
ತುಳುಕುಟದ ಸೇವಾ ಕಾರ್ಯಗಳು ಇನ್ನಷ್ಟು ಸಾಮಾನ್ಯ ಜನರನ್ನು ತಲುಪಲಿ :ಐಕಳ ಹರೀಶ್ ಶೆಟ್ಟಿ,
ಚಿತ್ರ ವರದಿ : ದಿನೇಶ್ ಕುಲಾಲ್
ನಾಲಾಸೋಪಾರ ಜ 27. ನಾಲಾಸೋಪಾರದ ಪರಿಸರದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ವಾಗಿ ದುಡಿದು ಜನಮನ್ನಣೆ ಪಡೆದ. “ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರು “ಹೊರ ರಾಜ್ಯ ಸಂಘಟನಾ ಪುರಸ್ಕೃತ ಪ್ರಶಸ್ತಿ-2021* ತುಳು ಕೂಟ ಫೌಂಡೇಶನ್ (ರಿ) ನಾಲಾಸೋಪಾರ ಇದರು ತನ್ನ ಸ್ವಂತ ಕಛೇರಿ ತೆಗೆದು ಕೊಳ್ಳುವ ಕನಸ್ಸನ್ನು ಶಶಿಧರ ಶೆಟ್ಟಿ ಇನ್ನಂಜೆ ಯವರ ಪರಿಶ್ರಮದಿಂದ ಹಾಗೂ ದಾನಿಗಳ ಅದಾರದಿಂದ ನಾಲಾಸೋಪಾರ ಪಶ್ಚಿಮದ ಶಾಂತಿ ಪಾರ್ಕಿನ ಸಾಯಿ ಕೃಪ ಬಿಲ್ಡಿಂಗಿನ ತಲಮಾಡಿಯಲ್ಲಿ
ಸ್ವಂತ ಕಛೇರಿ ಜ 27 ರಂದು ಶನಿವಾರ ಬಂಟರ ಧೀಮಂತ, , ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಐಕಳ ಹರೀಶ್ ಶೆಟ್ಟಿಯವರ ದಿವ್ಯ ಹಸ್ತ ದಿನ ಉದ್ಘಾಟನೆ ಸಿದರು,
ಬಳಿಕ ಶುಭಾಶಯ ಮಾತುಗಳನ್ನಾಡುತ್ತಾ ಪರಿಸರದ ತುಳು ಕನ್ನಡಿಗರ ಒಗ್ಗಟ್ಟಿಗೆ ಈ ಕಾರ್ಯಾಲಯ ಸಾಕ್ಷಿಯಾಗಿದೆ, ನಮ್ಮೊಳಗೆ ಒಗ್ಗಟ್ಟಿದ್ದಾಗ ಎಲ್ಲಾ ಸಮಸ್ಯೆಗಳಿಗೂ ಸಮರ್ಥ ಉತ್ತರಿಸಲು ಸಾಧ್ಯ ತುಳಕೂಟ ಜನಸಾಮಾನ್ಯರ ಸೇವೆಯಲ್ಲಿ ಇನ್ನಷ್ಟು ಸೇವೆಗಳನ್ನು ಮಾಡಲಿ ಎಂದು ಶುಭ ನುಡಿದರು,



ಸಂದರ್ಭದಲ್ಲಿ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಆರ್ ಕೆ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳರ್, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ ಅಮೀನ್, ಕಾರ್ಯದರ್ಶಿ ಹರೀಶ್ ಸಾಲಿಯಾನ, ಯುವ ವಿಭಾಗದ ಕಾರ್ಯಾಧ್ಯಕ್ಷ ನೀಲೇಶ್ ಪಲಿಮಾರ್, ತುಳು ಕೂಟ ದ. ಉಪಾಧ್ಯಕ್ಷರು ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿ ಜಗನಾಥ್ ಡಿ. ಶೆಟ್ಟಿ ಪಳ್ಳಿ, ಕೋಶಾಧಿಕಾರಿ ರಾಜೇಶ್ ಕರ್ಕೇರ, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ ,ಜೊತೆ ಕೋಶಾಧಿಕಾರಿ ಸೀತಾರಾಮ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ದೇವೇಂದ್ರ ಬುನ್ನನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ , ಸಮಿತಿಯ ಕಾರ್ಯ ಧ್ಯಕ್ಷ ದಯಾನಂದ ಬೊಂಡ್ರ, ಸದಸ್ಯ ನಂದನ ಸಮಿತಿಯ ಕಾರ್ಯ ಧ್ಯಕ್ಷ ನವೀನ್ ಶೆಟ್ಟಿ ಪಳ್ಳಿ,
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಸಲಹೆಗಾರರಾದ ಜಯ ಅಶೋಕ್ ಶೆಟ್ಟಿ. ಶಶಿಕಲಾ ಶಶಿಧರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಹರ್ಷಿತ್ ಕುಂದರ್. ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ಗೌರವಧ್ಯಕ್ಷರು ಶ್ರೀನಿವಾಸ ನಾಯ್ಡು, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರ್, ಹಾಗೂ ಮೊಗವೀರ ಸಂಘದ ಅಧ್ಯಕ್ಷ ಯಶೋಧರ್ ಕೋಟ್ಯಾನ್,ನಿತ್ಯಾನಂದ ಶೆಟ್ಟಿ ಪಳ್ಳಿ , ವೆಂಕಟೇಶ್ ಶೆಟ್ಟಿ , ದಿವಾಕರ್ ಶೆಟ್ಟಿ ಮತ್ತು ಪಧಧಿಕಾರಿಗಳು,, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಪಾಲ್ಗೊಂಡಿದ್ದರು,
ಪಾಲ್ಗೊಂಡ ಎಲ್ಲರನ್ನು ತುಲಕೂಟದ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಸ್ವಾಗತಿಸಿ ಸ್ವಾಗತಿಸಿದರು.
ಪೂಜೆಯ ಯಜಮಾನಿಕೆಯನ್ನು ಹೆಜಮಾನ ಸುಧಾಕರ್ ಪೂಜಾರಿಯವರ ಸುಪುತ್ರ ಕೀರ್ತಿಕ ಮತ್ತು ಲೋಕೇಶ್ ಪೂಜಾರಿ ವಹಿಸಿದ್ದರು
.