
ಮುಂಬಯಿ ಪೆ : ಗೋರೆಗಾಂವ್ ಪೂರ್ವದ ಸಹಕಾರ್ ವಾಡಿ, ವಿರ್ವಾಣಿ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ನಿತ್ಯಾನಂದ ಆಶ್ರಮದ 59ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ ಕಾರ್ಯಕ್ರಮ ಜ. 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು,
. ಜ. 24ರಂದು ಬೆಳಿಗ್ಗೆ ಎಕಹಾ ಭಜನಾ ಉದ್ಘಾಟನೆ ಗೊಂಡು, ದಿನಪೂರ್ತಿ ಏಕಹಾ ಭಜನೆ ಕಾರ್ಯಕ್ರಮಗಳು ನಡೆದವು ಅಪಾರ ಜನ ಗುರುಭಕ್ತರು ಆಗಮಿಸಿ ಭಜನೆಯಲ್ಲಿ ಪಾಲ್ಗೊಂಡರು
, ಜ 25ರಂದು ಬೆಳಿಗ್ಗೆ ಏಕಹಾ ಭಜನೆ ಮಂಗಳೋತ್ಸವ ನಡೆದ ಬಳಿಕ ಮೂರ್ತಿ ಅಭಿಷೇಕ ಮತ್ತು ಪಾದುಕ ಪೂಜೆ ಭಜನೆ ಸಂಕೀರ್ತನ, ಮಂಗಳಾರತಿ ನಡೆಯಿತು.

ಮಧ್ಯಾಹ್ನ ಮಹಾಪ್ರಸಾದ ಭೋಜನ ಅನ್ನ ಸಂತರ್ಪಣೆ,ಯ ರವೀಂದ್ರ ಸುಂದರ್ ಶೆಟ್ಟಿ ಮತ್ತು ಸಹೋದರರು ಹಾಗೂ ಪರಿವಾರ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು,
ಸಂಜೆ ಶ್ರೀ ಸತ್ಯ ನಾರಾಯಣ ಮಹಾಪೂಜಾ ಯಬಳಿಕ ತುಳು ಯಕ್ಷಗಾನ “ಮೈಮೆದಪ್ಪೆ ಮಂತ್ರದೇವತೆ” (ಗುರು ನಾರಾಯಣ ಯಕ್ಷಗಾನ ಮಂಡಳಿ ಇವರಿಂದ) ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ. ನಡೆಯಿತು, ಮಧ್ಯಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಮಾಜ ಸೇವಕ ರವೀಂದ್ರ ಸುಂದರ ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾದರ ಜೆ. ಪೂಜಾರಿ, ಮಾಜಿನಗರ ಸೇವಕ ಸ್ವಪ್ನಿಲ್ ತೆಂಬಾವಲ್ಕರ್,ಸುಭಾಷ್ ಜಯ ಸುವರ್ಣ,’ ವಕೀಲ ಎಸ್.ಬಿ.ಅಮೀನ್. ,ಉದ್ಯಮಿ ಬಾಬುಬಾಯಿ ರಾತೊರ್, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ ಮೂಲ್ಯ ಪದ್ಯ ಬೆಟ್ಟು,ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುನಿಲ್ ಸಾಲಿಯಾನ್ ‘ ,ಮಾಜಿ ಕಾರ್ಪೊರೇಟರ್‌ಗಳು ದ ಸ್ವಪ್ನಿಲ್ ತೆಂಬಾವಲ್ಕರ್, ವರ್ಷಾ ತೆಂಬಾವಲ್ಕರ್’ ಉಪಸ್ಥಿತರಿದ್ದ ಮಂದಿರದಲ್ಲಿ ವಿಶೇಷ ಸೇವೆ ಮಾಡಿದ ಸೇವಕರನ್ನು ಗೌರವಿಸಿದರು,. ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಪೂಜಾರಿ, ಅಧ್ಯಕ್ಷರಾದ ರಘು ಮೂಲ್ಯ ಮುಖ್ಯ ಸಂಚಾಲಕರಾದ ಡಾ. ಶೈಲೇಶ್ ಜಿ, ಉಪಾಧ್ಯಕ್ಷ ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲ್ಯಾನ್, ಕೋಶಾಧಿಕಾರಿ ಗಣೇಶ್ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತಾ ಜೆ ಕೋಟ್ಯಾನ್ ಹಾಗೂ ಸಮಿತಿಯ ಮತ್ತು ಉಪಸಮಿತಿಗಳ ಸರ್ವ ಸದಸ್ಯರು ಪಾಲ್ಗೊಂಡ ಭಕ್ತರಿಗೆ ಪ್ರಸಾದವನ್ನು ನೀಡಿ ಹಾರೈಸಿದರು.