿ ದಂಪತಿ, ಶ್ರೀಮತಿ ಜ್ಯೋತಿ ಪ್ರಭಾಕರ್ ಶೆಟ್ಟಿ, ಶ್ರೀಮತಿ ಲತಾ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಮಂಡಳಿಯ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ ನಡೆದು ನೆರೆದ ಬಹು ಸಂಖ್ಯಾತ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು ಅನ್ನ ಸಂತರ್ಪಣೆಯ ದಾನಿಗಳಾಗಿ ಅಂಬಿಕಾ ಹೋಟೆಲ್ ಪ್ರಭಾಕರ ಶೆಟ್ಟಿ ದಂಪತಿ, ಸಾಮ್ರಾಟ್ ಬ್ಯಾಂಕ್ವೇಟ್ ಹಾಲ್ ಸುರೇಶ್ ಶೆಟ್ಟಿ ದಂಪತಿ, ಮಂಡಳಿಯ ಅಧ್ಯಕ್ಷರಾದ ಗೋಪಾಲ ಶೆಟ್ಟಿ ದಂಪತಿ, ವ್ಯಾಲ್ಯೂ ಸೆಕ್ಯುರಿಟೀಸ್ ಸುನೀಲ್ ಶೆಟ್ಟಿ ದಂಪತಿ ಸಹಕರಿಸಿದರು. ಮಧ್ಯಾಹ್ನ ಸುರೇಶ್ ಅಂಚನ್ ಮತ್ತು ಕಿಶೋರ್ ಸಾಲ್ಯಾನ್ ಇವರಿಂದ ಶ್ರೀ ಶನೀಶ್ವರ ಕಲಶ ಪ್ರತಿಷ್ಠಾಪನೆಗೊಂಡು ಶ್ರೀ ಶನೀಶ್ವರ ಗ್ರಂಥ ಪಾರಾಯಣ ನಡೆಯಿತು.






ಶನೀಶ್ವರ ಗ್ರಂಥ ಪಾರಾಯಣದಲ್ಲಿ ಹೆಚ್ಚಿನ ಭಕ್ತರು ವಾಚಕರಾಗಿ ಮತ್ತು ಅರ್ಥದಾರಿಯಾಗಿ ಸಹಕರಿಸಿದರು. ರಾತ್ರಿ ಮಂಡಳಿಯ ಸದಸ್ಯ, ಸದಸ್ಯೆರಿಂದ ಭಜನೆ ನಡೆದು ಶನೀಶ್ವರ ದೇವರಿಗೆ ಮಹಾ ಅರತಿ ನಡೆದು ಎಲ್ಲಾ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಯನ್ನು ಮಂಡಳಿಯ ಧರ್ಮದರ್ಶಿ ಅಶೋಕ್ ಶೆಟ್ಟಿ ಮಾಡಿದರು.
ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಶನೀಶ್ವರಪೂಜೆಯು ಸುಸಾಂಗವಾಗಿ ನೇರವೇರಲು ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿಯ ಧರ್ಮದರ್ಶಿ ಆಶೋಕ್ ಶೆಟ್ಟಿ, ಅಧ್ಯಕ್ಷ ಗೋಪಾಲ ಶೆಟ್ಟಿ, ಪೂಜಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಜತ್ತನ್, ಉಪಾಧ್ಯಕ್ಷ ಬ್ರಹ್ಮನಂದ ಶೆಟ್ಟಿಗಾರ್ ಕಾರ್ಯದರ್ಶಿ ಸುನೀಲ್ ಸಂಜೀವ ಶೆಟ್ಟಿ, ಕೋಶಾಧಿಕಾರಿ ಜಯಪ್ರಸನ್ನ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಮೈಂದನ್, ಜೊತೆ ಕೋಶಾಧಿಕಾರಿ ನಾರಾಯಣ ಭಂಡಾರಿ, ಮಹಿಳಾ ಮಂಡಳಿಯ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಹಾಗೂ ಮಂಡಳಿಯ ಸರ್ವ ಸದಸ್ಯರು ಶ್ರಮಿಸಿದರು.










.
.