
ಮುಂಬೈ ಜ.22. ಶಿವ ಸೇನಾ ನೇತಾರ,ಬಾಂದ್ರ -ಖೇರ್ವಾಡಿಯ ಮಾಜಿ ನಗರ ಸೇವಕ, ಮಾಜಿ ಶಾಸಕ, ಶ್ರೀಕಾಂತ್ ಸರ್ಮಳ್ಕರ್ ಇಂದು ಬೆಳ್ಳಿಗೆ 6.30ಕ್ಕೆ, ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಕಟ್ಟರ್ ಶಿವ ಸೈನಿಕನಾಗಿದ್ದ ಅವರು ಬಳಿಕ ನಾರಾಯಣ ರಾಣೆ ಅವರೊಂದಿಗೆ ಶಿವ ಸೇನೆ ತ್ಯಜಿಸಿ, ಕಾಂಗ್ರೆಸ್ ಪಕ್ಷ ಸೇರಿದ್ದರು. 2011ರಲ್ಲಿ ಕಾಂಗ್ರೇಸ್ ಪಕ್ಷವನ್ನೂ ತ್ಯಜಿಸಿ, ಮತ್ತೆ ಶಿವ ಸೇನೆ ಸೇರಿದ್ದರು.
ಅವರ ಅಂತ್ಯ ಕ್ರಿಯೆ ನಾಳೆ, ಜ.23 ರಂದು ಬೆಳ್ಳಿಗ್ಗೆ 10.30ಕ್ಕೆ ಬಾಂದ್ರ ರುದ್ರ ಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಅವರ ನಿಧನಕ್ಕೆ ಮುಂಬಯಿ ನ್ಯೂಸ್ ನ ನಿರ್ದೇಶಕ ಕುಮಾರ ಬಂಗೇರ ಸಂತಾಪ ವ್ಯಕ್ತ ಪಡಿಸಿದ್ದಾರೆ.