30.9 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ: 49ನೇ ವಾರ್ಷಿಕ ಮಹಾಪೂಜೆ; ಶನೇಶ್ವರ ಪೂಜೆ





ಡೊಂಬಿವಲಿ ಜ.17: ಡೊಂಬಿವಲಿ ತುಳು ಕನ್ನಡಿಗರ ತವರೂರು, ಇಲ್ಲಿಯ ಹಿರಿಯ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸದಸ್ಯರು ಶ್ರೀ ಮಹಾವಿಷ್ಣು ಮಂದಿರ ಸ್ಥಾಪಿಸಿ ಭಕ್ತರಿಗೆ ಧಾರ್ಮಿಕ ಭಾವನೆಗಳನ್ನು ಮೂಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಮುಂಬ್ರಾ ಮಿತ್ರ ಭಜನಾ ಮಂಡಳಿ ಸಂಚಾಲಕತ್ವದ ಶ್ರೀ ಮಹಾವಿಷ್ಣು ದೇವಸ್ಥಾನದ ಅಡಳಿತ ಮಂಡಳಿ ಪ್ರತಿವರ್ಷ ಅಚ್ಚುಕಟ್ಟಾಗಿ ವಾರ್ಷಿಕ ಮಹಾ ಪೂಜೆಯನ್ನು ಅಯೋಜಿಸುತ್ತಿದು ಈ ವರ್ಷ ಶನೀಶ್ವರ ಮಹಾಪೂಜೆಯನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸುವ ಭಾಗ್ಯ ನನ್ನ ಪಾಲಿಗೆ ಒದಗಿ ಬಂದಿರುವುದು ನನ್ನ ಸೌಭಾಗ್ಯ ಶನೀಶ್ವರ ದೇವರು ನ್ಯಾಯ ನೀಡುವ ದೇವರು ಅವರು ಎಲ್ಲರ ಕಷ್ಟಗಳನ್ನು ಪರಿಹರಿಸಲಿ, ನಿಮ್ಮ ಮಂಡಳಿ ಕನ್ನಡಿಗರಿಗೆ ಧಾರ್ಮಿಕ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಲಿ ಎಂದು ಯುವಉದ್ಯಮಿ ನಿತ್ಯಾನಂದ ಜತ್ತನ್ ನುಡಿದರು.

ಅವರು ಜನವರಿ 17 ರ ಶನಿವಾರದಂದು ಜುನ ಡೊಂಬಿವಲಿಯಲ್ಲಿ ಶ್ರೀ ಮಹಾವಿಷ್ಣು ಮಂದಿರದಲ್ಲಿ ಶ್ರೀ ಶನೀಶ್ವರ ಪೂಜೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅತಿಥಿ ಬಂಟರ ಸಂಘ ಮುಂಬಯಿ ಇದರ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಂಚಾಲಕ ಜಗದಂಬಾ ಮಂದಿರದ ಉಪಾಧ್ಯಕ್ಷ ರವೀಂದ್ರ ವೈ. ಶೆಟ್ಟಿ ಮಾತನಾಡುತ್ತಾ ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸದಸ್ಯರ ಒಗ್ಗಟ್ಟಿಗೆ ಮನಸೋತಿದ್ದೇನೆ ಪ್ರತಿವರ್ಷ ನಮ್ಮವರನ್ನು ಗುರುತಿಸಿ ಅವರನ್ನು ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿರುವ ನಿಮ್ಮ ಚತುರತೆ ಇತರರಿಗೆ ಮಾದರಿ ಸುವರ್ಣ ಮಹೋತ್ಸವದ ಅಂಚಿನಲ್ಲಿರುವ ಈ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇತರರಿಗೆ ಮಾದರಿಯಾಗಿರಲಿ ನಿಮ್ಮ ಸಂಸ್ಥೆಯ ಪ್ರತಿಯೊಂದು ಕೆಲಸ ಕಾರ್ಯ ಶ್ರೀ ಮಹಾವಿಷ್ಣು ದೇವರ ಅನುಗ್ರಹದಿಂದ ನಿರ್ವಿಘ್ನವಾಗಿ ನಡೆಯಲಿ ಎಂದರು.

