32 C
Mumbai
April 24, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ , ಡೊಂಬಿವಲಿ , 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ.





ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮವು ಅಕ್ಟೋಬರ್ 26 ರ ಶನಿವಾರ ಬೆಳಗ್ಗೆ 6:30 ಕ್ಕೆ ಆರಂಭವಾಗಿ ಅಕ್ಟೋಬರ್ 27 ರ ರವಿವಾರ ಬೆಳಿಗ್ಗೆ 6.30 ರ ತನಕ ಸ್ಥಳೀಯ ಭಜನಾ ಮಂದಿರದ ಒಟ್ಟಿಗೆ ಒಟ್ಟು 28 ಮಂಡಳಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಯಾಗಲು ಸಹಕರಿಸಿದರು. ಪ್ರಾರಂಭದಲ್ಲಿ ಅರ್ಚಕರಾದ ಶ್ರೀ ಹರೀಶ್ ಪದ್ಮಶಾಲಿರವರು ಶ್ರೀ ಮಹಾವಿಷ್ಣು ದೇವರಿಗೆ ಪೂಜೆ ಸಲ್ಲಿಸಿ, ಕಳಸ ಪ್ರತಿಷ್ಠೆ ಮಾಡಿದರು. ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನೆಗೆ ಅತಿಥಿ ಗಣ್ಯರಾಗಿ ಶ್ರೀ ಅಶೋಕ್ ಶೆಟ್ಟಿ ( ಧರ್ಮದರ್ಶಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ,ಡೊಂಬಿವಲಿ ) ಶ್ರೀ ರಾಜೇಶ್ ಕೋಟ್ಯಾನ್ ( ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಜಗದಂಬಾ ಮಂದಿರ ,ಡೊಂಬಿವಲಿ) ಶ್ರೀ ದಿನೇಶ್ ಸುವರ್ಣ (ಕಾರ್ಯಾಧ್ಯಕ್ಷರು , ಶ್ರೀ ಭಗವತಿ ಭಗವಾನ್ ಸೇವಾ ಸಂಘ, ಡೊಂಬಿವಲಿ ) ಭಾಗವಹಿಸಿದರು ಅವರೊಂದಿಗೆ ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ , ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ , ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ಶ್ರೀಮತಿ ಸವಿತಾ ಸಿ. ಸಾಲಿಯಾನ್ , ಮಂದಿರದ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ , ಮಂದಿರದ ಭುವಾಜಿ ಶ್ರೀ ಅರವಿಂದ್ ಪದ್ಮಶಾಲಿ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಅತಿಥಿ ಗಣ್ಯರುಗಳಿಗೆ ಪುಷ್ಪ ಹಾಗು ಸಾಲು ಹಾಕಿ ಪ್ರಸಾದ ನೀಡಿ ಗೌರವಿಸಲಾಯಿತು. ಅತಿಥಿ ಗಣ್ಯರಾದ ಧರ್ಮದರ್ಶಿ ಅಶೋಕ್ ಶೆಟ್ಟಿ ಯವರು ಮಾತನಾಡುತ್ತ 47 ವಾರ್ಷಿಕ ಭಜನಾ ಮಂಗಲೋತ್ಸವ ಹಾಗು ಏಕಾಹ ಭಜನೆ ಗೆ ಶುಭಾಶಯ ಕೋರುತ್ತಾ ಒಂದು ಸಂಸ್ಥೆಯಲ್ಲಿ 47 ವರ್ಷ ಕಾರ್ಯಕಾರಿ ಸಮಿತಿ ಯೊಂದಿಗೆ ಕಾರ್ಯಕ್ರಮ ನೆರವೇರಿಸಿದು ಸುಲಭದ ಕೆಲಸವಲ್ಲ ಇಂತಹ ದೇವತಾ ಕಾರ್ಯಕ್ರಮ ನಿರಂತರ ನೆರವೇರಲಿ ಎಂದು ಪ್ರಾರ್ಥಿಸಿದರು. ಇನೋರ್ವ ಅತಿಥಿ ಗಣ್ಯರಾದ ಶ್ರೀಯುತ ರಾಜೇಶ್ ಕೋಟ್ಯಾನ್ ಮಾತನಾಡುತ್ತ ಡೊಂಬಿವಲಿ ಪರಿಸರದಲ್ಲಿ ಮಹಾವಿಷ್ಣು ಮಂದಿರ ಪ್ರಪ್ರಥಮವಾಗಿ ದಾಸರ ಭಜನಾ ಸ್ಪರ್ಧೆ ನಡೆಸಿದೆ ಹಾಗೂ ಇಂದಿಗೆ 5ನೇ ವರ್ಷದ ಏಕಾಹ ಭಜನೆ ನಡೆಯುತ್ತಿದೆ ಎಂದು 47 ನೇ ವರ್ಷದ ಮಂಗಲೋತ್ಸವಕ್ಕೆ ಶುಭ ಕೋರಿದರು. ಏಕಾಹ ಭಜನಾ ಕಾರ್ಯಕ್ರಮದಲ್ಲಿ ಸ್ಥಳೀಯ ಮಂಡಳಿಯೊಂದಿಗೆ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಡೊಂಬಿವಲಿ, ಶ್ರೀ ಜಗದಂಬ ಮಂದಿರ ಡೊಂಬಿವಲಿ, ತುಳು ವೆಲ್ಫೇರ್ ಅಸೋಸಿಯೇಷನ್ ಸಂಚಾಲಕತ್ವದ ಶ್ರೀ ಲಕ್ಷ್ಮಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ, ಶ್ರೀ ವಿಠ್ಠಲ ಭಜನಾ ಮಂಡಳಿ ಮೀರಾ ರೋಡ್, ಬಿಲ್ಲವರ ಅಸ್ಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ, ಶ್ರೀ ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಪೂರ್ವ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ, ಶ್ರೀ ಅಮೃತೆಶ್ವರಿ ಭಜನಾ ಮಂಡಳಿ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್, ಶ್ರೀ ಕಲ್ಕಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್, ಶ್ರೀ ಶನೀಶ್ವರ ದೇವಸ್ಥಾನ ನೆರೋಲ್ , ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ, ಯಶಸ್ವಿ ಭಜನಾ ಮಂಡಳಿ , ಡೊಂಬಿವಲಿ, ಅಮೃತಾನಂದಮಯಿ ಭಜನಾ ಮಂಡಳಿ, ಡೊಂಬಿವಲಿ , ಅಯ್ಯಪ ಭಕ್ತ ಭಜನಾ ಮಂಡಳಿ, ಡೊಂಬಿವಲಿ , ಶಬರಿ ಭಜನಾ ಮಂಡಳಿ , ಡೊಂಬಿವಲಿ, ಸದ್ಗುರು ಕೃಷ್ಣ ಭಜನಾ ಮಂಡಳಿ, ವಿಲೇ ಪಾರ್ಲೆ, ನಿತ್ಯಾನಂದ ಚಾಮುಂಡೇಶೆಯೇರಿ ಭಜನಾ ಮಂಡಳಿ, ಸಾಕಿನಾಕಾ, ಫ್ರೆಂಡ್ಸ್ ಸ್ವಾವಲಂಬನ ಭಜನಾ ಮಂಡಳಿ, ಕರ್ನಾಟಕ ಸಂಘ – ಡೊಂಬಿವಲಿ , ನವೋದಯ ಕನ್ನಡ ಸೇವಾ ಸಂಘ, ಥಾಣೆ, ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ,ಫೋರ್ಟ್ , ಮುಂತಾದ ಭಜನಾ ಮಂಡಳಿಗಳು ಭಜನಾ ಸೇವೆಯನ್ನು ನೀಡಿ ಸಹಕರಿಸಿದರು. ಭಜನಾ ಮಂಗಲೋತ್ಸವಕ್ಕೆ ಧನ ಹಾಗೂ ವಸ್ತು ರೂಪದಲ್ಲಿ ಸಹಕರಿಸಿದವರಿಗೆ ಶಾಲು ಹಾಗು ಪ್ರಸಾದ ನೀಡಿ ಗೌರವಿಸಲಾಯಿತು, ಮಂದಿರ ದ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಪರಿವಾರ ದೇವರಿಗೆ ಬಂಗಾರದ ಮುಕುಟವನ್ನು ಹರಕೆಯ ರೂಪದಲ್ಲಿ ಸಮರ್ಪಿಸಿದರು. ಮಧ್ಯಾಹ್ನ ಹಾಗು ರಾತ್ರಿ ಅನ್ನದಾನ ಸೇವೆಯು ನೆರವೇರಿತು. ಈ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆಯಾ ಪದಾಧಿಕಾರಿಗಳು , ಗಣ್ಯರು, ಭಕ್ತಾದಿಗಳು ಹಾಗು ಮಂದಿರದ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ರವಿವಾರ ಬೆಳಿಗ್ಗೆ ಕಾರ್ಯಕ್ರಮದ ಕೊನೆಯಲ್ಲಿ ದೇವರಿಗೆ ಮಹಾ ಮಂಗಳಾರತಿ ನೆರವೇರಿತು ಹಾಗು ಏಕಾಹ ಭಜನೆಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಮಂದಿರದ ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಜಿ. ಪೂಜಾರಿ ಧನ್ಯವಾದ ಸಮರ್ಪಿಸಿದರು.

.

.

.



Related posts

ಬಂಟರ ಸಂಘ ಮುಂಬಯಿ – ವಸಯಿ ಡಹಣು ಪ್ರಾದೇಶಿಕ ಸಮಿತಿಯ ವತಿಯಿಂದ ವಿಶ್ವ ಯೋಗ ದಿನಾಚರಣೆ. 

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ ಅಚರಣೆ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶರಣ್ಯ ಪೈ ಶೇ 83.2 ಅಂಕ.

Mumbai News Desk

ವಿದ್ಯಾವಿಹಾರ್ ಪಶ್ಚಿಮದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ಪ್ರದಾನ, ಪಂಚವಟಿ ತಾಳಮದ್ದಳೆ ಹಾಗೂ ಸನ್ಮಾನ

Mumbai News Desk

ತುಳು ವೆಲ್‌ಫೇರ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಹಳದಿ ಕುಂಕುಮ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ ಪುರಂದರದಾಸರ ಭಜನಾ ಸ್ಪರ್ಧೆ

Mumbai News Desk