
ಪುಣೆ ಜ 19. ಅಯೋಧ್ಯೆಯಲ್ಲಿ ಭಾರತೀಯರ ಶತ ಶತಮಾನಗಳ ಪ್ರಯತ್ನಗಳ ಮೂಲಕ ಇದೀಗ 2024 ಜನವರಿ 22ರಂದು ಭವ್ಯ ಮಂದಿರ ನಿರ್ಮಾಣಗೊಂಡು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವ ವು ಜರುಗಲಿದ್ದು ಅದೇ ಪುಣ್ಯ ಮುಹೂರ್ತ ದಲ್ಲಿ. ಪುಣೆ ಪೀಂಪ್ರಿ ಚಿಂಚ್ ವಾಡ್ ಬಂಟರ ಸಂಘದ ಆಶ್ರಯದಲ್ಲಿ ಸಂಘದ ಸಭಾಭವನದಲ್ಲಿ ಪ್ರಸಿದ್ಧ ಹರಿದಾಸ ರಾದ “ವಿಶ್ವೇಶ ದಾಸ”ಬಿರುದಾಂಕಿತ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ “ರಾಮ ಸೀತಾ ಕಲ್ಯಾಣ “ಎಂಬ ಹರಿಕಥೆಯು ಬೆಳಿಗ್ಗೆ 10-30 ರಿಂದ ನಡೆಯಲಿದೆ .
ಹರಿಕಥೆಯು ಹಾರ್ಮೋನಿಯಂ ನಲ್ಲಿ ಶೇಖರ್ ಸಸಿಹಿತ್ಲು, ತಬ್ಲಾದಲ್ಲಿ ಜನಾರ್ಧನ ಸಾಲಿಯಾನ್, ಸಂಗೀತ ಸಹಕಾರ ವಿಖ್ಯಾತ ವಿ ಭಟ್ ಅವರು ನೀಡಲಿದ್ದಾರೆ,,ಎಲ್ಲ ಶ್ರೀರಾಮ ಭಕ್ತರು ಸಂಪ್ರದಾಯದ ಉಡುಪು, ಕೇಸರಿ ಶಾಲು ಧರಿಸಿ ಬಂದು ಭಾಗವಹಿಸಿ ಈ ಭವ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು,
ಮಧ್ಯಾಹ್ನ 12:22 ಕ್ಕೆ ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠಾ ಸಮಯದಲ್ಲಿ ರಾಮದೇವರಿಗೆ ರಾಮ ಭಜನೆ, ರಾಮನಾಮ ಉದ್ಘೋಷ ದೊಂದಿಗೆ ಮಹಾ ಮಂಗಳಾರತಿ ಯು ನಡೆಯಲಿದೆ .
ಆನಂತರ ಪ್ರಸಾದ ಭೋಜನವು ನಡೆಯಲಿದೆ,, ಈ ಪುಣ್ಯ ಸತ್ಕಾರ್ಯ ದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀರಾಮನ ಕೃಪೆಗೆ ಪಾತ್ರರಾಗ ಬೇಕಾಗಿ
ಪಿಂಪ್ರೀ ಚಿಂಚ್ವಾಡ್ ಬಂಟರ ಸಂಘ ಅಧ್ಯಕ್ಷ ರಾದ ರಾಕೇಶ್ ಎ ಶೆಟ್ಟಿ,,ಪ್ರಧಾನ ಕಾರ್ಯದರ್ಶಿ ಅರುಣ್ ಯಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು, ಭಜನಾ ವಿಭಾಗ ಕಾರ್ಯಾಧ್ಯಕ್ಷ ರಾದ ರಾಜೇಶ್ ಶೆಟ್ಟಿ ಅವರು ವಿನಂತಿಸಿದ್ದಾರೆ.
———-
Show quoted text