ಸಮಾಜ ಸೇವಕಿ ಜಯಂತಿ ಬಂಗೇರಾ ಮಾತನಾಡುತ್ತಾ ಇಂದಿನ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡಿದ ನಿಮಗೆಲ್ಲರಿಗೂ ವಂದನೆಗಳು ಈ ಸಂಸ್ಥೆಯಿಂದ ಧಾರ್ಮಿಕ ಕಾರ್ಯದೊಂದಿಗೆ ಸಮಾಜಿಕ ಶೈಕ್ಷಣಿಕ ಕಾರ್ಯಗಳು ನಿರಂತರ ನಡೆಯುತ್ತಿರಲಿ ಎಂದರು.

ಇದಕ್ಕೂ ಮೊದಲು ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು ಈ ಸಂದರ್ಭದಲ್ಲಿ ಮಂಡಳಿಯ ಗೌ.ಅಧ್ಯಕ್ಷ ನಿತ್ಯ ಪ್ರಕಾಶ್ ಪುತ್ರನ್,ಅಧ್ಯಕ್ಷ ಇಂದು ಶೇಖರ್ ಸುವರ್ಣ , ಉಪಾಧ್ಯಕ್ಷ ಅರವಿಂದ ಪದ್ಮಶಾಲಿ ಕಾರ್ಯದರ್ಶಿ ಸಚಿನ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಸಾಲ್ಯಾನ್ ಜತೆ ಕೋಶಾಧಿಕಾರಿ ಲತೇಶ್ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸವೀತಾ ಸಾಲ್ಯಾನ್ ,ಭುವಾಜಿ ಗಳಾದ ಧನಂಜಯ ಗುರಿಕಾರ, ಲೀಲೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಸ್ವಾರ್ಥ ರಹಿತ ಕೆಲಸ ಕಾರ್ಯಗಳಿಗೆ ಶ್ರೀ ಮಹಾವಿಷ್ಣು ದೇವರ ಸಂಪೂರ್ಣ ಅನುಗ್ರಹ ಲಭಿಸಲಿ – ದಿವಾಕರ ಶೆಟ್ಟಿ ಇಂದ್ರಾಳಿ ಡೊಂಬಿವಲಿ,

– ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎಂಬ ಮಂತ್ರವನ್ನು ಮನಗಂಡ ಶ್ರೀ ಮುಂಬ್ರಾ ಮಿತ್ರ ಮಂಡಳಿಯನ್ನು ಹಿರಿಯರು ಸ್ಥಾಪಿಸಿದರು. ಯುವ ಪೀಳಿಗೆ ಈ ಮಂತ್ರದ ಮೂಲಕ ಡೊಂಬಿವಲಿಯಲ್ಲಿ ಶ್ರೀ ಮಹಾವಿಷ್ಣು ದೇವರ ಮಂದಿರವನ್ನು ನಿರ್ಮಿಸಿದೆ. ಮುಂಬ್ರಾ ಮಿತ್ರ ಭಜನಾ ಮಂಡಳಿಯ ಕಾರ್ಯಕಾರಿ ಸಮಿತಿಯ ನಿಸ್ವಾರ್ಥ ಸೇವೆ ಇತರ ಸಂಘಟನೆಗೆ ಮಾದರಿ. ನೀವು ಮಾಡುತ್ತಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಕಂಡು ಅತೀವ ಸಂತೋಷವಾಗುತ್ತಿದೆ. ನಿಮ್ಮ ಸ್ವಾರ್ಥ ರಹಿತ ಕೆಲಸ ಕಾರ್ಯಗಳಿಗೆ ಶ್ರೀ ಮಹಾವಿಷ್ಣು ದೇವರ ಸಂಪೂರ್ಣ ಅನುಗ್ರಹ ಲಭಿಸಲಿ. ಜನ್ಮ ಭೂಮಿಯಿಂದ ಹೊಟ್ಟೆಪಾಡಿಗಾಗಿ ಕರ್ಮಭೂಮಿಗೆ ಆಗಮಿಸಿದ ನಾವು ಒಬ್ಬನೇ ಬದುಕದೆ ಇತರರನ್ನು ಒಗ್ಗೂಡಿಸಿ ಮಠ-ಮಂದಿರ, ಸಂಘ-ಸಂಸ್ಥೆಗಳನ್ನು ಕಟ್ಟಿ ಇತರರಿಗೆ ಸಹಾಯ ಮಾಡುವ ಕೆಲಸವನ್ನು ಮಾಡಿದವರು. ಮುಂಬಯಿ ಮಹಾನಗರದಲ್ಲಿ ಹಲವಾರು ಭಜನಾ ಮಂಡಳಿಗಳಿವೆ. ಆದರೆ ಮುಂಬ್ರಾ ಮಿತ್ರ ಭಜನಾ ಮಂಡಳಿಯಂತಹ ಭಜನಾ ಮಂಡಳಿಗೆ ತನ್ನದೇ ಆದ ಅಸ್ತಿತ್ವ ಇದೆ. ಸಹೋದರತ್ವ ಭಾವನೆಯೊಂದಿಗೆ ಕೆಲಸ ಮಾಡುತ್ತಾ ಈ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕಾರ್ಯ ನಿಮ್ಮದಾಗಲಿ ಎಂದು ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ನುಡಿದರು. ಅವರು ಜ. 17ರ ಶನಿವಾರದಂದು ಮುಂಬ್ರಾ ಮಿತ್ರ ಭಜನಾ ಮಂಡಳಿ ಸಂಚಾಲಕತ್ವದ ಶ್ರೀ ಮಹಾವಿಷ್ಣು ಮಂದಿರದ 49ನೇ ಮಹಾಪೂಜೆ ಮತ್ತು ಶನೀಶ್ವರ ಮಹಾಪೂಜೆಯ ಸಂದರ್ಭದಲ್ಲಿ ಜರಗಿದ ಧಾರ್ಮಿಕ ಸಭೆಯ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ ಮಾತನಾಡುತ್ತಾ, ಮುಂಬ್ರಾ ಮಿತ್ರ ಭಜನಾ ಮಂಡಳಿಯ ಭಜನೆ, ರಾಗ, ತಾಳ, ಕೇಳಲು ಕಿವಿಗೆ ಬಹಳ ಇಂಪಾಗುತ್ತಿದೆ. ನಿಮ್ಮ ಭಜನೆಯನ್ನು ಕೇಳಿದಾಗ ನನಗೆ ನನ್ನ ಬಾಲ್ಯದ ನೆನಪು ಮರುಕಳಿಸಿದೆ. ಏಕಾಗ್ರತೆಯಿಂದ ಭಜನೆ ಹಾಡಿದಾಗ ಅಥವಾ ಕೇಳಿದಾಗ ಮನಸ್ಸು ಪುಳಕಿತಗೊಳ್ಳುತ್ತದೆ. ಮುಂದಿನ ವರ್ಷ ನಡೆಯಲಿರುವ ಸುವರ್ಣ ಮಹೋತ್ಸವ ಅಚರಣೆಯಲ್ಲಿ ನಿಮ್ಮೊಂದಿಗೆ ನಾನು ಇದ್ದೇನೆ ಎಂಬ ಭರವಸೆಯನ್ನು ನೀಡಿದರು.

