
ವಸಯಿ ತಾಲೂಕ ಮೊಗವೀರ ಸಂಘದ ಆಶ್ರಯದಲ್ಲಿ ತುಳು-ಕನ್ನಡಿಗರಿಗಾಗಿ ಆಯೋಜಿಸಿದ ವಿಟಿಎಂಎಸ್(VTMS)ಟ್ರೋಪಿ -2024 (ವಾಲಿಬಾಲ್, ತ್ರೋಬಾಲ್ ಪಂದ್ಯಾಟ )ನ್ನು ಇಂದು(ಜ.21) ರಂದು ಬೆಳ್ಳಿಗ್ಗೆ 8 ಗಂಟೆಗೆ
ವಸಯಿ ಪಶ್ಚಿಮದ ಸನ್ ಸಿಟಿ ಮೈದಾನದಲ್ಲಿ ಉದ್ಘಾಟಿಸಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ, ಗೌರವ ಅತಿಥಿಯಾಗಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ, ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ಗೌರವ ಅಧ್ಯಕ್ಷ ಜಗನ್ನಾಥ್ ಎನ್ ರೈ, ಕರ್ನಾಟಕ ಸಂಘ ವಸಯಿ ಯ ಅಧ್ಯಕ್ಷ ದೇವೇಂದ್ರ ಬುನ್ನಾನ್, ಶ್ರೀ ಮಣಿಕಂಠ ಸೇವಾ ಸಮಿತಿ ವಸಯಿ, ಇದರ ಅಧ್ಯಕ್ಷ ಕರ್ನೂರು ಶಂಕರ್ ಆಳ್ವ, ವಿರಾರ್-ನಾಲಸೋಪರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ, ಬಿಲ್ಲವರ ಎಸೋಸಿಯೇಷನ್ ನಾಲಸೋಪರ ಸಮಿತಿಯ ಮಾಜಿ ಅಧ್ಯಕ್ಷ ದಯಾನಂದ ಬೊಂಟ್ರ ಬಂಟರ ಸಂಘದ ವಸಯಿ- ಡಹಾಣು ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆ ಉಷಾ ಎಸ್ ಶೆಟ್ಟಿ ಕರ್ನಿರೆ ದೀಪ ಬೆಳಗಿ, ಬೇಲೂನ್ ಹಾರಿಸಿ ಪಂದ್ಯಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು

.
ಪುರುಷರ ವಾಲಿಬಾಲ್ ನಲ್ಲಿ ವಸಯಿ ದಹಣು ಬಂಟ್ಸ್ ಸಂಘ, ತುಳು ಕೂಟ ಫೌಂಡೇಶನ್ ನಾಲಾಸೋಪರ , ಬಂಟ್ಸ್ ಸಂಘ ಮೀರಾ-ಭಾಯಂದರ್ ಸಮಿತಿ, ತುಳುನಾಡ್ ಫ್ರೆಂಡ್ಸ್ ಟೀಮ್,ಮಹಿಳೆಯರ ತ್ರೋಬಾಲ್ ಪಂದ್ಯದಲ್ಲಿ ಎಂವಿಮ್ ಮೀರಾ-ಭಾಯಂದರ್, ಮೀರಾ-ಡ ಹಣು ಬಂಟ್ಸ್ ವಿರಾರ್, ಕಟೀಲೇಶ್ವರಿ ಟೀಮ್ ಮುಂಬೈ, ಮುಂಬೈ ಮೊಗವೀರ ಟೀಮ್, ವಸಯಿ ಡಹಣು ಟೀಮ್, ವಿಟಿಎಂಎಸ್ ಟ್ರೋಫಿ 2024ಕ್ಕಾಗಿ ಸೆಣಸಾಟ ನಡೆಸಿತು.

ವಸಯಿ ತಾಲೂಕ ಮೊಗವೀರ ಸಂಘದ ಅಧ್ಯಕ್ಷ ಯಶೋದರ ವಿ ಕೋಟ್ಯಾನ್, ಉಪಾಧ್ಯಕ್ಷ ದಯಾನಂದ ಕುಂದರ್, ಕಾರ್ಯದರ್ಶಿ ಶೇಖರ್ ಕರ್ಕೇರ, ಕೋಶಾಧಿಕಾರಿ ವಿಶ್ವನಾಥ ಬಂಗೇರ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮ ಎಸ್ ನಾಯ್ಕ, ಸಲಹೆಗಾರ ಮೋಹಿನಿ ಮಲ್ಪೆ,ಹಾಗೂ ಕ್ರೀಡಾ ಸಮಿತಿಯ, ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಕ್ರೀಡಾಕೂಟಡ ಯಶಸಿಗೆ ಶ್ರಮಿಸಿದರು.
