
ಶಿಸ್ತು ಬದ್ಧ ಕಾರ್ಯಕ್ರಮ ನಡೆಯುವಂತೆ. ಶಶಿಧರ್ ಕೆ ಶೆಟ್ಟಿ, ಇನ್ನಂಜೆ ಕರೆ.
ಚಿತ್ರ ವರದಿ : ದಿನೇಶ್ ಕುಲಾಲ್.
ನಾಲಾಸೋಪಾರ ಜಿ 19. ಕರ್ನಾಟಕದ ತುಳು ಸಾಹಿತ್ಯ ಅಕಾಡೆಮಿ ವಿಶೇಷ ಹೊರನಾಡ ಸಂಘಟನಾ ಪುರಸ್ಕಾರವನ್ನು ಸ್ವೀಕರಿಸಿದ ಸಂಸ್ಥೆ ತುಳು ಕೂಟದ ಫೌಂಡೇಶನ್, ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷಕಲಾ ನಿಲಯ ವಿರಾರ್-ನಾಲಾಸೋಪರ ಇದರ ವಾರ್ಷಿಕೋತ್ಸವದ ಜ 27 ರಂದು ನಾಲಾಸೋಪಾರ ಗ್ಯಾಲಕ್ಸಿ ಹೋಟೆಲ್ನ ಸಭಾಂಗಣದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ನಡೆಯಲಿದ್ದ ಇದರ ಆಮಂತ್ರಣ ಪತ್ರಿಕೆಯನ್ನು ನಾಲಾಸೋಪಾರ ಪೂರ್ವದ
ರೀಜೆನ್ಸಿ ಸಭಾಂಗಣದಲ್ಲಿ ಜಂಟಿ ಸಂಸ್ಥೆಯ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ, ಇನ್ನಂಜೆ ಬಿಡುಗಡೆಗೊಳಿಸಿದರು.
ಬಿಡುಗಡೆಗೊಳಿಸಿ ಮಾತನಾಡಿದ ಶಶಿಧರ್ ಕೆ ಶೆಟ್ಟಿ, ಇನ್ನಂಜೆ ಯವರು ಅಂದಿನ ಕಾರ್ಯಕಮದಲ್ಲಿ ಮುಂಬೈಯಾ ಗಣ್ಯಾತಿ-ಗಣ್ಯಾರು ಅತಿಥಿಗಳಾಗಿ ಹಾಜರಿರುವರು ಕಾರ್ಯಕ್ರಮ ಶಿಸ್ತು ಬದ್ಧವಾಗಿ ನಡೆಯುವುದಕ್ಕೆ ಸದಸ್ಯರು. ಮಹಿಳಾ ವಿಭಾಗ ಯುವ ವಿಭಾಗ ಎಲ್ಲರೂ ಸಹಕಾರ ಎಂದು ಕಾರ್ಯಕ್ರಮದ ಪೂರ್ಣ ವಿವರವನ್ನು ಸಭೆಯ ಮುಂದಿಟ್ಟರು.
ತುಳು ಕೂಟದ ಫೌಂಡೇಶನ್ ಕಾರ್ಯದರ್ಶಿ ಜಗನ್ನಾಥ್ ಶೆಟ್ಟಿ ಪಲ್ಲಿ ಅವರು ಸಮಾರಂಭದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಮಕ್ಕಳಿಂದ ಭಜನಾ , ಭರತನಾಟ್ಯ , ನೃತ್ಯ ರೂಪಕ ಸಂಗೀತ ಕಾರ್ಯಕ್ರಮ ,ಶ್ರೀದೇವಿ ಯಕ್ಷಕಲಾ ನಿಲಯದ ಮಕ್ಕಳಿಂದ -ಮುಂಡ್ಕೂರು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ , ತುಳು ಕೂಟದ ಫೌಂಡೇಶನ್ ನ್ ಸಮಾಜ ಕಲ್ಯಾಣ ಸಮಿತಿ ವತಿಯಿಂದ ವಿದ್ಯಾರ್ಥಿವೇತನ ಹಾಗೂ ವಿಧವಾ ವೆತನವನ್ನು ವಿತರಣೆ .ಇದಾರ ಒಂದಿಗೆ ಸಾಧನೆ ಗೈದ ಸಾದಕರಿಗೆ ಸನ್ಮಾನಿಸಿ ಗೌರವಿಸುವುದು ಹಾಗೂ ಕವಯತ್ರಿ ಡಾ ಸುನೀತಾ ಎಂ ಶೆಟ್ಟಿಯವರ ಪ್ರಾಯೋಜಿತ “ತುಳು ಐಸಿರಿ” ಬಿರುದಾಂಕಿತ ಪ್ರಶಸ್ತಿಯನ್ನು ಕೊಡಲಾಗುವುದು ಎಂದರು.
.
ತುಳುಕೂಟ ಫೌಂಡೇಶನ್ ನಾಲಾಸೋಪಾರ ದ ಗೌರವ ಅಧ್ಯಕ್ಷ ಓ ಪಿ ಪೂಜಾರಿ , ಗೌ. ಕಾರ್ಯದರ್ಶಿ ಜೆ ಡಿ ಶೆಟ್ಟಿ ಪಳ್ಳಿ, ಗೌ. ಕೋಶಾಧಿಕಾರಿ ರಾಜೇಶ್ ವೈ ಕರ್ಕೇರ, ಜೊತೆ ಕೋಶಧಿಕಾರಿ ಸೀತಾರಾಮ್ ಕೋಟ್ಯಾನ್., ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ದೇವೇಂದ್ರ ಬುನ್ನನ್,
ಮಹಿಳಾ ವಿಭಾಗ ದಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ವಿ ಸುವರ್ಣ , ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷರಾದ ದಯಾನಂದ ಬೋಂಟ್ರಾ . ಹಾಗೂ ನಿತ್ಯಾನಂದ ಶೆಟ್ಟಿ ಪಳ್ಳಿ ,ವಸಂತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥರಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಉಪಸಮಿತಿಯ ಪದಾಧಿಕಾರಿಗಳು ಸದಸ್ಯರು ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡುವ ಭರವಸೆಯನ್ನು ನೀಡಿದರು.