
ಕುಂದಾಪುರ ತಾಲೂಕಿನ ಅಂಪಾರು, ಮೂಡುಬಗೆ ನಿವಾಸಿ ಪುನೀತ (15)ಮತ್ತು ಅವರ ಅಣ್ಣ ಚೇತನ್(18) ರವರು ದಿನಾಂಕ 10.01.2024 ಬುಧವಾರ ಉಡುಪಿಯ ಹತ್ತಿರದ ಉಪ್ಪೂರು ಬಳಿ ದ್ವಿಚಕ್ರ ವಾಹದಲ್ಲಿ ತೆರಳುತ್ತಿರುವಾಗ ಅಪಘಾತವಾಗಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರಾದರು ಚೇತನ್ ಅವರು ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದರು. ಪುನೀತ್ ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನಡೆಸುತ್ತಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವಿದಾಗಿ ವೈದ್ಯರು ತಿಳಿಸಿದ್ದಾರೆ. ಇವರು ಬಡ ಕುಟುಂಬದವರಾಗಿದ್ದು, ವೈದ್ಯಕೀಯ ವೆಚ್ಚವನ್ನು ಭರಿಸಲು ಕಷ್ಟವಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಸಹಾಯ ಹಸ್ತ ನೀಡಲು ಮನವಿ ಮಾಡಿಕೊಂಡಿದ್ದಾರೆ.
ದಾನಿಗಳು ಬ್ಯಾಂಕ್ ಖಾತೆ (ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್, ಬ್ರ್ಯಾಂಚ್ ಅಂಪಾರು,
ಖಾತೆ ಸಂಖ್ಯೆ -89056914713
IFSC- KVGB0008108)ಗೆ ಹಣ ಜಮೆ ಮಾಡುವಂತೆ ಪುನೀತ್ ನ ತಾಯಿ ಮತ್ತು ಮಾವ ಸುಧೀರ್ (ಮೊಬೈಲ್ ನಂ.9739970887) ಮನವಿ ಮಾಡಿಕೊಂಡಿದ್ದಾರೆ.