31 C
Mumbai
June 8, 2026
Mumbai News Kannada
ಮುಂಬಯಿ

ಡಾ. ಪ್ರಾಜ್ಞಾ ಸಾಲ್ಯಾನ್ . ಎಂ. ಡಿ. ಎಸ್. ನಲ್ಲಿ ಉನ್ನತ ಸಾಧನೆ





ಮುಂಬಯಿ: ಡಿ. 14 – ದಂತ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ಪದವಿ (ಎಂ.ಡಿ.ಎಸ್.) ಪರೀಕ್ಷೆಯಲ್ಲಿ ದಂತ ವೈದ್ಯೆ ಡಾ. ಪ್ರಾಜ್ಞಾ ಸಾಲ್ಯಾನ್ ಅವರು ಅತ್ಯುನ್ನತ ಸಾಧನೆ ಮಾಡಿದ್ದಾರೆ.

​ಮುಂಬಯಿಯ ಪ್ರತಿಷ್ಠಿತ ಸರ್ಕಾರಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ (GDC&H) ಯಲ್ಲಿ ‘ಪ್ರೊಸ್ತೋಡೊಂಟಿಕ್ಸ್’ (Prosthodontics) ವಿಷಯದಲ್ಲಿ ಡಾ. ಪ್ರಾಜ್ಞಾ ಅವರು ದ್ವಿತೀಯ ರ‍್ಯಾಂಕ್ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.

​ಅಲ್ಲದೆ, ಮಹಾರಾಷ್ಟ್ರ ರಾಜ್ಯದ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವಾದ ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (MUHS) ನಡೆಸಿದ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಇವರು ನಾಲ್ಕನೇ ರ‍್ಯಾಂಕ್ ಗಳಿಸುವ ಮೂಲಕ ತಮ್ಮ ಶೈಕ್ಷಣಿಕ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

​ಡಾ. ಪ್ರಾಜ್ಞಾ ಸಾಲ್ಯಾನ್ ಅವರು ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನೆಲೆಸಿರುವ ಉದ್ಯಮಿ ಶ್ರೀ ರಾಮನಾಥ್ ಸಾಲ್ಯಾನ್ ಮತ್ತು ಶ್ರೀಮತಿ ನಿರ್ಮಲಾ ಆರ್. ಸಾಲ್ಯಾನ್ ದಂಪತಿಯ ಸುಪುತ್ರಿ. ಈ ಉನ್ನತ ಸಾಧನೆಗಾಗಿ ಅವರಿಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.



Related posts

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಅದ್ದೂರಿಯ ಬೆಳ್ಳಿ ಹಬ್ಬ ಸಮಾರಂಭ

Mumbai News Desk

84 ವರ್ಷಗಳ ಇತಿಹಾಸವುಳ್ಳಹಿರಿಯ ಜಾತೀಯ ಸಂಸ್ಥೆ ಸಾಫಲ್ಯ ಸೇವಾ ಸಂಘದ 70 ನೇ ವಾರ್ಷಿಕ ಮಹಾಸಭೆ.

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ, ಸಾಧಕರಿಗೆ ಸನ್ಮಾನ

Mumbai News Desk

ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ – ಪುಣ್ಯ ಕ್ಷೇತ್ರಗಳಿಗೆ ಧಾರ್ಮಿಕ ಯಾತ್ರೆ

Mumbai News Desk

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, 88 ನೇ ವಾರ್ಷಿಕೋತ್ಸವ

Mumbai News Desk