
ಮುಂಬಯಿ ಜ 18 . ನಗರದ ಪ್ರತಿಷ್ಠಿತ ಜಾತಿಯ ಸಂಘಟನೆ ಬೋಂಬೆ ಬಂಟ್ಸ್ ಎಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಜಯ ಎನ್ ಶೆಟ್ಟಿ ಅವರಿಗೆ ಬೋಂಬೆ ಬಂಟ್ಸ್ ಎಸೋಸಿಯೇಶಶನ್ ವತಿಯಿಂದ ಶ್ರದ್ಧಾಂಜಲಿ ಸಭೆಯು ಜ 20ರಂದು ಶನಿವಾರ ಸಂಜೆ 4:00ಗೆ ಸಯನ್ ನಿತ್ಯಾನಂದ ಸಭಾ ಗೃಹದಲ್ಲಿ ಜರಗಲಿದು.
ಬೋಂಬೆ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಅಧ್ಯಕ್ಷತೆಯಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಸಭೆಗೆ ಸದಸ್ಯರು ಎಲ್ಲರೂ ಹಾಗೂ ಜಯ ಎನ್ ಶೆಟ್ಟಿ ಅವರ ಅಭಿಮಾನಿಗಳು ಬಂಧು-ಬಳಗವು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಬೋಂಬೆ ಬಂಟ್ಸ್ ಎಸೋಸಿಯೇಶನ್ ಉಪಾಧ್ಯಕ್ಷ ನ್ಯಾ. ಡಿ ಕೆ ಶೆಟ್ಟಿ, ಗೌ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ಎಡ್ವಕೇಟ್ ಗುಣಾಕರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಸಿ ಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಮಾಜಿ ಅಧ್ಯಕ್ಷರುಗಳು ಟ್ರಸ್ಟ್ ಗಳು ವಿನಂತಿಸಿಕೊಂಡಿದ್ದಾರೆ.