
ಮಂಗಳೂರು ಜ 15. ಕೋಡಿಕಲ್ ನ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ ವತಿಯಿಂದ ಜ 14 ರಂದು ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವು ಕೆ.ಎಂ. ಸಿ. ಅತ್ತಾವರ ಇದರ ಸಹಯೋಗದೊಂದಿಗೆ ಕೋಡಿಕಲ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಖ್ಯಾತ ಹೃದ್ರೋಗ ರೋಗ ತಜ್ಞ ವೈದ್ಯರು ನರಸಿಂಹ ಪೈ ಹಾಗೂ ನೇತ್ರ ತಜ್ಞ ಸೌಂದರು ಸುಬ್ರಹ್ಮಣ್ಯ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಮಿ ರಮೇಶ್ ಬಾಳಿಗ. ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಿ.ಪ್ರೇಮಾನಂದ ಕುಲಾಲ್. ಉರ್ವ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅನಿತಾ. ಹಾಗೂ ಲಕ್ಷ್ಮಣ್ ಶೆಟ್ಟಿ.ಮಹಾಬಲ ಚೌಟ. ಪಾಲಿಕೆ ಸದಸ್ಯಕಿರಣ್ ಕುಮಾರ್ ಉಪಸ್ಥರಿದ್ದರು.
ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಅಶೋಕ್ ಕುಮಾರ್ ಕಲ್ಪನೆ ಸ್ವಾಗತಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮನಿರೂಪಿಸಿದರು.ದಿನೇಶ್ ಕೋಡಿಕಲ್ ಧನ್ಯವಾದ ನೀಡಿದರು. ಪರಿಸರದ ಬಹಳಷ್ಟು ಜನ ಈ ಶಿಬಿರದ ಉಪಯೋಗವನ್ನು ಪಡೆದರು