
ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ದೊಂಬಿವಿಲಿ ಸ್ಥಳೀಯ ಕಛೇರಿಯ ಸಭಾಗೃಹದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಬಹಳ ವಿಜಂಭಣೆಯಿಂದ ಜರುಗಿತು.
ಪ್ರಥಮವಾಗಿ ಪುರೋಹಿತ ಐತಪ್ಪ ಸುವರ್ಣರು ಧಾರ್ಮಿಕ ವಿಧಿ ವಿಧಾನಗಳಿಂದ ಗುರುಪೂಜೆಯನ್ನು ನೆರವೇರಿಸಿದರು. ತದ ನಂತರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್ , ಗೌರವ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಮಹಿಳಾ ವಿಭಾಗದ ಸದಸ್ಯರು ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ತೇಜವತಿ ಎಂ. ಕೋಟ್ಯಾನ್ (ವೈಸ್ ಪ್ರಿನ್ಸಿಪಾಲ್ ಜನ ಗಣ ಮನ ವಿದ್ಯಾ ಮಂದಿರ) ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತದನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಸಂಜೀವ ಪಾಲನ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾಕ್ಟರ್ ತೇಜಾವತಿ ಎಂ ಕೋಟ್ಯಾನ್ , ಗೌರವ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಲಾದ ಶ್ರೀಧರ್ ಅಮೀನ್ ಮತ್ತು ಪುರಂದರ ಪೂಜಾರಿ , ಗೌ. ಕೋಶಾಧಿಕಾರಿ ಆನಂದ್ ಡಿ. ಪೂಜಾರಿ , ಮಹಿಳಾ ಸಮಿತಿ ಸದಸ್ಯರು ಶ್ರೀಮತಿ ಗುಣವತಿ ಪೂಜಾರಿ ಮತ್ತು ಶ್ರೀಮತಿ ಸುಲೋಚನಾ ಪೂಜಾರಿ ಹಾಗೂ ಉಪ ಕಾರ್ಯದರ್ಶಿ ಕೃಷ್ಣ ಎಲ್ ಪೂಜಾರಿಯವರು ಉಪಸ್ಥಿತರಿದ್ದರು.
ಶ್ರೀಮತಿ ವಸಂತಿ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಹಾಗೂ ಸಭಾಗ್ರಹದಲ್ಲಿ ನೆರೆದ ಸಮಾಜ ಬಾಂಧವರನ್ನು ಸ್ವಾಗತಿಸಿದರು. ಶ್ರೀಮತಿ ಗುಣವತಿ ಪೂಜಾರಿ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ ಪುಷ್ಪ ಗುಚ್ಚ ಹಾಗೂ ಸ್ಮರಣ ಫಲಕ ನೀಡಿ ಗೌರವಿಸಿದರು.
ಶ್ರೀಮತಿ ದೇವಿಕಾ ಸಾಲಿಯಾನ್ ಹಳದಿ ಕುಂಕುಮದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು.
ಶ್ರೀ ದೇವರಾಜ್ ಪೂಜಾರಿಯವರು ನೆರದ ಎಲ್ಲರಿಗೂ ಶುಭಾಶಯ ತಿಳಿಸಿದರು.
ಮುಖ್ಯ ಅತಿಥಿ ಡಾಕ್ಟರ್ ತೇಜವತೀ ಕೋಟ್ಯಾನ್ ರವರು ಮಹಿಳೆಯರಿಗೆ ತಮ್ಮ ಮಕ್ಕಳು ಮತ್ತು ಪತಿಯೊಂದಿಗೆ ಹೇಗೆ ಜೀವನ ನಡೆಸ ಬೇಕು ಹಾಗೂ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಹೇಗೆ ನಿಭಾಯಿಸಬೇಕು ಎಂದು ವಿಸ್ತಾರವಾಗಿ ತಿಳಿಸಿ , ತಮ್ಮ ಮನಸ್ಸನ್ನು ಹೇಗೆ ಶಾಂತ ರೀತಿಯಲ್ಲಿ ಹಿಡಿತದಲ್ಲಿ ಇಟ್ಟುಕೊಳ್ಳಲು ಕೆಲವು ಯೋಗ ಮಾಡಿಸಿದರು. ಹಾಗೂ ಈ ವೇದಿಕೆ ಕಲ್ಪಿಸಿಕೊಟ್ಟ ಕಾರ್ಯಧ್ಯಕ್ಷರಿಗೆ ಹಾಗೂ ಸಂಸ್ಥೆಗೆ
ಕೃತಜ್ಞತೆ ಸಲ್ಲಿಸಿದರು.




