April 1, 2025
ಪ್ರಕಟಣೆ

ಕರ್ನಾಟಕ ಸಂಘ ಡೊಂಬಿವಲಿ – ಲಲಿತ ಕಲಾ ವಿಭಾಗದ ವತಿಯಿಂದ ಭಜನಾ ಸ್ಪರ್ಧೆ ಹಾಗೂ ಕುಣಿತ ಭಜನಾ ಸ್ಪರ್ಧೆಗೆ ಆಹ್ವಾನ

ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತ ಕಲಾ ವಿಭಾಗದ ವತಿಯಿಂದ ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಮಕ್ಕಳಿಗಾಗಿ ಕುಣಿತ ಭಜನಾ ಸ್ಪರ್ಧೆ ಮತ್ತು 18 ವರ್ಷ ಮೇಲ್ಪಟ್ಟ ಕನ್ನಡಿಗರಿಗಾಗಿ ಭಜನ ಸ್ಪರ್ಧೆ ಫೆಬ್ರವರಿ 18, 2024 ಆದಿತ್ಯವಾರ ಬೆಳಿಗ್ಗೆ 11 ರಿಂದ ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ನಡೆಯಲಿದೆ.

ಸ್ಪರ್ಧೆಯ ನಿಯಮಗಳು :

ಪ್ರತಿ ತಂಡದಲ್ಲಿ ಹಾರ್ಮೋನಿಯಂ, ತಬಲಾ ಹಾಗೂ ಭಜನಾಕಾರರು ಸೇರಿದಂತೆ 9 ರಿಂದ 11 ಮಂದಿ ಭಾಗವಹಿಸಬಹುದು. ಒಂದು ತಂಡಕ್ಕೆ ಗರಿಷ್ಠ 15 ನಿಮಿಷಗಳ ಕಾಲವಕಾಶವಿದ್ದು, ಪ್ರತಿ ತಂಡ ಮೂರು ಹಾಡುಗಳನ್ನು ಹಾಡಬಹುದು. ಮುಂದಾಳಾಗಿ ಒಬ್ಬರು ಒಂದೇ ಹಾಡು ಹಾಡಬೇಕು. ಮೂರು ಹಾಡುಗಳಲ್ಲಿ ಎರಡು ಪುರಂದರದಾಸರ ಹಾಡು ಹಾಗೂ ಒಂದು ಶಿವನ ಹಾಡನ್ನು ಹಾಡಬಹುದು. ಮುಂಬಯಿಯ ಮತ್ತು ಪರಿಸರದ ಕನ್ನಡಿಗರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ತಬಲಾ, ಹಾರ್ಮೋನಿಯಂ ವಾದಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಒಂದು ತಂಡದಲ್ಲಿ ಭಾಗವಹಿಸಿದವರು ಇನ್ನೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಕುಣಿತದ ಹಾಡುಗಳಿಗೆ ಅವಕಾಶವಿಲ್ಲ. ಸ್ಪರ್ಧಾಳುವಿನ ಸರದಿ ಆರಂಭವಾಗುವ ಮೊದಲು ತಯಾರಿಗಾಗಿ ಮೂರು ನಿಮಿಷಗಳ ಸಮಯ ಕೊಡಲಾಗುವುದು. ನಿಗದಿತ ಸಮಯದಲ್ಲಿ ಸ್ಪರ್ಧಾ ತಂಡಗಳು ಸಿದ್ಧರಾಗಿರಬೇಕು. ಸಮಯದಲ್ಲಿ ಉಪಸ್ಥಿತರಾಗಿರದೆ ಇದ್ದಲ್ಲಿ ಬಳಿಕ ಅವಕಾಶ ಕೊಡಲಾಗುವುದಿಲ್ಲ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ಪ್ರತೀ ತಂಡದಲ್ಲೂ ಸ್ಪರ್ಧಾಳುಗಳ ಹಾಗೂ ಹಿನ್ನಲೆಯವರ ಹೆಸರುಗಳನ್ನು ಮುಂಚಿತವಾಗಿ ತಿಳಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡ ಒಪ್ಪಿಗೆಯ ಖಚಿತತೆ ಮುಂಚಿತವಾಗಿ ದೃಢಪಡಿಸಬೇಕು. ಸ್ಪರ್ಧೆಯ ನಿಯಮಾವಳಿಗಳನ್ನು ಬದಲಿಸುವ ಹಕ್ಕು ಸಂಘವು ಕಾಯ್ದಿರಿಸಿದೆ. ಒಟ್ಟು12 ತಂಡಗಳಿಗೆ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದ ತಂಡಗಳಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧೆಯು ಮಂಜುನಾಥಶಾಲಾ ಸಭಾಗೃಹದಲ್ಲಿ ಅಪರಾಹ್ನ ಗಂಟೆಗೆ ಜರಗಲಿರುವುದು.

ಒಪ್ಪಿಗೆಯನ್ನು ಸ್ವೀಕರಿಸುವ ಕೊನೆಯ ದಿನಾಂಕ 12.02.2024.

ಈ ಸ್ಪರ್ಧೆಯಲ್ಲಿ ಬಹುಮಾನ ಪ್ರಥಮ ರೂ. 20,000/- ದ್ವಿತೀಯ ರೂ. 17,000/- ಹಾಗೂ ತೃತೀಯ ರೂ. 14,000/- ಮತ್ತು ಫಲಕಗಳನ್ನು ನೀಡಲಾಗುವುದು.

17 ವರ್ಷದವರೆಗಿನ ಮಕ್ಕಳಿಗೆ ಪುರಂದರ ದಾಸರ ಕುಣಿತ ಭಜನಾ ಸ್ಪರ್ಧೆ

ಸ್ಪರ್ಧೆಯ ನಿಯಮಗಳು :

  1. ಒಟ್ಟು 10 ತಂಡಗಳಿಗೆ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದ ತಂಡಗಳಿಗೆ ಆದ್ಯತೆ ನೀಡಲಾಗುವುದು.
  2. ಪುರಂದರ ದಾಸ ಸಾಹಿತ್ಯದ ಸಂಕೀರ್ತನೆಗಳಿಗೆ ಆದ್ಯತೆ.
  3. ಕಾಲವಕಾಶ ಗರಿಷ್ಠ 10 ನಿಮಿಷಗಳು
  4. ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕುಣಿತ ಭಜನೆ ಆರಂಭವಾಗಲಿದೆ.
  5. ಒಂದು ತಂಡದಲ್ಲಿ 8 ಮಕ್ಕಳು ಮತ್ತು ಇಬ್ಬರು ಹಿಮ್ಮೇಳ ವಾದಕರು ಭಾಗವಹಿಸಬಹುದು.
  6. ಇಂದಿನ ಭಜನಾ ಸ್ಪರ್ಧೆಯಲ್ಲಿ ಹಾಡುವ ಹಾಡುಗಾರರು ಕುಣಿತ ಭಜನಾ ಸ್ಪರ್ಧೆಯಲ್ಲಿ ಹಾಡುವಂತಿಲ್ಲ ( ಹಿಮ್ಮೇಳ ವಾದಕರಿಗೆ ಇದು ಅನ್ವಯಿಸುವುದಿಲ್ಲ).
  7. 17 ವರ್ಷದ ಒಳಗಿನ ಕನ್ನಡಿಗರ ಮಕ್ಕಳಿಗೆ ಮಾತ್ರ ಅವಕಾಶ.
  8. ಸಮವಸ್ತ್ರವು ಭಜನಾ ಸಂಪ್ರದಾಯಕ್ಕೆ ಹೊಂದಿಕೊಂಡಿರಬೇಕು.
  9. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 12000/-, ದ್ವಿತೀಯ ಬಹುಮಾನ 10,000/- ಮತ್ತು ತೃತೀಯ ಬಹುಮಾನ 8,000/- ಹಾಗೂ ಫಲಕಗಳನ್ನು ನೀಡಿ ಗೌರವಿಸಲಾಗುವುದು.
  10. ಹೆಸರು ನೋಂದಾಯಿಸಲು ಕೊನೆಯ ದಿನಾಂಕ 12.02.2024

