
ಮುಂಬಯಿ : ಬಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಜ. 28, ಆದಿತ್ಯವಾರ ಅಪರಾಹ್ನ 3 ಗಂಟೆಯಿಂದ ಮುಲೂಂಡು ಪಶ್ಚಿಮ, ಶ್ರೀ ಕುಟ್ಚು ದೇಶಿಯ ಸಾರಸ್ವತ್ ಹಾಲ್ ಎರಡನೇ ಮಹಡಿ, ಸರಸ್ವತಿ ವಾಡಿ, ಜಾವೇರ್ ರೋಡ್ ಇಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಡೆಯಲಿರುವ ಈ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ಸಂಗೀತ ಎಸ್ ಶೆಟ್ಟಿ, ಗೌರವ ಅತಿಥಿಯಾಗಿ ಶ್ರೀಮತಿ ಅನಿತಾ ಬಂಡಾರಿ ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಸ್ಪರ್ಧೆ, ವಿವಿಧ ಸಾಂಸ್ಕೃತಿಯ ಕಾರ್ಯಕ್ರಮಗಳು, ಫನ್ ಗೇಮ್ಸ್ ಹಾಗೂ ಹಳದಿ ಕುಂಕುಮ ದ ಕಾರ್ಯಕ್ರಮಗಳು ನಡೆಯಲಿದೆ.
ಈ ಸಮಾರಂಭಕ್ಕೆ ಸಮಾಜ ಬಾಂಧವರು ಹಾಗೂ ಹಿತೈಷಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ರಮೇಶ್ ಭಂಡಾರಿ, ಉಪಕಾರ್ಯಧ್ಯಕ್ಷೆ ಜಯಸುಧಾ ಟಿ ಬಂಡಾರಿ, ಪ್ರಧಾನ ಕಾರ್ಯದರ್ಶಿ, ಲತಾ ಯೋಗೇಶ್ ಭಂಡಾರಿ, ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಭಾಕರ್ ಭಂಡಾರಿ, ಗೌರವ ಕಾರ್ಯದರ್ಶಿ ರಮೇಶ್ ಭಂಡಾರಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ
—————