ಅತಿಥಿ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ಸುಕುಮಾರ್ ಶೆಟ್ಟಿ ಮಾತನಾಡುತ್ತಾ, ಸಮಿತಿಯ ಸಂಘಟಿತ ಕಾರ್ಯ ಚಟುವಟಿಕೆಗಳು ಇತರರಿಗೆ ಮಾದರಿ, ಮನಸ್ಸಿಗೆ ಶಾಂತಿಯನ್ನು ನೀಡುವ ಸಾಧನೆ ಭಜನೆ, ಭಜನೆ ಹಾಡಿದಾಗ ಅಥವಾ ಕೇಳಿದಾಗ ಮನಸ್ಸಿಗೆ ಶಾಂತಿ ಲಭಿಸುತ್ತದೆ. ನಿಮ್ಮ ಪೂಜಾ ಕೈಂಕರ್ಯಗಳನ್ನು ಕಾಣುವಾಗ ಈ ಸ್ಥಳದಲ್ಲಿ ದೇವರ ದಿವ್ಯ ಸಾನಿಧ್ಯ ಇದೆ ಎಂದು ತಿಳಿದು ಬರುತ್ತದೆ. ಮುಂದಿನ ವರ್ಷನಡೆಯಲಿರುವ ನಿಮ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಅಚರಿಸಿ ಯಶಸ್ವಿಗೊಳಿಸೋಣ ಎಂದರು.

ಮುಂಬ್ರಾ ಮಿತ್ರ ಭಜನಾ ಮಂಡಳಿಯ ಯುವ ಕಾರ್ಯಕಾರಿಅಧ್ಯಕ್ಷರ ಮಾತು :ಮುಂದಿನ ವರ್ಷ ಸುವರ್ಣ ಮಹೋತ್ಸವ ವರ್ಷ. ನಾವು ಸುವರ್ಣ ಮಹೋತ್ಸವ ಸಮಿತಿಯನ್ನು ರಚಿಸಿ ಆ ಮೂಲಕ ಮಂದಿರದ ಗರ್ಭ ಗುಡಿಯ ನವೀಕರಣ, ನೂತನ ಪ್ರಭಾವಳಿ ಮಾಡುವ ಯೋಜನೆ ಯೋಚನೆ ನಮ್ಮಲ್ಲಿದೆ. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಹಿತೈಷಿಗಳ ಸಹಕಾರ ಬೇಕು. ಈ ಕಾರ್ಯದಲ್ಲಿ ತಾವೆಲ್ಲರೂ ಹಿತೈಷಿಗಳಾಗಿ ಭಾಗವಹಿಸಬೇಕು. ಫೆಬ್ರವರಿ 8ರ ಆದಿತ್ಯವಾರದಂದು ಬೃಹತ್ ರಕ್ತದಾನ ಶಿಬಿರ ಸಂಯೋಜನೆ ನಡೆಯಲಿದೆ. ಈ ಶಿಬಿರದ ಮೂಲಕ ಸುಮಾರು 200 ಬಾಟ್ಲಿ ರಕ್ತದಾನ ಸಂಗ್ರಹಿಸುವ ಸಂಕಲ್ಪ ನಮ್ಮಲ್ಲಿದೆ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸುವ ಮೂಲಕ ಈ ಎರಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. – ಇಂದು ಶೇಖ‌ರ್ ಸುವರ್ಣ(ಅಧ್ಯಕ್ಷರು: ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ)

.ಸಚಿನ್ ಪೂಜಾರಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಮಂಡಳಿಯು ಕೇವಲ ಧಾರ್ಮಿಕ ಕೆಲಸ ಕಾರ್ಯವನ್ನು ಮಾಡದೆ ರಕ್ತದಾನ ಶಿಬಿರ, ಪುಸ್ತಕ ವಿತರಣೆ, ಭಜನಾ ಕಾರ್ಯಕ್ರಮ, ಮಕ್ಕಳ ಭಜನಾ ಸ್ಪರ್ಧೆಯಲ್ಲಿ ಒಂಬತ್ತು ಬಾರಿ ಪ್ರಶಸ್ತಿಯನ್ನು ಗೆದ್ದಿದೆ ಎನ್ನಲು ಸಂತೋಷವಾಗುತ್ತಿದೆ. ಸಂಸ್ಥೆಯು ಮುಂದಿನ ವರ್ಷ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಅಚರಿಸುವ ಸಂಕಲ್ಪವನ್ನು ಹೊಂದಿದೆ. ಈ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದರು.

