
ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ವತಿಯಿಂದ ಅಯೋಧ್ಯೆ ಶ್ರೀ ರಾಮಲಲ್ಲಾನ ಅಭೀಷೇಕಕ್ಕೆ ಕರ್ನಾಟಕ ಕಾವೇರಿಯ ಪವಿತ್ರ ತೀರ್ಥವನ್ನು ಜನವರಿ 6 ರಂದು ಸಂಗ್ರಹಿಸಿ ರಾಜ್ಯದ ಅನೇಕ ಪುಣ್ಯ ಕ್ಷೇತ್ರ ಮಠಗಳಲ್ಲಿ ಪೂಜಿಲಾಗುತ್ತಿದೆ.
ಕಾವೇರಿ ತೀರ್ಥ ಕುಂಭವು ತಾರೀಕು 15-01-2024ರ ಸೋಮವಾರ ಬೆಳಿಗ್ಗೆ 10:30ಕ್ಕೆ ಶ್ರೀ ಕ್ಷೇತ್ರ ಶಂಕರಪುರ ತಲುಪಲಿದೆ. ಜನವರಿ 18 ರಂದು ಅಯೋಧ್ಯೆಗೆ ತೆಗೆದುಕೊಂಡು ಹೋಗಲಿರುವ ಪವಿತ್ರ ತೀರ್ಥವನ್ನು ಶ್ರೀ ಸಾಯಿ ಈಶ್ವರ್ ಗುರೂಜಿ ಸ್ವಾಗತಿಸಿ ವಿಶೇಷ ಪೂಜೆ ನಡೆಸುವರು ಎಂದು ಮಠದ ಪ್ರಕಟನೆ ತಿಳಿಸಿದೆ.