
ಮುಂಬಯಿ , ಜ.12. ಮೀರಾಭಾಯಂದರ್ ಪರಿಸರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಂಟ್ಸ್ ಫೋರಮ್ ಮೀರಾ ಭಾಯಂದರಿನ ವಾರ್ಷಿಕ ಭಜನಾ ಮಂಗಳೋತ್ಸವವು ಜ.14ರಂದು ಮಧ್ಯಾಹ್ನ ಗಂಟೆ 2 ರಿಂದ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ಮೀರಾಭಾಯಂದರ್ ರಸ್ತೆಯಲ್ಲಿರುವ ಅಶ್ವಿನಿ ಬ್ಯಾಂಕ್ವೆಟ್ ಸಭಾಗ್ರಹ(ಕ್ರೌನ್ ಹೋಟೆಲ್ಸ್) ದಲ್ಲಿ ಜರುಗಲಿದೆ.
ಆರಂಭದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಸಂಸ್ಥೆಯ ಸದಸ್ಯ,ಸದಸ್ಯೆಯರಿಂಧ ಭಜನೆ ,ಹಳದಿಕುಂಕುಮ ಹಾಗೂ ಕುಣಿತ ಭಜನೆ ನಡೆಯಲಿದೆ. ಕೊನೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಉದಯ ಎಮ್.ಶೆಟ್ಟಿಯವರ ಅದ್ಯಕ್ಷತೆಯಲ್ಲಿ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮನೋರಮಾ ಎನ್.ಬಿ.ಶೆಟ್ಟಿ, ಸ್ವರ್ಣಲತಾ ಅರುಣೋದಯ ರೈ,ಡಾ.ಪ್ರಾರ್ಥಸ್ವಿನಿ ಗೌರೀಶ್ ಶೆಟ್ಟಿ ಹಾಗೂ ಲತಾ ಸಂತೋಷ್ ಶೆಟ್ಟಿ ಆಗಮಿಸಲಿರುವರು.ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ಪರಿಸರದ ತುಳುಕನ್ನಡಿಗರು ಸಕುಟುಂಬ ಪರಿವಾರದೊಂದಿಗೆ ಆಗಮಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಉದಯ ಎಮ್.ಶೆಟ್ಟಿ ಮಲಾರ್ ಬೀಡು, ಉಪಾಧ್ಯಕ್ಷರುಗಳಾದ ದಿವಾಕರ್ ಎಮ್.ಶೆಟ್ಟಿ ಶಿರ್ಲಾಲ್ ಮತ್ತು ಹರ್ಷಕುಮಾರ್ ಡಿ.ಶೆಟ್ಟಿ ಪಾಂಗಾಳ, ಗೌರವ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಜೊತೆ ಕಾರ್ಯದರ್ಶಿ ಶರ್ಮಿಳಾ ಕೆ.ಶೆಟ್ಟಿ, ಜೊತೆ ಕೋಶಾಧಿಕಾರಿ ಮಧುಕರ್ ಎಸ್.ಶೆಟ್ಟಿ ಅಜೆಕಾರು, ಸಂಚಾಲಕ ಅನಿಲ್ ಆರ್.ಶೆಟ್ಟಿ ಎಲ್ಲೂರು ಒಡಿಪರಗುತ್ತು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಕವಾಣಿ ಡಿ.ಶೆಟ್ಟಿ ತಾಳಿಪಾಡಿಗುತ್ತು , ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ್ ಡಿ.ಶೆಟ್ಟಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ನವೀನಾ ಜೆ.ಭಂಡಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.