ವೇದಿಕೆಯ ಮೇಲೆ ಜಗನ್ನಾಥ ಶೆಟ್ಟಿ, ನಿತಿನ್ ಪ್ರಕಾಶ್ ಪುತ್ರನ್, ಸವಿತಾ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಮಂದಿರದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಶ್ರೀ ಶನೀಶ್ವರ ಮಹಾ ಪೂಜೆ (ಗ್ರಂಥ ಪಾರಾಯಣ) ಅನ್ನ ಸಂತರ್ಪಣೆ ನಡೆಯಿತು.

ಶ್ರೀ ಶನೀಶ್ವರ ಪೂಜೆಯಲ್ಲಿ ಗ್ರಂಥ ಪಾರಾಯಣದ ವಾಚಕರಾಗಿ ರತ್ನಾಕರ್ ಬಂಗೇರ, ಮೋಹನದಾಸ್ ಕೋಟ್ಯಾನ್, ಚಿತ್ರಾಪ್ ಲಕ್ಷ್ಮಣ್, ಕೃಷ್ಣ ಪೂಜಾರಿ, ಪ್ರಶಾಂತ್ ಪೂಜಾರಿ, ಅರವಿಂದ ಪದ್ಮಶಾಲಿ, ಸಚಿನ್ ಪೂಜಾರಿ, ಲೀಲೇಶ್ ಸುವರ್ಣ, ಪ್ರಕಾಶ್ ಭಂಡಾರಿ, ನಾರಾಯಣ ಸುವರ್ಣ, ಜಯ ಶೆಟ್ಟಿ ಅಜೆಕಾರ್ ಭಾಗವಹಿಸಿದರೆ ಅರ್ಥಧಾರಿಗಳಾಗಿ ಇಂದು ಶೇಖ‌ರ್ ಸುವರ್ಣ, ರತ್ನಾಕರ್ ಬಂಗೇರ, ಜಗದೀಶ್ ಕೋಟ್ಯಾನ್, ನವೀನ್ ಸುವರ್ಣ ಬೇಂಗ್ರೆ, ಶೇಖರ್ ಮೆಂಡನ್, ಪ್ರಕಾಶ್ ಭಟ್ ಕಾನಂಗಿ ಭಾಗವಹಿಸಿದರು. ಸಚಿನ್‌ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು.



Related posts

ಡೊಂಬಿವಲಿಯಲ್ಲಿ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವ

Mumbai News Desk

ತುಳುಕೂಟ ಫೌಂಡೇಶನ್ ನಾಲಾಸೋಪಾರ ಮತ್ತು ಶ್ರೀದೇವಿ ಯಕ್ಷಕಲಾ ನಿಲಯದ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ

Mumbai News Desk

ಪತಾರ್ಲಿ ದುರ್ಗಾ ಪರಮೇಶ್ವರಿ ದೇವಿಯ ನವರಾತ್ರಿ ಪೂಜೆ.

Mumbai News Desk

ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ, ಶತಮಾನೋತ್ಸವಾಚರಣೆಗೆ ಪಾದಯಾತ್ರೆಯ ಮೂಲಕ ಚಾಲನೆ. 

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ದಿವ್ಯ ಮೂರ್ತಿಯ ವಿಸರ್ಜನಾ ಮೆರವಣಿಗೆ

Mumbai News Desk

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಅಭಿನಂದನಾ ಸಭೆ

Mumbai News Desk