September 6, 2026
Mumbai News Kannada
ಪ್ರಕಟಣೆ

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, ಡಿ. 1ರಂದು 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ,





ಮುಂಬಯಿ ಉಪನಗರ ದಹಿಸರ್ ಪೂರ್ವದ ಸಮಾಜಸೇವಕ, ಧಾರ್ಮಿಕ ಚಿಂತಕ ಶ್ರೀ ಜಯ ಸ್ವಾಮಿ ದಹಿಸರ್, ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ ಡಿ.1 ರಂದು ರವಿವಾರ 18ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಪೂಜೆಯು ರಾಧಾಕೃಷ್ಣ ಮಂದಿರ ಹಾಲ್, ಸೈಂಟ್ ಥಾಮಸ್ ಸ್ಕೂಲ್ ಬಳಿ, ರಾವಲ್ಪಾಡ, ದಹಿಸರ್ ಪೂರ್ವ ಇಲ್ಲಿ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, ಅಂಧೇರಿ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ ಗಂಟೆ 5:30 ಕ್ಕೆ ಮಹಾ ಗಣಪತಿ ಹೋಮ, 7:30ಕ್ಕೆ ಪ್ರಾಣಪ್ರತಿಷ್ಠೆ, ಪೂಜೆ, ಅರ್ಚನೆ, 8:00 ರಿಂದ 9:00ರ ತನಕ ನಾರಾಯಣಿಯಂ, ಕೇರಳ ಗ್ರೂಪ್ ದಹಿಸರ್ ಇವರಿಂದ, 10:00 ರಿಂದ 12:30ರ ತನಕ ಭಜನೆ – ಶ್ರೀದುರ್ಗಾಪರಮೇಶ್ವರಿ ಶನೀಶ್ವರ ದೇವಸ್ಥಾನ ರಾವಾಲ್ವಾಡ, ದಹಿಸರ್ ಪೂರ್ವ ಇವರಿಂದ

12:30 ರಿಂದ 1:00ರ ತನಕ ದೀಪಾರಾಧನೆ, ಮಹಾ ಪೂಜೆಯನ್ನು ಶ್ರೀ ಚಂದ್ರಹಾಸ್‌ ಗುರುಸ್ವಾಮಿಯವರು ನಡೆಸಲಿದ್ದಾರೆ. ಬಳಿಕ ತೀರ್ಥಪ್ರಸಾದ
ವಿತರಣೆ ನಡೆಯಲಿದೆ. 1:00ರಿಂದ 3:00ರ ತನಕ ಸಾರ್ವಜನಿಕ ಅನ್ನದಾನ ಸೇವೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು, ಗುಂಡ್ಯಡ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.- 9902581150, 8452054984 ಕ್ಕೆ ಸಂಪರ್ಕಿಸಬಹುದು.



Related posts

ಡೊಂಬಿವಿಲಿ ಶ್ರೀ ಜಗದಂಬಾ ಮಂದಿರ: ಅ. 16 ರಂದು ಚಂಡಿಕಾ ಹೋಮ ಹಾಗೂ ಅನ್ನಸಂತರ್ಪಣೆ

Mumbai News Desk

ಮೇ 15: ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬ ಆಚರಣೆ.

Mumbai News Desk

ಪತ್ರಕರ್ತ ಪ್ರದೀಪ್ ಕುಮಾರೈ ಐಕಳಬಾವರವರಿಗೆ ಸುಳ್ಯ ಬಂಟರ ಸಂಘದಿಂದ ಸನ್ಮಾನ

Mumbai News Desk

ಮಾ. 1: ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮಾವೇಶ

Mumbai News Desk

ಡಿ.24 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ, ಅನ್ನ ಸಂತರ್ಪಣೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk