
ಪನ್ವೇಲ್ ಜ25. ನವಿ ಮುಂಬಯಿಯ ನ್ಯೂ ಪನ್ವೇಲ್ ನ ಸಮಾಜ ಸೇವಕ ಸಂಘಟಕ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಅವರ ಸಾಯೋಗದಲ್ಲಿ ಮತ್ತು
ಶ್ರೀ ರಾಮ ಭಕ್ತ ಸಮಿತಿ ಹಾಗೂ ಪನ್ವೇಲ್ ಪರಿಸರದ ಸಮಸ್ಥರು ಶ್ರೀ ರಾಮ ಭಕ್ತರ ಒಗ್ಗಟ್ಟಿನಿಂದ ಅಯೋಧ್ಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಮಹೋಸ್ತವ ಅಂಗ ವಾಗಿ ಜ22ನೇ ಸೋಮವಾರ ಅಯೋಧ್ಯೆಯಲ್ಲಿ ಶ್ರಿ ರಾಮ ಮಂದಿರದ ಭವ್ಯ ಉದ್ಘಾಟನಾ ಸಮಾರಂಭ ಸಮಯದಲ್ಲಿ ಶ್ರೀ ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ಮೈದಾನ, ಸೆಕ್ಟರ್ 2, ಇಲ್ಲಿ ಸಾವಿರಾರು ಸಂಖ್ಯೆಯ ಭಕ್ತರ ಜೈ ಶ್ರೀ ರಾಮ್ ಎಂಬ ಘೋಷದೊಂದಿಗೆ ಶ್ರೀ ರಾಮ ಮಹೋತ್ಸವ ಭಕ್ತಿ ಸಂಭ್ರಮದೊಂದಿಗೆ ನಡೆಯಿತು,




ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ಮಠ , ಚೆಡ್ಡ ನಗರ, ಚೆoಬೂರ್ ಇಳಿಯ ಪುರೋಹಿತ ರಂಜದವರಿಂದ ಶ್ರೀ ರಾಮ ಮಂತ್ರ ಹೋಮ. ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು ,ಆ ಬಳಿಕ ಭಕ್ತಿ ಸಂಗೀತ (ಮುಕೇಶ್ ಉಪಾಧ್ಯ ಪ್ರಸ್ತುತಿ ಮೇರೆ ಘರ್ ರಾಮ್ ಅಯ್ಯಾ ಹೈ) ಇವರಿಂದ ನಡೆಯಿತು,
ಅವರ ಸಂಖ್ಯೆಯಲ್ಲಿ ಸೇರಿದ ರಾಮಭಕ್ತರಿಗೆ ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಕಾರ್ಯವನ್ನು ಮಧ್ಯಾಹ್ನ ಎಲ್ಇಡಿ ಮೂಲಕ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆಯನ್ನು ಮಾಡಲಾಗಿತ್ತು,
ಮಧ್ಯಾಹ್ನ ಮಹಾಪ್ರಸಾದ ರೂಪದಲ್ಲಿ ಹತು ಸಾವಿರಕ್ಕೂ ಮಿಕ್ಕಿ ರಾಮ ಭಕ್ತರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಅಡಿಗೆ ಭಟ್ರು ತಯಾರಿಸಿದ ಬಾಳೆ ಎಲೆಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತರಲ್ಲರಿಗೂ ಊಟವನ್ನು ತುಳು ಕನ್ನಡಿಗರೇ ಬಡಿಸಿರುವರು ,
ಸಾಯಂಕಾಲ ದೀಪೋತ್ಸವ ಸಂಭ್ರಮ ಸಂಭ್ರಮವನ್ನು ಭಕ್ತರು ಕಣ್ತುಂಬ ಕಂಡು ಭಕ್ತಿ ಭಾವುಕರಾದರು,




ಈ ಕಾರ್ಯಕ್ರಮದಲ್ಲಿ ಪನ್ವೆಲ್ ನ ಸಾಸಕ ಪ್ರಶಾಂತ್ ಠಾಕೂರ್ ,ಪನ್ವೇಲ್ ಮಹಾನಗರ ಪಾಲಿಕೆಯ ಮಹಾಪೌರ ಶ್ರೀಮತಿ ಕವಿತಾ, ಬಿಜೆಪಿಯ ನೇತಾರ ಗಳಾದ ಪರೇಶ್ ಠಾಕೂರ್, ಜಯಂತ್ ಪಗಡೆ, ನಗರ ಸೇವಕಿ ರಾಜಶ್ರೀ, ಸುನಿಲ್ ಪಾಟೀಲ್ ಪನ್ವೆಲ್, ಹಾಗೂ ಹೋಟೆಲ್ ಉದ್ಯಮಿ ಗಳಾದ ಸದನಂದ ಶೆಟ್ಟಿ ಉದಯ ಹೆಗ್ಡೆ,, ಪ್ರಕಾಶ್ ಶೆಟ್ಟಿ ,ಸೀತಾರಾಮ್ ಶೆಟ್ಟಿ ಮತ್ತಿತರರು ನವ ಮುಂಬೈಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಧಾರ್ಮಿಕ ಸಂಸ್ಥೆಯ ಪದಾಧಿಕಾರಿಗಳು, ಪನ್ವೆಲ್ ಕರ್ನಾಟಕ ಸಂಘದ ಪದಾಧಿಕಾರಿಗಳು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು
ರಾಜಕೀಯ ಮುಖಂಡರಿಗೆ ಮತ್ತು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಪನ್ವೆಲ್ ನಗರಸೇವಕ ಸಂತೋಷ್ ಜಿ ಶೆಟ್ಟಿ ಮತ್ತು ಪನ್ರಲ್ ನ್ ಸಮಸ್ತ ತುಳು ಕನ್ನಡಿಗರು ಪ್ರಸಾದವನ್ನು ನೀಡಿ ಗೌರವಿಸಿದರು