
ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ, ಜರಿಮರಿ ಮುಂಬಯಿ ಇವರು ಸತತ 9 ನೇ ವರ್ಷದ ತಿರುಪತಿ ಯಲ್ಲಿ ಹರಿನಾಮ ಸಂಕೀರ್ತನೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಲ ತಾರೀಕು 8,9 ಹಾಗೂ 10 ರಂದು ತಿರುಪತಿ, ತಿರುಮಲ ದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಭಜನ ಸೇವೆ ನಡೆಸಿ ಕೊಡಲಿದ್ದಾರೆ.
ಸುಮಾರು 20 ಸದಸ್ಯರ ತಂಡ ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ಈ ಭಜನ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಇವರಿಗೆ ಮಂದಿರದ ಮೊಕ್ತೇಸರ ರಾದ ಶ್ರೀಮತಿ ಲಲಿತ ಬಿ ಕೆ ಶೀನ, ಪ್ರದಾನ ಅರ್ಚಕ ಎಸ್. ಎನ್. ಉಡುಪ, ಹಾಗೂ ಮಂದಿರದ ಹಿರಿಯರಾದ ಬಿ. ಎನ್. ಶೆಟ್ಟಿ ಯವರು ಶುಭ ಕೋರಿದ್ದಾರೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.