
ಮುಂಬಯಿ; ಅನನ್ಯ ದ್ರಷ್ಟಾರ ಜಯ ಸಿ.ಸುವರ್ಣ ಅವರ ಜೀವನ ಸಾಧನೆಯ ಕುರಿತು ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ಅನಿತಾ ಪಿ. ತಾಕೊಡೆಯವರು ರಚಿಸಿದ, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಕಟಿಸಿದ “ಸುವರ್ಣಯುಗ” ಗ್ರಂಥ ಬಿಡುಗಡೆ ಸಮಾರಂಭವು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ.ಸುವರ್ಣ ಸಭಾಂಗಣದಲ್ಲಿ ಜನವರಿ 14ರಂದು ಸಂಜೆ 4ಗಂಟೆಗೆ ನೆರವೇರಲಿದೆ.

ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದಾರೆ. “ಸುವರ್ಣಯುಗ” ಗ್ರಂಥವನ್ನು ಕರ್ನಾಟಕದ ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಜನಾರ್ದನ ಪೂಜಾರಿಯವರು ಬಿಡುಗಡೆಗೊಳಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರಾದ ಅಡ್ವೆ ರವೀಂದ್ರ ಪೂಜಾರಿಯವರು ಗ್ರಂಥವನ್ನು ಪರಿಚಯಿಸಲಿದ್ದಾರೆ. ಅಭಿನಂದನ ಭಾಷಣವನ್ನು ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ನ್ಯಾಯವಾದಿ ಆರ್. ಪದ್ಮರಾಜ್ ಅವರು ಮಾಡಲಿದ್ದಾರೆ
ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಕೆ ಹರಿಪ್ರಸಾದ್, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಉಮನಾಥ್ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಎಂಎಲ್‍ಸಿ ಹರೀಶ್ ಕುಮಾರ್, ಮಾಜಿ ಸಚಿವರಾದ ಕೆ. ವಸಂತ್ ಬಂಗೇರ, ಗೋಪಾಲ್ ಪೂಜಾರಿ, ಬಿಜೆಪಿಯ ಗೌರವ ಕಾರ್ಯದರ್ಶಿ ವಿ.ಸುನಿಲ್ ಕುಮಾರ್, ಸಚಿವ ಯಶ್‍ಪಾಲ್ ಸುವರ್ಣ, ವೇದವ್ಯಾಸ ಕಾಮತ್ ಮಾಜಿ ಮಂತ್ರಿಗಳಾದ ಅಭಯ ಚಂದ್ರ ಜೈನ್, ರಮನಾಥ ರೈ, ರುಕ್ಮಯ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್. ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್.ಸಾಯಿ ರಾಮ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾದ ನವೀನ್‍ಚಂದ್ರ ಡಿ. ಸುವರ್ಣ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾಕ್ಟರ್ ಮೋಹನ್ ಆಳ್ವ, ಭಾರತ್ ಕೋ-ಆಪರೇಟಿವ್ ಬ್ಯಾಂಕ್‍ನ ಮಾಜಿ ಉಪಕಾರ್ಯಾಧ್ಯಕ್ಷರಾದ ನ್ಯಾಯವಾದಿ ರೋಹಿಣಿ ಸಾಲ್ಯಾನ್, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್‍ನ ಮಾಲಕರಾದ ರವಿ ಎಸ್. ಶೆಟ್ಟಿ ಕೆಪಿಸಿಸಿಯ ಗೌರವ ಕಾರ್ಯದರ್ಶಿ ಮಿಥುನ್ ರೈ, ಸಾಯಿಕೇರ್ ಲಾಜಿಸ್ಟಿಕ್‍ನ ಮಾಲಕರಾದ ಸುರೇಂದ್ರ ಎ. ಪೂಜಾರಿ ಬಿಲ್ಲವರ ಎಸೋಸಿಯೇಶನ್ ಬೆಂಗಳೂರು ಇದರ ಅಧ್ಯಕ್ಷರಾದ ವೇದ್‍ಕುಮಾರ್, ಉದ್ಯಮಿ ಊರ್ಮಿಳ ರಮೇಶ್ ಕುಮಾರ್ ಇವರು ಪಾಲ್ಗೊಳ್ಳಲಿದ್ದಾರೆ. ಭಾರತ್ ಕೋ-ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕರಾದ ಭಾಸ್ಕರ್ ಸಾಲಿಯನ್ ಮತ್ತು ಉದ್ಯಮಿ ಶಶಿ ಎಂ.ಸಾಲ್ಯಾನ್ ಅವರು ಉಪಸ್ಥಿತರಿರುವವರು.
ಮುಂಬಯಿ ಬಿಲ್ಲವರ ಎಸೋಸಿಯೇಶನ್‍ನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ. ಸಾಹಿತ್ಯ ಅಭಿಮಾನಿಗಳು, ಸರ್ವ ಸಮಾಜದ ಬಾಂಧವರು ಮತ್ತು ಜಯ ಸುವರ್ಣ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಸೂರ್ಯಕಾಂತ್ ಜಯ ಸುವರ್ಣ, ಅವರ ಕುಟುಂಬಸ್ಥರು ಮತ್ತು ಹಿತೈಷಿಗಳು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.
.
.
.
.
.
.
.
.
.
.
.