ಬೊರಿವಿಲಿ, ಜ, 20: ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ವೈಭವದ ಶ್ರೀ ರಾಮ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಜ. 22ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನ ಜಯರಾಜ್ ನಗರ ವಜೀರನಾಕ ಬೊರಿವಿಲಿ ಇಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ ಗಂಟೆ 10 ರಿಂದ ಶ್ರೀ ಮಹಿಷ ಮರ್ದಿನಿ ಭಜನಾ ಮಂಡಳಿ ಅವರಿಂದ ಭಜನೆ, ಕಲಶದರ್ಶನ ಹಾಗೂ ಮಧ್ಯಾಹ್ನ ಮಹಾಪೂಜೆ ಜರಗುವುದು. ಆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ.
ಬಹು ನಿರೀಕ್ಷಿತ ಶ್ರೀರಾಮ ಮಂದಿರದ ಉದ್ಘಾಟನೆಯ ಅಂಗವಾಗಿ ಏರ್ಪಡಿಸಲಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವಸದ್ಭಕ್ತರು ಉಪಸ್ಥಿತರಿದ್ದು ಶ್ರೀ ಮಹಿಷ ಮರ್ಧಿನಿ ದೇವಿ ಹಾಗೂ ಶ್ರೀ ರಾಮದೇವರ ಕೃಪೆಗೆ ಪಾತ್ರರಾಗಬೇಕಾಗಿ ಸ್ಥಾಪಕ ಆಡಳಿತ ಮೊಕ್ತೇಸರರಾದ ಹರಿಯಾಳಗುತ್ತು ಜಯರಾಜ್ ಶ್ರೀಧರ್ ಶೆಟ್ಟಿ ದಂಪತಿಗಳು, ಆಡಳಿತ ಮಂಡಳಿ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ ದಂಪತಿಗಳು ,ಮೊಕ್ತೇಸರರಾದ ಜಯಪಾಲಿ ಅಶೋಕ ಶೆಟ್ಟಿ,ಅರ್ಚಕ ವೃಂದ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.