July 23, 2026
Mumbai News Kannada
ಸುದ್ದಿ

ಡಾ. ಪಿ.ವಿ. ಶೆಟ್ಟಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮುಂಬೈನಲ್ಲಿ ಭವ್ಯ ಸ್ವಾಗತ







ಮುಂಬೈ, ನವೆಂಬರ್ 2: ಕರ್ನಾಟಕ ಸರ್ಕಾರದ ಅತ್ಯುನ್ನತ ಗೌರವಾನ್ವಿತ ಪ್ರಶಸ್ತಿಯಾದ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿಯನ್ನು ನವೆಂಬರ್ 1 ರಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಸಹಿತ ರಾಜ್ಯದ ಗೌರವಾನ್ವಿತ ಸಚಿವರ ಉಪಸ್ಥಿತಿಯಲ್ಲಿ ಸ್ವೀಕರಿಸಿ ಮುಂಬೈಗೆ ಆಗಮಿಸಿದ ಡಾ. ಪಿ.ವಿ. ಶೆಟ್ಟಿ ಶಿಮಂತೂರು ನಡಿಗುತ್ತು ಅವರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.

​ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರು, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಮಾಜಿ ಜಂಟಿ ಕಾರ್ಯದರ್ಶಿಗಳಾದ ಡಾ. ಪಿ.ವಿ. ಶೆಟ್ಟಿ ಅವರನ್ನು, ನವೆಂಬರ್ 2 ರಂದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಮತ್ತು ಪದಾಧಿಕಾರಿಗಳು ಬರಮಾಡಿಕೊಂಡರು.

​ಪ್ರಶಸ್ತಿಗಳೊಂದಿಗೆ ಮುಂಬೈಗೆ ಆಗಮಿಸಿದ ಡಾ. ಪಿ.ವಿ. ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಶಕಿಲ ಪಿ.ವಿ. ಶೆಟ್ಟಿ ದಂಪತಿಯನ್ನು, ಶ್ರೀ ಐಕಳ ಹರೀಶ್ ಶೆಟ್ಟಿಯವರು ಶಾಲು, ಮೈಸೂರು ಪೇಟ ಮತ್ತು ಬೃಹತ್ ಹೂವಿನ ಹಾರವನ್ನು ಅರ್ಪಿಸಿ ಅಭಿನಂದಿಸಿದರು.

​ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಶ್ರೀ ಉಳ್ತೂರು ಮೋಹನದಾಸ್ ಶೆಟ್ಟಿ, ನಿರ್ದೇಶಕರಾದ ಶ್ರೀ ಶಶಿಧರ ಕೆ. ಶೆಟ್ಟಿ ಇನ್ನಂಜೆ, ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಗುಣಪಾಲ್ ಶೆಟ್ಟಿ ಐಕಳ, ಡಾ. ಪಿ.ವಿ. ಶೆಟ್ಟಿಯವರ ಮಗಳು ಶ್ರೀಮತಿ ಅನಿಷಾ ಪಿ.ವಿ. ಶೆಟ್ಟಿ, ಶ್ರೀಮತಿ ಶರ್ಮಿಳಾ ರಮಾನಾಥ ಪಯ್ಯಡೆ, ಶ್ರೀ ಗೌರವ್ ರಮಾನಾಥ ಪಯ್ಯಡೆ ಮತ್ತು ಶ್ರೀ ಧೀರಜ್ ಶೆಟ್ಟಿ ಉಪಸ್ಥಿತರಿದ್ದರು.

​ಶ್ರೀ ಐಕಳ ಹರೀಶ್ ಶೆಟ್ಟಿಯವರು ಡಾ. ಪಿ.ವಿ. ಶೆಟ್ಟಿಯವರನ್ನು ಅಭಿನಂದಿಸಿ, “ಕರ್ನಾಟಕ ಸರ್ಕಾರದ 2025ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಅತೀವ ಸಂತೋಷ ತಂದಿದೆ. ಓರ್ವ ಸಮಾಜ ಸೇವಕರಾಗಿ, ವೈದ್ಯರಾಗಿ, ಉತ್ತಮ ಸಂಘಟಕರಾಗಿ, ಹೊಟೇಲು ಉದ್ಯಮಿಯಾಗಿ, ಕ್ರೀಡಾ ಮುಖ್ಯಸ್ಥರಾಗಿ, ಸಮಾಜ ಬಾಂಧವರ ಹಿತಚಿಂತಕರಾಗಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಕ್ರೀಡಾತ್ಮಕ ಚಟುವಟಿಕೆಗಳ ಮೂಲಕ ಸಲ್ಲಿಸಿದ ಸೇವಾ ಕಾರ್ಯಗಳಿಗೆ ಸಂದ ಗೌರವವಿದು. ತಮ್ಮ ಸೇವಾ ವೈಖರಿಗಳು ಇತರರಿಗೂ ಮಾದರಿಯಾಗಿವೆ. ತಾವು ನಂಬಿದ ದೈವ-ದೇವರ ಅನುಗ್ರಹ ತಮಗೆ ಸದಾ ಇರಲಿ. ಭವಿಷ್ಯದಲ್ಲಿ ಸಕಲೈಶ್ವರ್ಯ, ಆಯುರಾರೋಗ್ಯ ಭಾಗ್ಯದೊಂದಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ತಮಗೆ ಲಭಿಸಲಿ” ಎಂದು ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.



Related posts

ರಾಷ್ಟ್ರ, ಕರ್ನಾಟಕ ಮತ್ತು ಮಹಾರಾಷ್ಟ್ರದ ಇಂದಿನ ಸಂಕ್ಷಿಪ್ತ ಮುಖ್ಯಾಂಶಗಳು

Mumbai News Desk

ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಕೆ.ಪಿ. ಆಚಾರ್ಯ ನಿಧನ

Mumbai News Desk

ಮುಂಬೈ ಆಘಾತಕಾರಿ: ಚೆಂಬೂರಿನಲ್ಲಿ ಕಾಳಿಮಾತೆಯ ವಿಗ್ರಹ ‘ಮಾತೆ ಮೇರಿ’ ರೂಪದಲ್ಲಿ, ಆಕ್ರೋಶದ ನಂತರ ಅರ್ಚಕನ ಬಂಧನ

Mumbai News Desk

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk

ಯೋಗ  ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗಿದೆ: ಗುತ್ತಿನಾರ್ ರವೀಂದ್ರ ಶೆಟ್ಟಿ

Mumbai News Desk

ಅಂಬರ್‌ನಾಥ್‌ನ ಬಿಲ್ಡರ್ ಜಗದೀಶ್ ರಾಮ ಬಂಜನ್ ಅವರಿಗೆ ಲೋಕಮತ್ ಪ್ರಶಸ್ತಿ,

Mumbai News Desk