ಈ ದೇಣಿಗೆ ನೀಡಿ ಸಹಕರಿಸಿದ ಶ್ರೀಮತಿ ವೀಣಾ ಚಂದ್ರಹಾಸ್ ಪಾಲನ್, ಶ್ರೀಮತಿ ಚಾಂದಿನಿ ರಾಮಚಂದ್ರ ಬಂಗೇರ, ಶ್ರೀಮತಿ ಕುಶ ರವಿ ಸನಿಲ್, ಶ್ರೀಮತಿ ಸೌಜನ್ಯಾ ಸತೀಶ್ ಕೋಟ್ಯಾನ್, ಶ್ರೀಮತಿ ಸರೋಜಾ ಪೂಜಾರಿ, ಶ್ರೀಮತಿ ಸುಜಾತ ವಿಠ್ಠಲ್ ಅಮೀನ್ ಹಾಗೂ ದೇಣಿಗೆ ನೀಡಿದ ಎಲ್ಲರಿಗೂ ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು. ಹಾಗೂ ಮಹಿಳೆಯರಿಗೆ ಗಾಜಿನ ಬಳೆಯನ್ನು ಶ್ರೀಮತಿ ಸುಪ್ರಿಯಾ ಸಚಿನ್ ಪೂಜಾರಿ, ಎಳ್ಳಿನ ಉಂಡೆಯನ್ನು ಶ್ರೀಮತಿ ದೇವಿಕಾ ಕೆ. ಸಾಲಿಯಾನ್, ಗುಲಾಬಿ ಹೂಗಳನ್ನು ಶ್ರೀಮತಿ ಪ್ರೇಮಾ ಕೃಷ್ಣ ಪೂಜಾರಿ , ಫೋಟೋಗ್ರಫಿಯನ್ನು ಶ್ರೀಯುತ ಧನಂಜಯ್ ಪೂಜಾರಿಯವರು ನೀಡಿ ಸಹಕರಿಸಿದರು.
ಶ್ರೀಯುತ ಚಂದ್ರಹಾಸ್ ಪಾಲನ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮುಖ್ಯ ಅತಿಥಿಗಳ ಗುಣಗಾನ ಮಾಡುತ್ತ ಇಂದು ಮೇಡಂ ತೇಜಾವತೀ ಅತಿಥಿಯಾಗಿ ಬಂದು ಮಹಿಳೆಯರಿಗೆ ಉತ್ತಮ ಮಾರ್ಗದರ್ಶನ ನೀಡಿದಿರಿ, ನಿಮ್ಮಿಂದ ಈ ದಿನದ ಕಾರ್ಯಕ್ರಮಕ್ಕೆ ಸೊಬಗು ಬಂದಿದೆ ಎಂದರು.
ಶ್ರೀಮತಿ ಸುಲೋಚನಾ ಪೂಜಾರಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರೆ ಮಹಿಳಾ ವಿಭಾಗದ ಸದಸ್ಯೆ ಶ್ರೀಮತಿ ವಿನೋದ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಚಂದ್ರಹಾಸ್ ಪಾಲನ್, ಮುಖ್ಯ ಅತಿಥಿ ಡಾಕ್ಟರ್ ತೆಜಾವತೀ ಕೋಟ್ಯಾನ್, ಸಮಿತಿ ಸದಸ್ಯರಿಗೆ, ಮಹಿಳಾ ವಿಭಾಗ, ಯೂತ್ ಸದಸ್ಯರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಬಳಿಕ ಸಭೆ ಮುಕ್ತಾಯವಾಯಿತು.
ಮಹಿಳೆಯರು ಹಳದಿ ಕುಂಕುಮ ವಿನಿಮಯಿಸಿ ಸಂಭ್ರಮಿಸಿದರು.
ಎಲ್ಲರಿಗೂ ಸಂಸ್ತೆಯ ವತಿಯಿಂದ ಬಾಗಿನ ನೀಡಲಾಯಿತು.
ಕೊನೆಯಲ್ಲಿಎಲ್ಲರಿಗೂ ಸಿಹಿ ತಿಂಡಿ ಹಾಗೂ ಲಘು ಉಪಹಾರ ನೀಡಲಾಯಿತು.