September 6, 2026
Mumbai News Kannada
ಪ್ರಕಟಣೆ

ಬೊರಿವಿಲಿ ಶ್ರೀ ಮಹೀಷಮರ್ದಿನಿ ದೇವಸ್ಥಾನ ದಲ್ಲಿ ಶ್ರೀ ರಾಮ ಪ್ರತಿಷ್ಠಾ ಮಹೋತ್ಸವ





ಬೊರಿವಿಲಿ, ಜ, 20: ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ವೈಭವದ ಶ್ರೀ ರಾಮ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಜ. 22ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನ ಜಯರಾಜ್ ನಗರ ವಜೀರನಾಕ ಬೊರಿವಿಲಿ ಇಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ. 

     ಬೆಳಿಗ್ಗೆ ಗಂಟೆ 10 ರಿಂದ ಶ್ರೀ ಮಹಿಷ ಮರ್ದಿನಿ ಭಜನಾ ಮಂಡಳಿ ಅವರಿಂದ ಭಜನೆ,  ಕಲಶದರ್ಶನ ಹಾಗೂ ಮಧ್ಯಾಹ್ನ ಮಹಾಪೂಜೆ ಜರಗುವುದು. ಆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ.

      ಬಹು ನಿರೀಕ್ಷಿತ ಶ್ರೀರಾಮ ಮಂದಿರದ ಉದ್ಘಾಟನೆಯ ಅಂಗವಾಗಿ ಏರ್ಪಡಿಸಲಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವಸದ್ಭಕ್ತರು ಉಪಸ್ಥಿತರಿದ್ದು  ಶ್ರೀ ಮಹಿಷ ಮರ್ಧಿನಿ ದೇವಿ ಹಾಗೂ ಶ್ರೀ ರಾಮದೇವರ ಕೃಪೆಗೆ ಪಾತ್ರರಾಗಬೇಕಾಗಿ ಸ್ಥಾಪಕ ಆಡಳಿತ ಮೊಕ್ತೇಸರರಾದ ಹರಿಯಾಳಗುತ್ತು ಜಯರಾಜ್  ಶ್ರೀಧರ್ ಶೆಟ್ಟಿ ದಂಪತಿಗಳು, ಆಡಳಿತ ಮಂಡಳಿ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ ದಂಪತಿಗಳು ,ಮೊಕ್ತೇಸರರಾದ ಜಯಪಾಲಿ ಅಶೋಕ ಶೆಟ್ಟಿ,ಅರ್ಚಕ ವೃಂದ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.



Related posts

ಕರ್ನಾಟಕ ಸಂಘ ಕಲ್ಯಾಣ: ಮಾ. 9ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಡೊಂಬಿವಲಿಯಲ್ಲಿ ಜುಲೈ 19ರಂದು ‘ಚಕ್ರವ್ಯೂಹ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಇದರ 48 ನೇ  ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ.

Mumbai News Desk

ಅ.21, ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 55ನೇ ವಾರ್ಷಿಕ ಮಹಾಪೂಜೆ.

Mumbai News Desk

ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ: ಏಪ್ರಿಲ್ 24 ರಿಂದ 26 ರವರೆಗೆ

Mumbai News Desk

ಜ.6 ರಂದು ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶಂಕರಪುರ ಇದರ 38ನೇ ವರ್ಷದ ವಾರ್ಷಿಕ ಮಹಾಪೂಜೆ

Mumbai News Desk