
ಮುಂಬಯಿ ಜ 11. ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್, ಇದರ ಸುವರ್ಣ ಸಂಭ್ರಮದ ಪ್ರಯುಕ್ತ ವರ್ಷಾಂಪೂರ್ತಿ ನಡೆಯುವ ಸರಣಿ ಕಾರ್ಯಕ್ರಮಗಳು ಏಪ್ರಿಲ್ ೨೦೨೩ ನಿಂದ ಏಪ್ರಿಲ್ ೨೦೨೪ ರ ವರೆಗೆ ವಿವಿಧ ಧಾರ್ಮಿಕಕ್ಷೇತ್ರ ದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದ ಆಯೋಜನೆಯ ಪ್ರಕಾರ, ಈಗಾಗಲೇ ಮಂಗಳೂರು ಸೋಮೇಶ್ವರ, ಉತ್ತರಾಖಂಡದ ಬದ್ರಿನಾಥ ಕ್ಷೇತ್ರ, ಹರಿದ್ವಾರ್, ರಿಷಿಕೇಶ್ ಪುಣ್ಯ ಸ್ಥಳದಲ್ಲಿ ವಿಶೇಷ ಸೇವೆಯ ಮುಖೆನ ಸಂಪನ್ನಗೊಂಡಿದೆ. ಮುಂಬೈ ಯಲ್ಲಿ ನೆಲೆಸಿರುವ ಧಾರ್ಮಿಕ ಭಕ್ತಿಕೇಂದ್ರದ್ ಮುಖೆನ ಶನೀಶ್ವರ ದೇವಸ್ಥಾನದಲ್ಲಿ ಶನೀಶ್ವರ ದೇವರ ಕಥಾಶ್ರವಣ ಹಾಗು ಕಲ್ಪೋಕ್ತ ಪೂಜೆ ತಾ ೧೩.೧.೨೦೨೪ ರಿಂದ ೨೭.೧.೨೦೨೪ ರ ವರೆಗೆ ಜರಗಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿರ ೧೩.೧.೨೦೨೪ ಶನಿವಾರ, ಶ್ರೀ ವೆಸ್ಟೆರಾನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಫೋರ್ಟ್, ತಾ ೨೦.೧.೨೦೨೪ ಶನಿವಾರ, ಶ್ರೀ ಶನೀಶ್ವರ ದೇವಸ್ಥಾನ ನೆರೂಲ್, ತಾ ೨೭.೧.೨೦೨೪ ಶನಿವಾರ ಶ್ರೀ ರಾಧಾಕೃಷ್ಣ ಶನೀಶ್ವರ ದೇವಸ್ಥಾನ, ಡೊಂಬವಳಿ ಯವರು ಭಾಗವಹಿಸಲಿದ್ದಾರೆ. ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಗಂಧ ಪ್ರಸಾದ ಸೀಕರಿಸಬೇಕಾಗಿ
ಕಾರ್ಯಕಾರಿ ಸಮಿತಿ ವಿನಂತಿಸಿದೆ.
.
.
.
.