ಹೆಚ್ಚಿನ ವಿವರಗಳಿಗೆ ಇವರನ್ನು ಸಂಪರ್ಕಿಸಬಹುದು

ಕಚೇರಿಯ ಮೊ.ನಂ. 77387 58589,
ಶ್ರೀಮತಿ ಸುಷ್ಮಾ ಡಿ. ಶೆಟ್ಟಿ 983350022,
ರಮೇಶ್ ಎ. ಶೆಟ್ಟಿ-9967996663,
ವಸಂತ ಎನ್. ಸುವರ್ಣ 9892833623

ಕನ್ನಡಿಗರೆಲ್ಲರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಬೇಕಾಗಿ ಸಂಘದ ಪರವಾಗಿ
ಶ್ರೀ ಸುಕುಮಾರ ಎನ್. ಶೆಟ್ಟಿ (ಅಧ್ಯಕ್ಷರು)
ಶ್ರೀ ಲೋಕನಾಥ ಎ. ಶೆಟ್ಟಿ (ಉಪಾಧ್ಯಕ್ಷರು)
ಶ್ರೀ ದಿವಾಕರ ಟಿ. ಶೆಟ್ಟಿ ಇಂದ್ರಾಳಿ (ಕಾರ್ಯಾಧ್ಯಕ್ಷರು)
ಶ್ರೀ ದೇವದಾಸ ಎಲ್. ಕುಲಾಲ್ (ಉಪ-ಕಾರ್ಯಾಧ್ಯಕ್ಷರು)
ಪ್ರೊ ಅಜಿತ್ ಬಿ. ಉಮ್ರಾಣಿ (ಗೌ.ಪ್ರ.ಕಾರ್ಯದರ್ಶಿ)
ಶ್ರೀ ದಿನೇಶ್ ಬಿ. ಕುಡ್ವ (ಜೊತೆ ಕಾರ್ಯದರ್ಶಿ)
ಶ್ರೀ ತಾರಾನಾಥ ಎಸ್. ಅಮೀನ್ (ಗೌ. ಕೋಶಾಧಿಕಾರಿ) ಶ್ರೀಮತಿ ವಿಮಲ ವಿ. ಶೆಟ್ಟಿ (ಜೊತೆ ಕೋಶಾಧಿಕಾರಿ)
ವಾಚನಾಲಯ ವಿಭಾಗದ ವತಿಯಿಂದ ಶ್ರೀಮತಿ ಸುಷ್ಮಾ ಡಿ. ಶೆಟ್ಟಿ (ಕಾರ್ಯಾಧ್ಯಕ್ಷೆ) ಶ್ರೀ ರಮೇಶ ಎ. ಶೆಟ್ಟಿ (ಕಾರ್ಯದರ್ಶಿ) ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ವಸಯಿ ತಾಲೂಕ ಮೊಗವೀರ ಸಂಘದ ಆಯೋಜನೆಯಲ್ಲಿ, ಜ.21ಕ್ಕೆ ವಾಲಿಬಾಲ್, ತ್ರೋ ಬಾಲ್ ಪಂದ್ಯಾಟ.

Mumbai News Desk

ಕುಮಾರ  ಕ್ಷತ್ರಿಯ ಸಂಘ  59 ನೇ ವಾರ್ಷಿಕ ಮಹಾಸಭೆ, ಪೆ.16 :   ಸತ್ಯನಾರಾಯಣ ಮಹಾಪೂಜೆ, ಹಳದಿ ಕುಂಕುಮ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

ಶ್ರೀ ಮಹಾವಿಷ್ಣು ಮಂದಿರದಲ್ಲಿ ಮಾರ್ಚ್ 16 ಶನಿವಾರ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ

Mumbai News Desk